ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೌಚಾಲಯ ಸಮಸ್ಯೆಗೆ ಶೀಘ್ರವೇ ಸಲ್ಯೂಷನ್

By Mahesh
|
Google Oneindia Kannada News

Govt to unveil sanitation policy, build more toilets
ಬೆಂಗಳೂರು, ಜು.17: ನಗರದಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಶೌಚಾಲಯಗಳನ್ನು ನಿರ್ಮಾಣ ಮಾಡಲು ಶೀಘ್ರದಲ್ಲೇ ಶೌಚಾಲಯ ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ಇಂದು ಭರವಸೆ ಕೊಟ್ಟಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಈ ಮಾಹಿತಿ ನೀಡಿದ ಅವರು, ಈಗ ಬೆಂಗಳೂರು ನಗರದಲ್ಲಿ 547 ಸಾಮೂಹಿಕ ಶೌಚಾಲಯಗಳು ಕೆಲಸ ಮಾಡುತ್ತಿವೆ. ಬೆಂಗಳೂರು ನಗರ ದೊಡ್ಡದಾಗಿ ಬೆಳೆಯುತ್ತಿದೆ. ಶೌಚಾಲಯಗಳ ಸಂಖ್ಯೆ ಹೆಚ್ಚು ಮಾಡಬೇಕಾಗಿದೆ ಎಂಬುದು ಸರಿ. ಈ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು.

ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ರೋಷನ್ ಬೇಗ್ ಅವರು, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾದಷ್ಟು ಶೌಚಾಲಯಗಳು ಇಲ್ಲ. ಇದು ಬಹಳ ಅಗತ್ಯವಾಗಿ ಆಗಬೇಕಾಗಿದೆ. ಈಗಿರುವ 547 ಶೌಚಾಲಯಗಳ ಪೈಕಿ 200 ಮಾತ್ರ ಕೆಲಸ ಮಾಡುತ್ತಿವೆ, ಉಳಿದವೆಲ್ಲ ಮುಚ್ಚಿ ಹೋಗಿವೆ. ಆದ್ದರಿಂದ ಕನಿಷ್ಟ ಬೆಂಗಳೂರು ನಗರದಲ್ಲಿ ಐದು ಸಾವಿರ ಶೌಚಾಲಯಗಳನ್ನು ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.

6 ಲಕ್ಷ ಶೌಚಾಲಯ: ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಅಗತ್ಯತೆಯನ್ನು ಮನಗಂಡು ಇದೇ ಆರ್ಥಿಕ ವರ್ಷದೊಳಗಾಗಿ 6 ಲಕ್ಷ ಶೌಚಾಲಯ ನಿರ್ಮಿಸಲು ಸರ್ಕಾರ ನಿರ್ಣಯಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದರು.

ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಎರಡು ಕಮೋಡ್ ಸೌಲಭ್ಯವುಳ್ಳ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಈ ಶೌಚಾಲಯವನ್ನು ವೃದ್ಧರು, ಅಂಗವಿಕಲರು, ಅಶಕ್ತರ ಬಳಕೆಗೆ ಸೀಮಿತಗೊಳಿಸಲಾಗುವುದು ಎಂದು ಎಚ್ ಕೆ ಪಾಟೀಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿಂದೆ ಜಗದೀಶ್ ಶೆಟ್ಟರ್ ಸರ್ಕಾರ ಇದ್ದಾಗ ಇನ್ಫೋಸಿಸ್ ಸಂಸ್ಥೆ ಸಹಯೋಗದೊಂದಿಗೆ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಶೌಚಾಲಯ ಇಲ್ಲದ ಮನೆಗೆ ಹೆಣ್ಣು ಕೊಡಬೇಡಿ ಎಂದು ಶೆಟ್ಟರ್ ಸಲಹೆ ಕೂಡಾ ನೀಡಿದ್ದರು.

ಶೌಚಾಲಯ ನಿರ್ಮಾಣಕ್ಕಾಗಿ ತಲಾ 16 ರಿಂದ 18 ಸಾವಿರ ರೂ.ಅನ್ನು ಇನ್ಫೋಸಿಸ್ ವೆಚ್ಚ ಮಾಡುತ್ತಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ 3700 ರೂ. ನೀಡುತ್ತದೆ. ಉಳಿದ ಹಣವನ್ನು ಫಲಾನುಭವಿ ಭರಿಸಬೇಕು. ಇನ್ಫೋಸಿಸ್ ಸಂಸ್ಥೆಯು ಆರಂಭಿಕ ಹಂತವಾಗಿ ಗುಲ್ಬರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 10 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಹೊಂದಿದೆ.

English summary
Chief Minister Siddaramaiah on Tuesday informed the Legislative Assembly that the government would soon announce a sanitation policy and build public toilets in Bangalore in proportion to the City’s population
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X