ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು : ವೃದ್ಧೆಯ ಮೇಲೆ ಅತ್ಯಾಚಾರ, ಹಣ ಲೂಟಿ

|
Google Oneindia Kannada News

rape
ಮಂಗಳೂರು, ಜು.9 : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ನೆನಪು ಮಾಸುವ ಮುನ್ನವೇ, ಮಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ನಡೆದಿದೆ. ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ, ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ನಡೆದಿದೆ.

ಕಂಕನಾಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಿಪಳ್ಳ ಎಂಬಲ್ಲಿ 69 ವಯಸ್ಸಿನ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ ನಾಗೇಶ್ (24) ವೃದ್ಧೆಯ ಚಿನ್ನಾಭರಣ ಹಾಗೂ ಹಳೆ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾನೆ.

ಭಾನುವಾರ ತಡರಾತ್ರಿ ವೃದ್ಧೆಯ ಮನೆಗೆ ಆಗಮಿಸಿದ ಆರೋಪಿ ನಾಗೇಶ್ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಸೋಮವಾರ ಬೆಳಗ್ಗೆ ನಾಗೇಶ್ ನನ್ನು ಹಿಡಿದು, ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತುತ್ತು ಅನ್ನಕ್ಕಾಗಿ ಬಂದಿದ್ದ : ನಾಗೇಶ್ ಮೂಲತಃ ಚಿಕ್ಕಬಳ್ಳಾಪುರದ ಚಿಂತಾಮಣಿಯ ನಿವಾಸಿಯಾಗಿದ್ದು, ಕೂಲಿಕೆಲಸಕ್ಕಾಗಿ ಸರಿಪಳ್ಳ ಗ್ರಾಮಕ್ಕೆ ಆಗಮಿಸಿದ್ದ. ಗ್ರಾಮದ ಕೆಲವು ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ವೃದ್ಧೆಯ ಮನೆಯ ಅಕ್ಕಪಕ್ಕದಲ್ಲಿ ಕೆಲಸ ಮಾಡಿದ್ದ ನಾಗೇಶ್ ಮನೆಯಲ್ಲಿ ಆಕೆ ಒಬ್ಬಳೇ ಇರುವುದನ್ನು ತಿಳಿದುಕೊಂಡಿದ್ದ. ಭಾನುವಾರ ಆಕೆಯ ಮನೆಗೆ ನುಗ್ಗಿದ ಆತ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

English summary
In a most shocking incident, a sixty nine year old woman was raped by a twenty four youngster, in the locality of Saripalla, Mangalore rural police station limits. The youngster was identified as Nagesh, a construction worker. he raped and Looted Jewellery. Nagesh arrested by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X