ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಬರ್ಥಡೇಗೆ ಭರ್ಜರಿ ಕೊಡುಗೆ

By Mahesh
|
Google Oneindia Kannada News

ನವದೆಹಲಿ, ಜು.13: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನೋತ್ಸವದಂದು ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಭದ್ರತೆ ಯೋಜನೆ ಜಾರಿಗೆ ತರಲು ಯುಪಿಎ ಸರ್ಕಾರ ನಿರ್ಧರಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯುವ ವೇಳೆಗೆ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿದೆ.

ಯುಪಿಎ ಸರ್ಕಾರದ ಆರ್ಥಿಕ ನೀತಿ, ಬೆಲೆ ಏರಿಕೆ, ಆಹಾರ ಭದ್ರತಾ ಕಾಯ್ದೆ ಲೋಪ ದೋಷಗಳನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಶನಿವಾರ(ಜು.13) ನವದೆಹಲಿಯ #10 ಜನಪಥ್ ನಿವಾಸದ ಎದುರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಹಲವಾರು ಪ್ರತಿಭಟನಾಕಾರರು ಚಪ್ಪಲಿ ತೋರಿಸುತ್ತಾ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರನ್ನು ಟೀಕಿಸಿದ್ದಾರೆ. ಸೋನಿಯಾ ಗಾಂಧಿ ನಿವಾಸದತ್ತ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರ ತೊಡಗಿದಾಗ ವಿಧಿ ಇಲ್ಲದೆ ಪೊಲೀಸ್ ಪಡೆ ಅಶ್ರುವಾಯು ಸಿಡಿಸಿದ್ದಾರೆ.

ಆದರೂ ಮಹಿಳೆಯರು ಒದ್ದೆ ಬಟ್ಟೆಗಳಲ್ಲೇ ಪೊಲೀಸರ ಕೈಗೆ ಸಿಗದಂತೆ ನುಗ್ಗಲು ಯತ್ನಿಸಿದ್ದಾರೆ. ಚಿತ್ರಗಳಲ್ಲಿ ನೋಡಿ.. ಅತ್ತ ಮೀಟಿಂಗ್ ನಲ್ಲಿ ಏನಾಯಿತು? ಆಹಾರ ಭದ್ರತಾ ಕಾಯ್ದೆ ವಿವರಗಳೇನು? ಮುಂದೆ ಓದಿ...

ಮಹತ್ವದ ಸಭೆ

ಮಹತ್ವದ ಸಭೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಉಪಾಧ್ಯಕ್ಷ ರಾಹುಲ್ ಗಾಂಧಿ, ಆಹಾರ ಸಚಿವ ಕೆವಿ ಥಾಮಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು,

ಅಧಿಕ ಜನಕ್ಕೆ ಪ್ರಯೋಜನ

ಅಧಿಕ ಜನಕ್ಕೆ ಪ್ರಯೋಜನ

ದೇಶದ ಶೇ 67ರಷ್ಟು ಅಥವಾ 82 ಕೋಟಿಗೂ ಅಧಿಕ ಜನಕ್ಕೆ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನ ತಲುಪಲಿದೆ. ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 1 ರು ದರದಲ್ಲಿ 5 ಕೆ.ಜಿ ಅಕ್ಕಿ, 3 ರು ದರದಲ್ಲಿ ಗೋಧಿ ಹಾಗೂ 2 ರು ದರದಲ್ಲಿ ಜೋಳವನ್ನು ಸಾರ್ವಜನಿಕ ಪಡಿತರ ವಿತರಣೆಯ ಅಡಿಯಲ್ಲಿ ನೀಡಲು ಯೋಜನೆ ಸಹಕಾರಿಯಾಗಲಿದೆ.

ಎಲ್ಲೆಲ್ಲಿ ಜಾರಿಯಲ್ಲಿದೆ?

ಎಲ್ಲೆಲ್ಲಿ ಜಾರಿಯಲ್ಲಿದೆ?

ಈಗಾಗಲೇ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಛತ್ತೀಸ್ ಗಢ, ಎಐಎಡಿಎಂಕೆ ಆಡಳಿತದ ತಮಿಳುನಾಡು, ಕಾಂಗ್ರೆಸ್ ಆಡಳಿತದ ಆಂಧ್ರಪ್ರದೇಶ, ಕೇರಳದಲ್ಲಿ 1 ರು ದರದಲ್ಲಿ ಕೆಜಿ ಅಕ್ಕಿಯನು ವಿತರಿಸಲಾಗುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆ ಇದೀಗ ಆರಂಭಗೊಂಡಿದೆ.

ಬಿಜೆಪಿ ಭಾರಿ ಪ್ರತಿಭಟನೆ

ಬಿಜೆಪಿ ಭಾರಿ ಪ್ರತಿಭಟನೆ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯುವ ವೇಳೆಗೆ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿದೆ.

ಬಿಜೆಪಿ ಮಹಿಳಾ ಮೋರ್ಚಾ

ಬಿಜೆಪಿ ಮಹಿಳಾ ಮೋರ್ಚಾ

ಯುಪಿಎ ಸರ್ಕಾರದ ಆರ್ಥಿಕ ನೀತಿ, ಬೆಲೆ ಏರಿಕೆ, ಆಹಾರ ಭದ್ರತಾ ಕಾಯ್ದೆ ಲೋಪ ದೋಷಗಳನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಶನಿವಾರ(ಜು.13) ನವದೆಹಲಿಯ #10 ಜನಪಥ್ ನಿವಾಸದ ಎದುರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ

ಬಿಜೆಪಿ ಮಹಿಳಾ ಮೋರ್ಚಾ

ಹಲವಾರು ಪ್ರತಿಭಟನಾಕಾರರು ಚಪ್ಪಲಿ ತೋರಿಸುತ್ತಾ ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರನ್ನು ಟೀಕಿಸಿದ್ದಾರೆ. ಸೋನಿಯಾ ಗಾಂಧಿ ನಿವಾಸದತ್ತ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ್ದಾರೆ.

English summary
Congress president Sonia Gandhi on Saturday asked the States ruled by the party to implement in “letter and spirit” the food security scheme, which it sees as a “game-changer” in the 2014 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X