ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ವರ ಬಲಿ ಪಡೆದ ಕೃಷ್ಣಪ್ಪ ಕೋರ್ಟ್ ಗೆ ಶರಣು

|
Google Oneindia Kannada News

Parappana Agrahara
ಬೆಂಗಳೂರು, ಜು.18 : ಕುಡಿದ ಅಮಲಿನಲ್ಲಿ ಕಾರು ಓಡಿಸಿ, ನಾಲ್ವರು ಅಮಾಯಕರ ಸಾವಿಗೆ ಕಾರಣವಾದ ಬೊಮ್ಮನಹಳ್ಳಿ ನಗರಸಭೆ ಮಾಜಿ ಅಧ್ಯಕ್ಷ ಕೃಷ್ಣಪ್ಪ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರು ಡಿಕ್ಕಿ ಹೊಡೆಸಿ ನಾಲ್ವರ ಪ್ರಾಣ ತೆಗೆದ ನಂತರ ಪರಾರಿಯಾಗಿದ್ದ ಕೃಷ್ಣಪ್ಪ ಬುಧವಾರ ಸಂಜೆ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯದ ಮುಂದೆ ಶರಣಾದರು. ಕೂಡಲೇ ನ್ಯಾಯಾಲಯ ಪೊಲೀಸರನ್ನು ಕರೆಸಿ, ಕೃಷ್ಣಪ್ಪ ಅವರನ್ನು ಜು.27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಕೃಷ್ಣಪ್ಪ ಅವರನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಕೃಷ್ಣಪ್ಪ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪೊಲೀಸರಿಗೆ ಚಳ್ಳೆಹಣ್ಣು : ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದ ಕೃಷ್ಣಪ್ಪ ಒಂದು ದಿನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಬುಧವಾರ ಕೃಷ್ಣಪ್ಪ ಶರಣಾಗತಿ ಮುನ್ಸೂಚನೆ ಅರಿತ ಪೊಲೀಸರು ನ್ಯಾಯಾಲಯದ ಆವರಣದಲ್ಲಿದ್ದರು.

ಆದರೆ, ಅವರಿಗೆ ಚಳ್ಳೆಹಣ್ಣು ತಿನ್ನಿಸಿರುವ ಕೃಷ್ಣಪ್ಪ ನೇರವಾಗಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೃಷ್ಣಪ್ಪ ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಿ, ಹುಟುಕಾಟ ನಡೆಸಿದ್ದರು. (ವ್ಯಾಪಾರಿಗಳಿಗೆ ಕಾರು ಡಿಕ್ಕಿ ನಾಲ್ವರ ಸಾವು)

ರೆಸಾರ್ಟ್ ನಲ್ಲಿ ವಿಶ್ರಾಂತಿ : ಕಾರು ಅಪಘಾತದ ನಂತರ ತಲೆಮರೆಸಿಕೊಂಡಿದ್ದ ಕೃಷ್ಣಪ್ಪ, ನಗರ ಹೊರವಲಯ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರೆಸಾರ್ಟ್‌ನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸಿದ ಬಳಿಕ ಬುಧವಾರ ಸ್ನೇಹಿತರ ಕಾರಿನಲ್ಲಿ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

English summary
Krishanappa alias Bar Krishnappa, who allegedly drove an SUV onto a pavement at Parappana Agrahara on Monday night killing four people, surrendered before a City court on Wednesday, July 17 evening. The court remanded him in judicial custody till July 27. He was immediately shifted to Parappana Agrahara Central Prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X