ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರ್ಲೆಂಡ್ ಕಣ್ತೆರೆಸಿದ ಕನ್ನಡ ಗರ್ಭಿಣಿಯ ಸಾವು

By Mahesh
|
Google Oneindia Kannada News

ಲಂಡನ್, ಜು.13: ಐರ್ಲೆಂಡ್ ನಲ್ಲಿ ಮೃತಪಟ್ಟ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವಿನ ನಂತರ ಕೊನೆಗೂ ಐರ್ಲೆಂಡ್ ಮಹಿಳೆಯರಿಗೆ ಅಬಾರ್ಷನ್ ಹಕ್ಕು ಸಿಕ್ಕಿದೆ. ಗರ್ಭಪಾತ ಮಾಡಲು ನಿರಾಕರಿಸಿದ್ದರಿಂದ ಸವಿತಾ ಅವರು ಮೃತಪಟ್ಟಿಲ್ಲ. ವೈದ್ಯರ ನಿರ್ಲಕ್ಷದಿಂದಾಗಿ ಸವಿತಾ ಸಾವನ್ನಪ್ಪಿದ್ದಾಳೆ ಎಂಬುದು ದೃಢಪಟ್ಟಿತ್ತು. ಈ ಬಗ್ಗೆ ಐರ್ಲೆಂಡ್ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದು ಗರ್ಭಪಾತದ ವಿಶೇಷ ಮಸೂದೆ ಅಂಗೀಕಾರವಾಗಿದೆ.

ತಾಯಿಯ ಜೀವಕ್ಕೇ ಸಂಚಕಾರ ತರುವಂತಹ ವಿಶೇಷ ಪ್ರಕರಣಗಳಲ್ಲಿ ಸಂದರ್ಭೋಚಿತವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದಾದ ಜೀವರಕ್ಷಕ ಗರ್ಭಪಾತದ ವಿಶೇಷ ಮಸೂದೆ ಪರವಾಗಿ ಸಂಪುಟ ಮತ ನೀಡುವ ಮೂಲಕ ಅಂಗೀಕಾರ ನೀಡಿದೆ.

ಭಾರತೀಯ ಮಹಿಳೆ ಸವಿತಾ ಹಾಲಪ್ಪ ಎಂಬುವರು ಗರ್ಭಪಾತಕ್ಕೆ ಅವಕಾಶವಿಲ್ಲದ್ದರಿಂದ ಹೆರಿಗೆ ವೇಳೆ ಸಾವನ್ನಪ್ಪಿದ ಘಟನೆ ವಿಶ್ವದೆಲ್ಲೆಡೆ ಸುದ್ದಿ ಮಾಡಿದ್ದ ಹಿನ್ನೆಲೆಯಲ್ಲಿ ಕ್ಯಾಥೋಲಿಕ್ ರಾಷ್ಟ್ರವಾದ ಐರ್ಲೆಂಡಿನ ಪ್ರಧಾನಿ ಎಂಡಾಕೆನ್ನಿ ಮತ್ತು ಅವನ ಸಂಪುಟ ಸಹೋದ್ಯೋಗಿಗಳು ಈ ಪ್ರೆಗ್ನೆನ್ಸಿ ಬಿಲ್ ಗೆ ಅನುಮೋದನೆ ನೀಡಿತು.

Following Savita Halappanavar’s death, Irish women get abortion rights

ಮಸೂದೆಯ ಪರವಾಗಿ 177 ಮತಗಳು ಬಿದ್ದರೆ ವಿರುದ್ಧವಾಗಿ 31 ಮತಗಳು ಚಲಾವಣೆಯಾಗಿದ್ದವು. ಕ್ಯಾಥೋಲಿಕ್ ಧರ್ಮದವರ ಪ್ರಕಾರ, ಮಹಿಳೆ ಯಾವುದೇ ಕಾರಣಕ್ಕೂ ಗರ್ಭಪಾತ ಮಾಡಿಸಿಕೊಳ್ಳಬಾರದು ಎಂಬುದು ಒಂದು ಸಂಪ್ರದಾಯವಾಗಿದೆ. ಆದರೆ, ಕಳೆದ ಅಕ್ಟೋಬರ್ ನಲ್ಲಿ ಸಂಭವಿಸಿದ ಸವಿತಾ ಅವರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿದ ಜಾಗತಿಕ ಒತ್ತಡದಿಂದ ಈಗ ಈ ಮಸೂದೆಯನ್ನು ಸರ್ಕಾರ ಅಂಗೀಕರಿಸಿದೆ.

ಅಕ್ಟೋಬರ್ ನಲ್ಲಿ 17 ವಾರದ ಗರ್ಭಿಣಿಯಾಗಿದ್ದ ಸವಿತಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಬೆನ್ನುನೋವುನಿಂದ ಬಳಲುತ್ತಿದ್ದ ಅವರು, ವೈದ್ಯರ ಬಳಿ ಗರ್ಭಪಾತ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಸವಿತಾ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ಲ. ಸವಿತಾ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟು ಅವರು ಗಂಭೀರ ಸ್ಥಿತಿಗೆ ತಲುಪಿದಾಗಲೂ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದರು.

ಆಸ್ಪತ್ರೆಗೆ ದಾಖಲಾದ ನಂತರ ರಕ್ತ ಪರೀಕ್ಷೆ, ರಕ್ತ ದೊತ್ತಡ, ದೇಹದ ಉಷ್ಣಾಂಶ ಮುಂತಾದ ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ ಎಂಬುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ. ಇದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ಇತ್ತೀಚೆಗೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Following Savita Halappanavar’s death, Irish women get abortion rights : Ireland’s parliament voted on Friday to allow abortion under certain conditions for the first time, following months of polarising debate in the Catholic country including letters to the premier written in blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X