• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನಲ್ಲಿ ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆ ಕೃತಿ ಬಿಡುಗಡೆ

By Prasad
|

ಮೈಸೂರು, ಜು. 17 : ಅಮೆರಿಕ ಮತ್ತು ಮೈಸೂರಿನ ಯುವ ಲೇಖಕರ ಪಾಲಿನ ಗಾಡ್ ಫಾದರ್ ನಂತಿದ್ದ ದಿವಂಗತ ಶಿಕಾರಿಪುರ ಹರಿಹರೇಶ್ವರ ಅವರು ರಚಿಸಿರುವ 'ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆ- ಒಂದು ಅಧ್ಯಯ' ಮತ್ತು ಅದರ ಆಂಗ್ಲ ಅನುವಾದ 'ಎ ಸ್ಟಡಿ ಆಫ್ ಸೈಂಟ್ ಜಾನ್ ಗೋಸ್ಪೆಲ್ ಇನ್ ದಿ ಬೈಬಲ್' ಕೃತಿಗಳ ಲೋಕಾರ್ಪಣೆ ಜು.21ರಂದು ಮೈಸೂರಿನಲ್ಲಿ ನಡೆಯುತ್ತಿದೆ.

ಶಿಕಾರಿಪುರ ಹರಿಹರೇಶ್ವರ ಅವರ ಮೂರನೇ ವರ್ಷದ ಪುಣ್ಯತಿಥಿ ಅಂಗವಾಗಿ ಮೈಸೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಬೆಂಗಳೂರು ರಸ್ತೆ, ಬನ್ನಿ ಮಂಟಪ, ಮೈಸೂರು ಇದರ ಸಭಾಂಗಣದಲ್ಲಿ ಗ್ರಂಥಗಳ ಲೋಕಾರ್ಪಣೆ ಜು. 21, ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಚಹಾ ಮತ್ತು ಅಪರಾಹ್ನ 1.30ಕ್ಕೆ ಉಪಾಹಾರವನ್ನು ಕೂಡ ಆಯೋಜಿಸಲಾಗಿದೆ.


'ಎ ಸ್ಟಡಿ ಆಫ್ ಸೈಂಟ್ ಜಾನ್ ಗೋಸ್ಪೆಲ್ ಇನ್ ದಿ ಬೈಬಲ್' (ಅನುವಾದ) ಕೃತಿಯನ್ನು ದಿ. ಪ್ರೊ| ಎಚ್.ಜಿ. ಸುಬ್ಬರಾವ್ ರಚಿಸಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶಪಾಲರಾದ ಫಾದರ್ ಲೆಸ್ಲಿ ಮೊರಾಸ್ ಅವರು ಎರಡೂ ಗ್ರಂಥಗಳನ್ನು ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಗ್ರಂಥದ ಅವಲೋಕನವನ್ನು ಡಾ. ಜಿ.ಎಸ್. ತಲ್ವಾಡಿ ಅವರು ಮತ್ತು ಆಂಗ್ಲ ಗ್ರಂಥದ ಅವಲೋಕನವನ್ನು ಫಾದರ್ ಜಾರ್ಜ್ ಆಲಿವರ್ ಅವರು ನಡೆಸಿಕೊಡಲಿದ್ದಾರೆ. ಹರಿಹರೇಶ್ವರ ಅವರ ಪತ್ನಿ ನಾಗಲಕ್ಷ್ಮೀ ಹರಿಹರೇಶ್ವರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ನಾಗಲಕ್ಷ್ಮೀಯವರು ಸರ್ವವರಿಗೂ ಸ್ವಾಗತ ಕೋರಿದ್ದಾರೆ.

English summary
Late Shikaripura Harihareshwara written Biblenalli John na Suvarthe - Ondu Adhyana and it's English translation A study of St. John's Gospel in the Bible, written by Prof. H.G. Subba Rao will be released in Mysore at St. Philomina College on July 21st, Sunday in Mysore. Nagalakshmi Harihareshwara will preside over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X