ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಫ್ ಕ್ಲಬ್ ಸ್ಥಳಾಂತರಕ್ಕೆ ಅಂಬರೀಷ್ ವಿರೋಧ

By Mahesh
|
Google Oneindia Kannada News

ಬೆಂಗಳೂರು, ಜು.18: ಬೆಂಗಳೂರು ಟರ್ಫ್ ಕ್ಲಬ್ 'ಸಾರ್ವಜನಿಕ ಆಸ್ತಿ' ಯಾಗಿದೆ. ಇದನ್ನು ದೊಡ್ಡಜಾಲ ಅಥವಾ ಚಿಕ್ಕಜಾಲಕ್ಕೆ ಸ್ಥಳಾಂತರಿಸುವುದು ಸರಿಯಲ್ಲ ಎಂದು ವಿಧಾನಸಭೆಯಲ್ಲಿ ಗುರುವಾರ ವಸತಿ ಸಚಿವ ಅಂಬರೀಷ್ ಅವರು ಗುಡುಗಿದ್ದಾರೆ.

ಸಿನಿಮಾದಲ್ಲಿ ಚಪ್ಪಾಳೆ ಗಿಟ್ಟಿಸುವಂತೆ ಡೈಲಾಗ್ ಡೆಲವರಿ ಮಾಡಿ ರೆಬಲ್ ಸ್ಟಾರ್ ಅಂಬರೀಷ್ ವಿಧಾನಸಭೆಯಲ್ಲೂ ತಮ್ಮ ಮಾತಿನ ವೈಖರಿಯಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಗುರುವಾರ ಸದನದಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಸ್ಥಳಾಂತರದ ವಿಷಯ ಪ್ರಸ್ತಾಪಿಸಿದ ಅಂಬರೀಷ್ ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ತಡೆಗಟ್ಟಬೇಕು ಎಂದರು.

ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ನಲ್ಲಿ ರೇಸ್ ಡೇ ಇರುವ ದಿನಗಳಲ್ಲಿ ಸಂಚಾರ ದಟ್ಟಣೆಯಿಂದ ಭಾರಿ ತೊಂದರೆಯುಂಟಾಗುತ್ತದೆ. ಆದ್ದರಿಂದ ಟರ್ಫ್ ಕ್ಲಬ್ ಸ್ಥಳಾಂತರ ಸೂಕ್ತ ಎಂಬ ನಿರ್ಣಯವನ್ನು ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಕೈಗೊಂಡಿತ್ತು. ಇದಕ್ಕೆ ಹೈಕೋರ್ಟ್ ಕೂಡ ಹಸಿರು ನಿಶಾನೆ ತೋರಿಸಿತ್ತು. ನಂತರ ಚರ್ಚೆ ನಡೆಸದೆ ಸದನದಿಂದ ಅಂಬರೀಷ್ ಹೊರನಡೆದ ಘಟನೆ ನಡೆಯಿತು.

ಅಂಬರೀಷ್ ಅವರು ಬೆಂಗಳೂರು ಟರ್ಫ್ ಕ್ಲಬ್ ಸದಸ್ಯರಾಗಿದ್ದು, ರೇಸ್ ಡೇ ದಿನ ತಪ್ಪದೇ ಹಾಜರಿರುತ್ತಾರೆ. ರೇಸ್ ಕುದುರೆಗಳ ಮಾಲೀಕ ಕೂಡಾ ಎಂಬುದು ಇಲ್ಲಿ ಗಮನಾರ್ಹ ಸಂಗತಿ

Minister Ambareesh opposes Bangalore Turf Club shift

ನಗರದ ಹೊರ ವಲಯದಲ್ಲಿರುವ ದೊಡ್ಡಜಾಲದ ಅಮಾನಿಕೆರೆಗೆ ಸ್ಥಳಾಂತರಿಸಲು ಹೈಕೋರ್ಟ್ ನ್ಯಾಯಮೂರ್ತಿ ಯಾಯಮೂರ್ತಿ ವಿ ಗೋಪಾಲಗೌಡ ಅವರು ಸೂಚಿಸಿದ್ದರು. ಆದರೆ, ನೂರು ವರ್ಷ ಇತಿಹಾಸವುಳ್ಳ ಟರ್ಫ್ ಕ್ಲಬ್ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಹಾಗೂ ಮೂಲ ಸೌಕರ್ಯ ನಿರ್ಮಾಣ ಮಾಡಲು ಕನಿಷ್ಠವೆಂದರೂ ನಾಲ್ಕೂವರೆ ವರ್ಷ ಬೇಕಾಗುತ್ತದೆ ಎಂದು ಬೆಂಗಳೂರು ಟರ್ಫ್ ಕ್ಲಬ್ ಪಟ್ಟು ಹಿಡಿದಿತ್ತು.

ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ನೌಕರರಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಟರ್ಫ್ ಕ್ಲಬ್ ಸುಮಾರು 73.35 ಎಕರೆ ವಿಸ್ತೀರ್ಣದ ಪ್ರದೇಶವನ್ನು ಹೊಂದಿದೆ.

ಕ್ಲಬ್ ಲೀಸ್ ರಗಳೆ: ಕುದುರೆ ರೇಸ್ ಗಾಗಿ 1923ರಲ್ಲಿ 74 ಎಕರೆ ಜಮೀನು ಅಂದರೆ 37 ಲಕ್ಷ 17 ಸಾವಿರದ 995 ಚದರ ಅಡಿ ಜಮೀನನ್ನು ಲೀಸ್ ಗೆ ತೆಗೆದುಕೊಳ್ಳಲಾಗಿತ್ತು. ಆದರೆ, 1968ರ ನವೆಂಬರ್ 3 ವರೆಗೂ ಒಂದು ನಯಾಪೈಸೆ ಯನ್ನು ಟರ್ಫ್ ಕ್ಲಬ್ ಸರ್ಕಾರಕ್ಕೆ ಕಟ್ಟಿಲ್ಲ.

ಟರ್ಫ್ ಕ್ಲಬ್ ಲೀಸ್ ಸಂಬಂಧ ಸಿಎಜಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಬೆಂಗಳೂರು ಹೃದಯ ಭಾಗದಲ್ಲಿರುವ ಕೋಟ್ಯಂತರ ಬೆಲೆಬಾಳುವ ಭೂಮಿ ಅನಿಯಂತ್ರಿತ ಲೀಸ್‌ನಿಂದ 1989 ರಿಂದ 2009ರ ವರೆಗೂ ಸರ್ಕಾರಕ್ಕೆ ರು. 524 ಕೊಟಿ ನಷ್ಟವಾಗಿದೆ ಸಿಎಜಿ ವರದಿ ತಿಳಿಸಿತ್ತು. 21 ವರ್ಷಗಳ ಅವಧಿಯಲ್ಲಿ ವಾರ್ಷಿಕ ರು. 50 ಸಾವಿರ ಎಂದರೆ ಪ್ರತಿ ಚದರ ಅಡಿಗೆ 0.92 ನಯಾ ಪೈಸೆ ಮಾತ್ರ ಕಟ್ಟಲಾಗಿದೆ ಎನ್ನುವ ಅಂಶವನ್ನು ಸಿಎಜಿ ವರದಿ ಬಹಿರಂಗಪಡಿಸಿತ್ತು.

English summary
Karnataka Assembly update: Karnataka housing minister MH Ambareesh today opposed High court order to shift Bangalore Turf Club to Doddajala in the outskirts of the Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X