ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಟೆಲಿಗ್ರಾಂ ಸೇವೆ 1853-2013

By Mahesh
|
Google Oneindia Kannada News

ಬೆಂಗಳೂರು, ಜು.15: ಭಾನುವಾರ ಟೆಲಿಗ್ರಾಂ ಕಚೇರಿಗಳಲ್ಲಿ ಗದ್ದಲ, ಸಂಭ್ರಮ, ದುಃಖ ಮನೆ ಮಾಡಿತ್ತು. ಸುಮಾರು 160 ವರ್ಷಗಳ ಇತಿಹಾಸವುಳ್ಳ ಸೇವೆ ಸಮಾಧಿಯಾಗುವುದರಲ್ಲಿತ್ತು. ಗ್ರಾಹಕರು ಅದರಲ್ಲೂ ಯುವ ಪೀಳಿಗೆ ಕಟ್ಟ ಕಡೆಯ ಬಾರಿಗೆ ಟೆಲಿಗ್ರಾಂ ಸಂದೇಶ ಕಳಿಸಿ ಸಂಭ್ರಮಪಟ್ಟರು. ಕೊನೆ ದಿವಸ ಸರಿ ಸುಮಾರು 20 ಸಾವಿರ ಸಂದೇಶಗಳು ಬುಕ್ ಆಗಿದ್ದು ದಾಖಲೆ.

20 ಸಾವಿರ ಸಂದೇಶಗಳಲ್ಲಿ ಸುಮಾರು 2,200 ದೆಹಲಿ, 1867 ಕೇರಳದ ಕಚೇರಿಗಳಲ್ಲಿ ಬುಕ್ ಆಗಿತ್ತು. ಕೊನೆ ದಿನದಂದು ಬೆಂಗಳೂರಿಗರು ಸುಮಾರು 1500 ಟೆಲಿಗ್ರಾಂ ಸಂದೇಶ ಕಳಿಸಿದ್ದಾರೆ. ಕೊನೆ ಸಂದೇಶ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದೂರದರ್ಶನ ನ್ಯೂಸ್ ವಿಭಾಗದ ಅಶ್ವನಿ ಮಿಶ್ರಾ ಅವರು 11.30ಕ್ಕೆ ಕಳಿಸಿದರು. 'success and happiness in life'ಎಂದು ಸಂದೇಶ ಕಳಿಸಲಾಗಿದೆ.

ದೇಶದಾದ್ಯಂತ 75 ಕಚೇರಿಗಳಲ್ಲಿ 1000 ಸಿಬ್ಬಂದಿ ಕೊನೆ ಗಳಿಗೆಯಲ್ಲೂ ಉತ್ಸಾಹದಿಂದ ಸಂದೇಶ ಬುಕ್ ಮಾಡಿಕೊಂಡು ಕಳಿಸಿದ್ದಾರೆ. ಈ ಸಿಬ್ಬಂದಿಗಳನ್ನು ಮುಂದೆ ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್ ಹಾಗೂ ಸೆಲ್ಯುಲಾರ್ ವಿಭಾಗಗಳಲ್ಲಿ ನಿಯುಕ್ತಿಗೊಳಿಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಭರವಸೆ ನೀಡಿದೆ.

ಬ್ರಿಟಿಷ್ ಸಾಮ್ರಾಜ್ಯದ ಅಂದಿನ ರಾಜಧಾನಿ ಕಲ್ಕತ್ತಾ(ಈಗ ಕೋಲ್ಕತ್ತಾ) ಹಾಗೂ ಹೌರಾ ನಡುವೆ ಸಂವಹನ ಏರ್ಪಡಿಸಲು 1833ರಲ್ಲಿ ಟೆಲಿಗ್ರಾಂ ಸೇವೆ ಮೊದಲಿಗೆ ಬಳಸಲಾಯಿತು. 1853ರಲ್ಲಿ ಭಾರತದಾದ್ಯಂತ ಟೆಲಿಗ್ರಾಂ ಜನಪ್ರಿಯಗೊಂಡಿತು. ಟೆಲಿಫೋನ್ ವ್ಯವಸ್ಥೆ ಬಂದ ಮೇಲೂ ಟೆಲಿಗ್ರಾಂ ಚಾಲ್ತಿಯಲ್ಲಿತ್ತು.

ವಾರ್ಷಿಕ 75.2 ದಶಲಕ್ಷ ಟೆಲಿಗ್ರಾಫ್ ಟ್ರಾಫಿಕ್ ಹೊಂದಿದ್ದ ಟೆಲಿಗ್ರಾಂ ಈಗ 72,000ಕ್ಕೆ ಇಳಿಯುತ್ತಿದ್ದಂತೆ ಸೇವೆ ಸ್ಥಗಿತಕ್ಕೆ ಬಿಸ್ ಎನ್ನೆಲ್ ಮುಂದಾಯಿತು. ಟೆಲಿಗ್ರಾಂ ಕಳಿಸಿದವರ ಸಂಭ್ರಮದ ಚಿತ್ರಗಳು ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಲ್ಲಿವೆ..

ಟೆಲಿಗ್ರಾಂ ನಿಧನ

ಟೆಲಿಗ್ರಾಂ ನಿಧನ

160 ವರ್ಷಗಳ ಇತಿಹಾಸವಿದ್ದ ಟೆಲಿಗ್ರಾಂ ಸಂದೇಶ ಸೇವೆ ಸ್ಥಗಿತಗೊಂಡಿದೆ. ನವದೆಹಲಿಯಲ್ಲಿ ಟೆಲಿಗ್ರಾಂ ಸಂದೇಶ ರಸೀತಿ ತೋರಿಸುತ್ತಿರುವ ಮಹಿಳೆ

ಕೋಲ್ಕತ್ತಾ-ಟೆಲಿಗ್ರಾಂ ನಿಧನ

ಕೋಲ್ಕತ್ತಾ-ಟೆಲಿಗ್ರಾಂ ನಿಧನ

ಕೋಲ್ಕತ್ತಾ : 160 ವರ್ಷಗಳ ಇತಿಹಾಸವಿದ್ದ ಟೆಲಿಗ್ರಾಂ ಸಂದೇಶ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ ಟೆಲಿಗ್ರಾಂ ಕಚೇರಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಯುವ ಜನತೆ ಸಂಭ್ರಮ

ಯುವ ಜನತೆ ಸಂಭ್ರಮ

ಟೆಲಿಗ್ರಾಂ ಸೇವೆಯನ್ನು ಕೊನೆ ಬಾರಿಗೆ ಬಳಸುತ್ತಿರುವ ಸಂಭ್ರಮದಲ್ಲಿ ಯುವ ಜನತೆ

ಕೋಲ್ಕತ್ತಾ-ಟೆಲಿಗ್ರಾಂ ನಿಧನ

ಕೋಲ್ಕತ್ತಾ-ಟೆಲಿಗ್ರಾಂ ನಿಧನ

ಕೋಲ್ಕತ್ತಾ : 160 ವರ್ಷಗಳ ಇತಿಹಾಸವಿದ್ದ ಟೆಲಿಗ್ರಾಂ ಸಂದೇಶ ಸೇವೆ ಸ್ಥಗಿತ

ನವದೆಹಲಿಯಲ್ಲಿ ಟೆಲಿಗ್ರಾಂ

ನವದೆಹಲಿಯಲ್ಲಿ ಟೆಲಿಗ್ರಾಂ

ಕೊನೆ ಗಳಿಗೆಯಲ್ಲಿ ಟೆಲಿಗ್ರಾಂ ಸಲ್ಲಿಸಲು ಮುಗಿಬಿದ್ದ ಜನ

ಟೆಲಿಗ್ರಾಂ ಸಾಧಕ

ಟೆಲಿಗ್ರಾಂ ಸಾಧಕ

ಹೀಗಿತ್ತ್ತು ನೋಡಿ ಟೆಲಿಗ್ರಾಫ್ ಸಾಧಕ..

ಟೆಲಿಗ್ರಾಂ ಸೇವೆ ನಷ್ಟ

ಟೆಲಿಗ್ರಾಂ ಸೇವೆ ನಷ್ಟ

ಟೆಲಿಗ್ರಾಂ ಸೇವೆಯಿಂದ 2006-07 ರಿಂದ 2011ರವರೆಗೆ ರಲ್ಲಿ ಬಿಎಸ್ಎನ್ಎಲ್ ಸುಮಾರು 1,473.38 ಕೋಟಿ ರು ನಷ್ಟ ಅನುಭವಿಸಿತ್ತು.

ನವದೆಹಲಿಯಲ್ಲಿ ಟೆಲಿಗ್ರಾಂ

ನವದೆಹಲಿಯಲ್ಲಿ ಟೆಲಿಗ್ರಾಂ

ಕೊನೆ ಗಳಿಗೆಯಲ್ಲಿ ನವದೆಹಲಿಯಲ್ಲಿ ಟೆಲಿಗ್ರಾಂ ಸಲ್ಲಿಸಲು ಮುಗಿಬಿದ್ದ ಜನ

ಸಿಬ್ಬಂದಿ ಪ್ರತಿಭಟನೆ

ಸಿಬ್ಬಂದಿ ಪ್ರತಿಭಟನೆ

ಮುಂಬೈ: 160 ವರ್ಷಗಳ ಇತಿಹಾಸವಿದ್ದ ಟೆಲಿಗ್ರಾಂ ಸಂದೇಶ ಸೇವೆ ಸ್ಥಗಿತಗೊಂಡ ಬೆನ್ನಲ್ಲೇ ಟೆಲಿಗ್ರಾಂ ಕಚೇರಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಪುಣೆಯಲ್ಲಿ ಮೋದಿ

ಪುಣೆಯಲ್ಲಿ ಮೋದಿ

ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಶಿವಾಜಿ ಪ್ರತಿಮೆಗೆ ಹಾರ ಹಾಕಿದ ಗುಜರಾತ್ ಮುಖ್ಯಮಂತ್ರಿ ಮೋದಿ

ಅಮರನಾಥ ಯಾತ್ರೆ

ಅಮರನಾಥ ಯಾತ್ರೆ

ಜಮ್ಮು ಮತ್ತು ಕಾಶ್ಮೀರ ; ಪ್ರಕೃತಿ ಅಡಚಣೆ ನಡುವೆ ಅಮರನಾಥ ಯಾತ್ರೆ ಸಾಗಿದೆ.

ಸೈನಾ ನೆಹ್ವಾಲ್

ಸೈನಾ ನೆಹ್ವಾಲ್

ಬೆಂಗಳೂರು : ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಫ್ರೀಸ್ಬಿ ಕ್ರೀಡೆ ಪ್ರಚಾರಕ್ಕೆ ಆಗಮಿಸಿದ್ದಾರೆ

English summary
Todays News stories in Pics: People across India thronged to telegraph offices to experience the thrill of booking a telegram for one last time as the curtains came down on Sunday night on a 160-year-old service and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X