• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಪ್ಟನ್ ಕೂಲ್ ಧೋನಿ ಮಾನವೀಯತೆ ಅನಾವರಣ

By Srinath
|

ರಾಂಚಿ, ಜುಲೈ 16: ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ರಂಗಕ್ಕೆ ದಕ್ಕಿದ್ದು ಹೇಗೆ ಎಂಬುದನ್ನು ನಿನ್ನೆ ತಿಳಿದುಕೊಂಡಿರಿ. ಮಾಜಿ ವಿಕೆಟ್ ಕೀಪರ್, ರಾಷ್ಟ್ರೀಯ ಆಯ್ಕೆದಾರ ಕಿರಣ್ ಮೋರೆ ಅವರು ಧೋನಿ ಆಯ್ಕೆಗೆ ಪಟ್ಟು ಹಿಡಿದು ಅವರನ್ನು ಮುಖ್ಯವಾಹಿನಿಗೆ ತಂದಿದ್ದು ಎಂಬುದು ಗೊತ್ತಿದೆ.

ಧೋನಿಯೂ ಅಷ್ಟೇ... ಮೋರೆ ಅಂದು ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ತಕ್ಕಂತೆ ಇದುವರತೆಗೂ ಆಡಿಕೊಂಡು ಬರುತ್ತಿದ್ದಾರೆ. ಆದರೆ ಹಾಗೆ ಅಸಾಧಾರಣ ಪ್ರತಿಭೆ ಮೆರೆಯಲು ಧೋನಿಯಲ್ಲಿರುವ ಅಂತಃಸತ್ವಕ್ಕೆ ಮೆರುಗು ನೀಡಿದ್ದು ಅವರ ಆತ್ಮೀಯ ಚಡ್ಡಿ ದೋಸ್ತ್, ಸಂತೋಷ್ ಲಾಲ್. ನೀವಿಂದು ಎಂಜಾಯ್ ಮಾಡುತ್ತಿರುವ ಧೋನಿಯ ನೆಚ್ಚಿನ ಶಾಟ್ ಆದ helicopter shot ಅನ್ನು ಕಲಿಸಿದ್ದು ಇದೇ ಸಂತೋಷ್ !

ಆದರೆ ಇಲ್ಲಿನ ಸುದ್ದಿ ಅದಲ್ಲ. ಧೋನಿಯ ಚಡ್ಡಿ ದೋಸ್ತ್, helicopter shot ಕಲಿಸಿದ ಸಂತೋಷ್, ಇಂದು ಶೋಚನೀಯ ಸ್ಥಿತಿಯಲ್ಲಿದ್ದಾರೆ. ವಿಷಯ ಏನಪ್ಪಾ ಅಂದರೆ ಸಂತೋಷ್ ಕರುಣಾಜನಕ ಕಥೆ ಕೇಳಿ MSD ಕರಗಿದ್ದಾರೆ.

ಸಂತೋಷ್ ಲಾಲ್ pancreatitis ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ MSD ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಜಾರ್ಖಂಡಿನ ರಾಂಚಿ ಆಸ್ಪತ್ರೆಯಲ್ಲಿ ಪ್ರಜ್ಞೆ ತಪ್ಪಿಬಿದ್ದಿದ್ದ ಸಂತೋಷ್ ರನ್ನು ನಿನ್ನೆ ಸೋಮವಾರ ತಕ್ಷಣ air ambulance ಮೂಲಕ ದೆಹಲಿಗೆ ಕಳುಹಿಸಿ ಕೊಟ್ಟಿದ್ದಾರೆ.

ಸಂತೋಷ್ ಲಾಲ್ ಸಹ ಮಾಜಿ ರಣಜಿ ಆಟಗಾರ. ಅವರು ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India captain Mahendra Singh Dhoni is extending all possible help to the inventor of his famous helicopter shot and one of his close childhood friend Santosh Lal, who has been diagnosed with acute pancreatitis and was airlifted to Delhi on Monday for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more