ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಆಕ್ಷೇಪಕ್ಕೆ ಉಪೇಂದ್ರ ಪ್ರತಿಕ್ರಿಯೆ

By Mahesh
|
Google Oneindia Kannada News

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರದ ಪೋಸ್ಟರ್ ಗಳು ಕರ್ನಾಟಕ ಅಸೆಂಬ್ಲಿಯಲ್ಲೂ ಸದ್ದು ಮಾಡುತ್ತಿವೆ. ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರಮುಖ ವೀರಶೈವ ಮುಖಂಡರಾದ ಬಿಎಸ್ ಯಡಿಯೂರಪ್ಪ ಅವರು ಈ ಚಿತ್ರದ ಬಗ್ಗೆ ಚರ್ಚೆ ನಡೆಸಲು ಕೋರಿದ್ದಾರೆ.

ನಂತರ ಶೂನ್ಯವೇಳೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ವಿವಾದದ ಬಗ್ಗೆ ಸಭಾಪತಿ ಕಾಗೋಡು ತಿಮ್ಮಪ್ಪ ಅವರಿಗೆ ವಿವರಿಸಿದರು. ಶಾಂತಿ, ಧರ್ಮ, ಸಂಸ್ಕೃತಿ, ದಾರ್ಶನಿಕ ವ್ಯಕ್ತಿ ಬಸವಣ್ಣ ಅವರ ಹೆಸರನ್ನು ವಾಣಿಜ್ಯ ಸಿನಿಮಾಕ್ಕೆ ಬಳಸಲಾಗುತ್ತಿದೆ. ಸಮಾಜ ತಿದ್ದಿದ ಇಂಥ ವ್ಯಕ್ತಿ ಬಸವಣ್ಣ ವೇಷಧಾರಿ ಎಂಬಂತೆ ಬಿಂಬಿಸಿರುವುದು ಆಕ್ಷೇಪಾರ್ಹ ಎಂದರು.

ಈ ಬಗ್ಗೆ ಕನಿಷ್ಠ 1 ಗಂಟೆಯಾದರೂ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಕೇಳಿಕೊಂಡರು. ಇದಕ್ಕೆ ಸದನದಲ್ಲಿದ್ದ ಬಸವರಾಜ ಬೊಮ್ಮಾಯಿ ಸೇರಿದಂತೆ ಲಿಂಗಾಯತ ಮುಖಂಡರೆಲ್ಲರೂ ಒಕ್ಕೊರಲ ಬೆಂಬಲ ಸೂಚಿಸಿದರು.

ಬಸವಣ್ಣ ಚಿತ್ರದ ಪೋಸ್ಟರ್ ನಿಂದ ಏನು ಹಾನಿ ಎಂದು ಪ್ರಶ್ನಿಸಿದ ಸಭಾಪತಿ ಕಾಗೋಡು ತಿಮ್ಮಪ್ಪ ಅವರು ಒಂದರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಉಪೇಂದ್ರ ಅಭಿನಯದ ಬಸವಣ್ಣ ಸದನದಲ್ಲಿ ಸದ್ದು ಮಾಡಲಿದೆ.

ಶೂಟಿಂಗೂ ಮುನ್ನವೇ ಭಾರಿ ವಿವಾದ ಸೃಷ್ಟಿಸಿ, ಎಲ್ಲೆಡೆ ಸದ್ದು ಮಾಡಿರುವ ಚಿತ್ರ ರಿಯಲ್ ಸ್ಟಾರ್ ಉಪೇಂದ್ರ, ರಾಗಿಣಿ ದ್ವಿವೇದಿ ಅಭಿನಯದ 'ದಂಡುಪಾಳ್ಯ' ಖ್ಯಾತಿಯ ಶ್ರೀನಿವಾಸರಾಜು ನಿರ್ದೇಶನದ ಬಸವಣ್ಣ ಚಿತ್ರದ ವಿವಾದವಾದರೂ ಏನು? ಈ ಬಗ್ಗೆ ಯಡಿಯೂರಪ್ಪ ನೀಡಿದ ಪ್ರತಿಕ್ರಿಯೆ ಏನು? ಈ ಚಿತ್ರ ನಿಜಕ್ಕೂ ಭಕ್ತಿ ಭಂಡಾರಿ ಬಸವಣ್ಣ ಅವರನ್ನು ಅವಹೇಳನಕಾರಿಯಾಗಿ ತೋರಿಸುತ್ತಿದೆಯೆ? ಎಂಬ ಪ್ರಶ್ನೆಗೆ ಉತ್ತರ ಮುಂದೆ ಓದಿ...

ನನ್ನ ಚಿತ್ರವೇ ಏಕೆ?

ನನ್ನ ಚಿತ್ರವೇ ಏಕೆ?

ನಾರದ ಮುನಿ ಕುರಿತು ನಾರದ ವಿಜಯ ಸೇರಿ ಅನೇಕ ಚಿತ್ರಗಳು ಬಂದಿದೆ. ಯಮಧರ್ಮ ಕುರಿತ ಚಿತ್ರಗಳಿವೆ ಅದರ ಬಗ್ಗೆ ಯಾರು ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಕಠಾರಿವೀರ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ದೇವತೆಗಳನ್ನು ಕೆಟ್ಟದಾಗಿ ತೋರಿಸಿದ್ದೀರಾ ಎಂದರು.

ನೋಡಿ, ಬಸವಣ್ಣ ಚಿತ್ರದಿಂದ ಒಬ್ಬೇ ಒಬ್ಬ ವ್ಯಕ್ತಿಗೆ ನೋವುಂಟಾದರೆ ಚಿತ್ರದ ಶೀರ್ಷಿಕೆ ಬದಲಾಯಿಸುತ್ತೇವೆ. ಚಿತ್ರದಲ್ಲಿ ಯಾರಿಗೂ ಅಪಮಾನವಾಗುವ ಅಂಶಗಳಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಉಪೇಂದ್ರ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದರು.

* ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ, ಬಸವಣ್ಣ ಚಿತ್ರಕ್ಕೆ ಸಂಬಂಧಿಸಿದ್ದಲ್ಲ

ಪೋಸ್ಟರ್ ನಲ್ಲಿ ಏನಿದೆ?

ಪೋಸ್ಟರ್ ನಲ್ಲಿ ಏನಿದೆ?

ರಿಯಲ್ ಸ್ಟಾರ್ ಉಪೇಂದ್ರ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೈಯಲ್ಲಿ ರಕ್ತಸಿಕ್ತ ಖಡ್ಗ, ಜನಿವಾರ, ಹಣೆ ಹಾಗೂ ಕೈ ಮೇಲೆ ವಿಭೂತಿ ಪಟ್ಟೆಗಳು, ಕೊರಳು ಹಾಗೂ ಮಣಿಕಟ್ಟಿಗೆ ರುದ್ರಾಕ್ಷಿ ಮಾಲೆ ಇದೆ ಕಡುಗೆಂಪು ಕಚ್ಚೆಪಂಚೆ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ಪೋಸ್ಟರ್ ಧ್ಯಾನ ಮುದ್ರೆಯೊಂದಿಗೆ ಕುಳಿತ ವ್ಯಕ್ತಿ(ಹೀರೋ?) ಪಕ್ಕದಲ್ಲಿ ಗನ್ ಬಿದ್ದಿರುತ್ತದೆ. ಇದರ ಜೊತೆಗೆ ಚಿತ್ರದ ಶೀರ್ಷಿಕೆ ಕೂಡಾ ಆಕ್ಷೇಪಾರ್ಹವಾಗಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ಬಸವ ಚಿತ್ರವನ್ನು ನಮ್ಮ ಬಸವ ಎಂದು ಬದಲಾಯಿಸಲಾಗಿತ್ತು. ಈ ಚಿತ್ರವನ್ನು ವೀರ ಬಸವಣ್ಣ ಎಂದು ಮಾಡುವ ಸುದ್ದಿ ಹಬ್ಬಿದೆ.

ಬಿಎಸ್ ವೈ ಆಕ್ಷೇಪ

ಬಿಎಸ್ ವೈ ಆಕ್ಷೇಪ

ಜಗಜ್ಯೋತಿ ಬಸವಣ್ಣನಿಗೆ ಅವಮಾನ ಮಾಡಲಾಗಿದೆ. ಇಡೀ ಬಸವ ಅಭಿಮಾನಿಗಳಿಗೆ ಮಾಡಿರುವ ಅವಮಾನ. ಎಲ್ಲಾ ಸಮುದಾಯದವರು ಇದನ್ನು ಖಂಡಿಸಬೇಕು. ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇದು ಇಲ್ಲಿಗೆ ನಿಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಎಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಸಿದರು.
ಚಿತ್ರೀಕರಣ ಸಾಗಿದೆ

ಚಿತ್ರೀಕರಣ ಸಾಗಿದೆ

ಹೈದರಾಬಾದಿನ ಡಿಸೈನರ್ ಬಾಬಿ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ವಿನ್ಯಾಸ ಇದಾಗಿದೆ. ವಾರದ ಹಿಂದೆಯೇ ಈ ಈ ಗೆಟಪ್ ನಲ್ಲಿ ಉಪ್ಪಿ ಫೋಟೋ ಶೂಟಿಂಗ್ ಮಾಡಲಾಗಿತ್ತು. ಈಗ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಕಳೆದ ವಾರ ಸೆಟ್ಟೇರಿದ ಶ್ರೀನಿವಾಸರಾಜು ಅವರ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಜಾರಿಯಲ್ಲಿದೆ.

ಫಸ್ಟ್ ಲುಕ್ ನಲ್ಲೇ ವಿವಾದ

ಫಸ್ಟ್ ಲುಕ್ ನಲ್ಲೇ ವಿವಾದ

ಚಿತ್ರದಲ್ಲಿರುವ ಪೋಸ್ಟರ್ ನೊಂದಿಗೆ 'ಬಸವಣ್ಣ' ಚಿತ್ರದ ಫಸ್ಟ್ ಲುಕ್ ಬಸವ ಜಯಂತಿ (ಮೇ.13) ದಿನವೇ ಬಿಡುಗಡೆ ಮಾಡಲಾಗಿತ್ತು.

ಚಿತ್ರ ಸೆಟ್ಟೇರುವ ಮುನ್ನವೇ ವಿವಾದಕ್ಕೆ ಈಡಾಗಿತ್ತು. ಟಿವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ನಿರ್ದೇಶಕ ಶ್ರೀನಿವಾಸರಾಜು ತಮ್ಮ ಚಿತ್ರಕ್ಕೂ 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಜೀವನ ಚರಿತ್ರೆಗೂ ಸಂಬಂಧವಿಲ್ಲ ಎಂದಿದ್ದರು.
ನಿರ್ದೇಶಕರ ವಿ'ತಂಡ' ವಾದ

ನಿರ್ದೇಶಕರ ವಿ'ತಂಡ' ವಾದ

ಚಿತ್ರದಲ್ಲಿ ಗನ್, ಖಡ್ಗ ಇದ್ದ ಮಾತ್ರಕ್ಕೆ ಯಾಕೆ ತಪ್ಪಾಗಿ ಕಾಣಬೇಕು. ಶಿವ, ಗಣೇಶ, ಕೃಷ್ಣ ಎಂದಿಟ್ಟು ಅಲ್ಲೂ ಗನ್ ಮಚ್ಚು ಲಾಂಗು ಕೊಡಲ್ಲವೇ? ಹಾಗಂತ ಆ ಚಿತ್ರಗಳೆಲ್ಲವನ್ನೂ ತಪ್ಪು ಎಂದು ಹೇಳುವುದಕ್ಕೆ ಸಾಧ್ಯವೇ? ಚಿತ್ರದ ಶೀರ್ಷಿಕೆ ವಿವಾದ ಇದ್ದರೆ ಮಾತನಾಡಿ, ಕಥೆಯ ಬಗ್ಗೆ ಈಗಲೇ ಮಾತನಾಡುವುದು ಅಪ್ರಸ್ತುತ ಎಂದಿದ್ದಾರೆ.

ಶ್ರೀನಿವಾಸರಾಜು ಹೇಳಿಕೆ

ಶ್ರೀನಿವಾಸರಾಜು ಹೇಳಿಕೆ

ಉಪೇಂದ್ರ ಅವರ ಮಾಸ್ತಿ ಹೆಸರಿನ ಚಿತ್ರ ಮಸ್ತಿ ಯಾಗಿತ್ತು. ಸುದೀಪರ ಮದಕರಿ, ವೀರ ಮದಕರಿಯಾಯ್ತು ಹೀಗೆ ಅನೇಕ ಉದಾಹರಣೆಗಳು ಕಣ್ಮುಂದೆ ಇದೆ. ದಂಡುಪಾಳ್ಯ ಹೆಸರಿನ ಚಿತ್ರ ಕೂಡಾ ಊರಿನ ಹೆಸರು ಬೇಡ ಎಂದು ವಿವಾದ ಎಬ್ಬಿಸಿದ್ದರು. ಆದರೆ, ಅದಕ್ಕೆ ಸೂಕ್ತ ಉತ್ತರ ನೀಡಿದ್ದೇನೆ ಎಂದು ಶ್ರೀನಿವಾಸರಾಜು ಪ್ರತಿಕ್ರಿಯಿಸಿದ್ದಾರೆ.

English summary
Upendra Starrer Basavanna Movie posters irks former Chief Minister BS Yeddyurappa a prominent veerashaiva leader in Karnataka. Former Kannada and Culture Minister Govinda Karjol today requested Speaker in zero hour to give permission to hold discussion about the controversy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X