ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಡ್ ವಂಚನೆ: 7ನೇ ಕ್ಲಾಸಿನವ ದೋಚಿದ್ದು ಕೋಟ್ಯಂತರ

By Srinath
|
Google Oneindia Kannada News

credit-card-fraud-icici-bank-mumbai-raju-arrested
ದೆಹಲಿ, ಜುಲೈ 16: ಆ ವಂಚಕ ಓದಿಕೊಂಡಿರುವುದು ಕೇವಲ 7ನೇ ಕ್ಲಾಸ್. ಆದರೆ ಸುಶಿಕ್ಷತರನ್ನೇ ಯಾಮಾರಿಸಿ, ಅವರಿಂದ ಕೋಟ್ಯಂತರ ರೂ. ಲಪಟಾಯಿಸಿದ್ದಾನೆ. ಹೇಗಪ್ಪಾ ಅಂದರೆ ಮಾಹಿತಿ ತಂತ್ರಜ್ಞಾನದ ಮಹತ್ತರ ಕೊಡುಗೆಯಾದ ಕ್ರೆಡಿಟ್ ಕಾರ್ಡ್ ವಂಚನೆಯ ಮೂಲಕ.

ಮುಂಬೈ ಬಳಿಯ ಅಂಬರನಾಥ ನಿವಾಸಿ ರಾಜು ದೇವರ್ ಎಂಬ ಯುವಕ ಇದುವರೆಗೂ ಬರೋಬ್ಬರಿ 30 ಸಾವಿರ ಮಂದಿಯನ್ನು ಯಾಮಾರಿಸಿದ್ದಾನೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಂಚನೆ ಮೂಲಕವೇ ಅವನು 3 ಕೋಟಿ ರೂ ಎತ್ತಿದ್ದಾನೆ.

ಗಮನಾರ್ಹವೆಂದರೆ ಹೀಗೆ ವಂಚನೆಗೊಳಗಾದವರೆಲ್ಲಾ ICICI Bank ಕ್ರೆಡಿಟ್ ಕಾರ್ಡುದಾರರು. ಇವರೇ ಏಕೆ/ ಹೇಗೆ ಅಂದರೆ ಅವಯ್ಯಾ ತನ್ನ ಮೊಬೈಲಿಗೆ ICICI Bankನ ರಿಂಗ್ ಟೋನ್ ಹಾಕಿಸಿಕೊಂಡಿದ್ದ. ವಂಚನೆಗೊಳಗಾಗುವ ಗ್ರಾಹಕರು ತಾವು ನೇರವಾಗಿ ಬ್ಯಾಂಕ್ ಜತೆಯೇ ವ್ಯವಹರಿಸುತ್ತಿದ್ದೇವೆ ಅಂದುಕೊಂಡು ಕ್ರೆಡಿಟ್ ಕಾರ್ಡ್ ರಹಸ್ಯ ಕೋಡ್ ಗಳನ್ನೆಲ್ಲಾ ಬಹಿರಂಗಪಡಿಸುತ್ತಿದ್ದರು. ಅಷ್ಟೇ...

ಇವಯ್ಯ ಕೆಲವೇ ಕ್ಷಣಗಳಲ್ಲಿ ಒಂದೊಂದೇ ಖಾತೆಗಳಿಂದ ತನಗೆ ಬೇಕಾದಷ್ಟು ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮಜಾ ಮಾಡುತ್ತಿದ್ದ. ಇದಕ್ಕೆ ಪರೋಕ್ಷವಾಗಿ ಬ್ಯಾಂಕ್ ಉದ್ಯೋಗಿಯೂ ನೆರವಾಗಿದ್ದಾರೆ ಅನ್ನಿ. ಆದರೆ ಆತ ನೇರ ಹೊಣೆಗಾರನಲ್ಲ.

ಒಮ್ಮೆ ಆತ ಲ್ಯಾಪ್ ಟಾಪ್ ಅನ್ನು ಸ್ವಲ್ಪ ಕಾಲ ಬಿಟ್ಟುಹೋಗಿದ್ದಾಗ ಈ ಆಸಾಮಿ ಹೋಗಿ ವಿಥಿನ್ ನೋ ಟೈಮ್- ಎಷ್ಟು ಸಾಧ್ಯವೋ ಅಷ್ಟೂ ಮಾಹಿತಿಯನ್ನು ತನ್ನ ಕಂಪ್ಯೂಟರಿಗೆ ವರ್ಗಾಯಿಸಿಕೊಂಡುಬಿಟ್ಟಿದ್ದಾನೆ. ಆ ಬಾಬತ್ತಿನಿಂದ ಅವನು ಸುಮಾರು 4500 ಗ್ರಾಹಕರನ್ನು ವಂಚಿಸಿದ್ದಾನೆ.

ಕೊನೆಗೆ ಪತ್ರಕರ್ತರೊಬ್ಬರು ಇವನ ಬಗ್ಗೆ ಅನುಮಾನಗೊಂಡು ಸ್ವಲ್ಪ ತನಿಖೆ ಮಾಡಿ ಎಂದು ಪೊಲೀಸರಿಗೆ ತಿಳಿಸಿದಾಗಲೇ ರಾಜು ದೇವರ್ ವಂಚನೆ ಬೆಳಕಿಗೆ ಬಂದಿದ್ದು.

ನೀತಿ ಪಾಠ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಆದ್ದರಿಂದ ಎಚ್ಚರಾ ಎಚ್ಚರಾ! ಗ್ರಾಹಕರೇ ಯಾವೋನೋ ತಲೆ ಮಾಸಿದವನು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳುತ್ತಿದ್ದಾನೆ ಎಂದು ಮಾಹಿತಿಯನ್ನು ನೀಡಿ ಪಿಗ್ಗಿ ಬೀಳಬೇಡಿ. ಯಾವುದೇ ಬ್ಯಾಂಕು ಯಾವುದೇ ರೂಪದಲ್ಲೂ ಅಂದರೆ ಮೊಬೈಲ್/ ಇಮೇಲ್ ಮೂಲಕ ನಿಮ್ಮ ಕಾರ್ಡ್ ಡಿಟೇಲ್ಸ್ ಅನ್ನು ಕೇಳುವುದಿಲ್ಲ. TC of yr card.

English summary
ICICI Bank credit card fraud Mumbai resident Raju Tevar was arrested. The police arrested a 31-year old man from Mumbai for allegedly duping over 30,000 ICICI Bank credit card holders. The arrested person used to pose as ICICI Bank employee and extract confidential details such as credit card number, CVV, date of birth, OTP etc to defraud them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X