• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರು

By Mahesh
|

ಬೆಂಗಳೂರು, ಜು.15: ನಗರದ ಜನಪ್ರಿಯ ವಿಹಾರತಾಣಗಳಲ್ಲಿ ಒಂದಾದ ಕಬ್ಬನ್ ಪಾರ್ಕಿನಲ್ಲಿ ಬೆಳಗ್ಗೆ ಸಂಜೆ ವಾಕ್ ಮಾಡುವಾಗ ಬಾಯಿ ಚಪಲ ಕಾಫಿ ಕುಡಿಯೋಣ ಎನಿಸಿದರೆ ಮರೆತು ಬಿಡಿ. ಕಬ್ಬನ್ ಪಾರ್ಕಿನಲ್ಲಿ ಇನ್ಮುಂದೆ ಕಾಫಿ, ಟೀ ಮಾರಾಟ ನಿಷೇಧಿಸಲಾಗಿದೆ.

ಪ್ರೇಮಿಗಳ ನಲಿದಾಟಕ್ಕೆ ಬ್ರೇಕ್ ಹಾಕಿದ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದ್ದು, ಕಬ್ಬನ್ ಪಾರ್ಕಿನಲ್ಲಿ ಕಾಫಿ, ಟೀ ಮಾರಾಟಗಾರರ ಮೇಲೆ ಕಣ್ಣು ಹಾಕಿದೆ. ಪ್ಲಾಸ್ಟಿಕ್ ಕಪ್ ಬಳಸಿ ಕಾಫಿ, ಟೀ ಕುಡಿಯಲು ಶುರು ಮಾಡಿದರೆ ತೆರಬೇಕಾದ ಬೆಲೆ ಕೇವಲ 100 ರು ಮಾತ್ರ.

ಪ್ಲಾಸ್ಟಿಕ್ ಬಳಕೆ ನಿಷೇಧ ಹೇರಿರುವ ತೋಟಗಾರಿಕಾ ಇಲಾಖೆ, ಪ್ಲಾಸ್ಟಿಕ್ ಕಪ್ ಬಳಸಿ ಕಾಫಿ ಟೀ ಮಾರಾಟ ಮಾಡುವವರಿಗೆ ಕಠಿಣ ಎಚ್ಚರಿಕೆ ನೀಡಿದೆ. ಹೀಗಾಗಿ ವಾಯುವಿಹಾರಿಗಳು, ಪ್ರೇಮಿಗಳು, ನಿವೃತ್ತಿ ಹೊಂದಿದ ಹಿರಿಯರಿಗೆ ಕಾಫಿ, ಟೀ ಸಿಗುವುದಿಲ್ಲ.

ನಗರ ಪಾಲಿಕೆ ಕಚೇರಿಯಿಂದ ಕಬ್ಬನ್ ಪಾರ್ಕ್ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಈ ಕುರಿತ ದೊಡ್ಡ ಪ್ರಕಟಣೆ ಹಾಗೂ ದಂಡ ಮಾಹಿತಿಯನ್ನು ಪ್ರದರ್ಶಿಸುವ ಫಲಕ ಹಾಕಲಾಗಿದೆ.

ಈ ಫಲಕ ನೋಡಿಯೂ ನಿರ್ಲಕ್ಷಿಸಿ ಮಾರಾಟ ಮಾಡಿದರೆ ದಂಡ ಕಟ್ಟಿಟ್ಟ ಬುತ್ತಿ. ದೊಡ್ದ ಫ್ಲಾಸ್ಕಿನಲ್ಲಿ ಕಾಫಿ, ಟೀ ತುಂಬಿಸಿಕೊಂಡು ಸೈಕಲ್ ಏರಿ ಬರುತ್ತಿದ್ದ ಮಾರಾಟಗಾರರಿಗೆ ತೋಟಗಾರಿಕೆ ಇಲಾಖೆ ಎಚ್ಚರಿಕೆ ಮುಳುವಾಗುವುದಂತೂ ಖಂಡಿತ. ವಾಯುವಿಹಾರಿಗಳು ಗೊಣಗಿಕೊಂಡು ಇನ್ನು ಹತ್ತು ಹೆಜ್ಜೆ ಜಾಸ್ತಿ ಹಾಕಿ ಹೋಟೆಲ್ ಕಡೆಗೆ ತೆರಳಬೇಕಾದ್ದು ಅನಿವಾರ್ಯವಾಗಲಿದೆ.

ಕಬ್ಬನ್ ಪಾರ್ಕ್: 1864 ರಲ್ಲಿ ಲಾರ್ಡ್ ಕಬ್ಬನ್ ಅವರಿಂದ ಸ್ಥಾಪನೆಗೊಂಡ ಕಬ್ಬನ್ ಪಾರ್ಕ್ ಸುಮಾರು 300 ಎಕರೆ ವಿಸ್ತ್ರೀರ್ಣ ಹೊಂದಿದೆ.ಸುಂದರವಾದ ಗಿಡ-ಬಳ್ಳಿ ವೃಕ್ಷಗಳು, ವಿಶಾಲವಾದ ಲಾನ್, ಚಿಣ್ಣರಿಗೆ ಬಾಲವನವಿದೆ.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದಿಂದ ಕಬ್ಬನ್ ಪಾರ್ಕ್ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಅನೇಕ ನಾಗರಿಕ ಸಂಘಟನೆಗಳು ದೂರು ನೀಡಿದ್ದವು. ಕಬ್ಬನ್ ಉದ್ಯಾನವನಕ್ಕೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸುವ ಬಗ್ಗೆ ಸರ್ಕಾರ ಭರವಸೆಯನ್ನು ನೀಡಿತ್ತು.

ದಾರಿಹೋಕರನ್ನು ಸೆಳೆಯುವ ಕಟ್ಟಡಗಳು, ಹಸಿರಿನ ರಾಶಿ ಜೊತೆಗೆ ಪಾರಿವಾಳಗಳ ಗುಂಪು ಕಬ್ಬನ್ ಪಾರ್ಕ್ ಆಕರ್ಷಣೆಯಾಗಿತ್ತು. ಆದರೆ ಪಾರಿವಾಳಗಳ ಸಂಖ್ಯೆ ಕೂಡಾ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ಸಂಗತಿ. ಹೀಗಾಗಿ ಸರ್ಕಾರದ ಈ ನಿರ್ಣಯ ಸ್ವಾಗತಾರ್ಹ. [ಪಾರಿವಾಳಗಳ ಸ್ಥಿತಿಗತಿ ಬಗ್ಗೆ ಪೂರ್ಣ ವರದಿ ಓದಿ]

ಪಾರ್ಕ್ ನ ಮಧ್ಯೆ, 'ದಿವಾನ್ ಶೇಶಾದ್ರಿ ಅಯ್ಯರ್ ರವರ ಸ್ಮರಣ ಮಂದಿರದಲ್ಲಿ ಲೈಬ್ರರಿ ಇದೆ. 'ಜವಹಾರ್ ಬಾಲಭವನ,' , 'ಮಕ್ಕಳ ಉದ್ಯಾನವನ,' ಮತ್ತು ಇಲ್ಲಿರುವ ಮ್ಯೂಸಿಯಂ ಅತಿಹಳೆಯ ವಸ್ತುಸಂಗ್ರಹಾಲಯಗಳಲ್ಲೊಂದಾಗಿವೆ. ಸೋಮವಾರ ಬಿಟ್ಟು ವಾರದ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ.

English summary
Selling Coffee, Tea in Plastic cups are banned in Cubbon Park, Bangalore. If anybody found selling the beverages will be punished with Rs 100 fine said Horticulture Department of Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X