ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರಿತ್ರಿಕ: ಜಾತಿ ಸಮಾವೇಶಕ್ಕೆ ಕೊನೆಗೂ ಬ್ರೇಕ್ ಬಿತ್ತು

By Srinath
|
Google Oneindia Kannada News

ಲಖನೌ, ಜುಲೈ12: ''ಜಾತ್ಯಾತೀತ ಭಾರತದಲ್ಲಿ'' ಜಾತಿ ಸಮಾವೇಶಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. 'ಭಾರತ ಜಾತ್ಯಾತೀತ' ಎಂಬ ಹಣೆಪಟ್ಟಿಗೆ ತಕ್ಕ ನ್ಯಾಯವನ್ನೊದಗಿಸುವ ನಿಟ್ಟಿನಲ್ಲಿ ನ್ಯಾಯಾಲಯವೊಂದು ಜಾತಿ ರಾಜಕಾರಣಕ್ಕೆ ಚಾಟಿಯೇಟು ಬೀಸಿದೆ.

ಇದರಿಂದ ಜಾತಿಯ ಹೆಸರಿನಲ್ಲಿ ವೈಷಮ್ಯ ಬಿತ್ತುವ ರಾಜಕಾರಣಿಗಳಿಗೆ ಭಾರಿ ಪೆಟ್ಟು ಕೊಟ್ಟಿದೆ. ಹಾಗೆ ನೊಡಿದರೆ ಎರಡೇ ದಿನಗಳಲ್ಲಿ ನಮ್ಮ ರಾಜಕಾರಣಿಗಳಿಗೆ ದೇಶದ ನ್ಯಾಯ ವ್ಯವಸ್ಥೆ ಕೊಟ್ಟಿರುವ ಮತ್ತೊಂದು ಪೆಟ್ಟು ಇದಾಗಿದೆ.

ಏನಪ್ಪಾ ಅಂದರೆ ಜಾತಿಗಳ ಓಲೈಕೆಯಲ್ಲೇ ಮುಳುಗೇಳುವ ರಾಜಕೀಯ ಪಕ್ಷಗಳು ಇನ್ನು ಮುಂದೆ ಜಾತಿಯಾಧಾರಿತ ಸಮಾವೇಶ/ಸಭೆ/rallyಗಳನ್ನು ಹಮ್ಮಿಕೊಳ್ಳುವಂತಿಲ್ಲ ಎಂದು ಲಖನೌದಲ್ಲಿರುವ ಅಲಹಾಬಾದ್ ಹೈಕೋರ್ಟ್ ಗುರುವಾರ ಈ ಚಾರಿತ್ರಿಕ ತೀರ್ಪು ನೀಡಿದೆ. ಅಂದರೆ ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಸಮಾವೇಶಗಳನ್ನು ನಿಷೇಧಿಸಿ, ಕೂಡಲೇ ಜಾರಿಗೆ ಬರುವಂತೆ ಕೋರ್ಟ್ ಈ ತೀರ್ಪು ನೀಡಿದೆ.

ಗಮಮನಾರ್ಹವೆಂದರೆ, ಚುನಾವಣೆ ಆಯೋಗದ ಪ್ರಕಾರ ಇಂತಹ ಜಾತಿ ಸೂಚಕ ಸಮಾವೇಶ/ಸಭೆ/rallyಗಳನ್ನು ನಡೆಸುವಂತಿಲ್ಲ ಎಂಬ ಕಾನೂನು ಈಗಾಗಲೇ ಜಾರಿಯಲ್ಲಿದೆ. ಆದರೆ ಅದು ಚುನಾವಣೆ ಸಂದರ್ಭದಲ್ಲಿ ಮಾತ್ರ ಅನ್ವಯವಾಗುತ್ತಿದೆ!

ನಿರಾಶೆ ಬೇಡ

ನಿರಾಶೆ ಬೇಡ

ಹಾಗಂತ ಇದು ಉತ್ತರ ಪ್ರದೇಶಕ್ಕೆ ಮಾತ್ರವೇ ಸೀಮಿತ ಬಿಡಿ ಎಂದು ನಿರಾಶರಾಗುವುದು ಬೇಡ. ನಾಳೆ ಮತ್ಯಾವುದೋ ರಾಜಕೀಯ ಪಕ್ಷ ಖಂಡಿತ ಜಾತಿಯ ಹೆಸರಿನಲ್ಲಿ ದೇಶದ ಮತ್ಯಾವುದೋ ಭಾಗದಲ್ಲಿ ಇಂತಹ rally ನಡೆಸಲು ಮುಂದಾದಾಗ ಅಲಹಾಬಾದ್ ಹೈಕೋರ್ಟ್ ನೀಡಿರುವ ಮಾದರಿ ತೀರ್ಪನ್ನು ರೆಫರ್ ಮಾಡಿ, ಆ ಸಮಾವೇಶಕ್ಕೂ ಬ್ರೇಕ್ ಹಾಕಬಹುದು. ಅಲ್ಲಿಗೆ ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗಲಿದ್ದು, ಇನ್ನು ಮುಂದಾದರೂ ಜಾತಿ ಜಾತಿ ಎಂದು ಬಡಿದಾಡುಕೊಳ್ಳುವುದು ತಪ್ಪಲಿ ಎಂಬ ಸದಾಶಯವೇ ಈ ತೀರ್ಪಿನ ಸಾರಾಂಶವಾಗಿದೆ.

ಕಾಂಗ್ರೆಸ್, ಬಿಜೆಪಿ, ಎಸ್‌ಪಿ, ಬಿಎಸ್‌ಪಿಗೆ ನೋಟಿಸ್

ಕಾಂಗ್ರೆಸ್, ಬಿಜೆಪಿ, ಎಸ್‌ಪಿ, ಬಿಎಸ್‌ಪಿಗೆ ನೋಟಿಸ್

ಇಂತಹ ತೀರ್ಪು ನೀಡಿರುವ ಹೈಕೋರ್ಟ್ ಪೀಠ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ದಿನದೊಳಗೆ (ಜು. 25) ನಿಲುವು ಸಷ್ಪಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಚುನಾವಣೆ ಆಯೋಗ, ಪ್ರಮುಖ 4 ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಎಸ್‌ಪಿ ಹಾಗೂ ಬಿಎಸ್‌ಪಿಗೆ ನೋಟಿಸ್ ಸಹ ಜಾರಿ ಮಾಡಿದೆ.

ಸಂವಿಧಾನಕ್ಕೆ ಅಪಚಾರ

ಸಂವಿಧಾನಕ್ಕೆ ಅಪಚಾರ

ಸ್ಥಳೀಯ ವಕೀಲ ಮೋತಿಲಾಲ್ ಯಾದವ್ ಅವರು ಜಾತಿ ಆಧಾರಿತ rallyಗಳಿಂದ 'ನ್ಯಾಯದ ಮುಂದೆ ಎಲ್ಲ ಜಾತಿ ಹಾಗೂ ಸಮುದಾಯಗಳು ಒಂದೇ ಎಂದು ಪ್ರತಿಪಾದಿಸುವ ಸಂವಿಧಾನಕ್ಕೆ ಅಪಚಾರ ಬಗೆದಂತಾಗುತ್ತದೆ' ಎಂದು ವಾದಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದರು.

ವೈಷಮ್ಯ ಬಿತ್ತುವ, ಜಾತಿ ತಾರತಮ್ಯಕ್ಕೆ ಕಾರಣ

ವೈಷಮ್ಯ ಬಿತ್ತುವ, ಜಾತಿ ತಾರತಮ್ಯಕ್ಕೆ ಕಾರಣ

ಜಾತಿ ಆಧಾರಿತ ಸಮ್ಮೇಳನಗಳು ನಾನಾ ಜಾತಿಗಳ ನಡುವೆ ವೈಷಮ್ಯ ಬಿತ್ತುತ್ತವೆ ಹಾಗೂ ಜಾತಿ ತಾರತಮ್ಯಕ್ಕೆ ನೀರೆರೆಯುತ್ತದೆ ಎಂಬುದು ಅವರ ದೂರಾಗಿತ್ತು. ಹಾಗೆಯೇ, ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಚುನಾವಣೆ ಆಯೋಗ, ಕಾಂಗ್ರೆಸ್, ಬಿಜೆಪಿ, ಎಸ್‌ಪಿ, ಬಿಎಸ್‌ಪಿಗಳಿಂದ ಈ ಕುರಿತು ಪ್ರತ್ರಿಕ್ರಿಯೆ ಪಡೆದುಕೊಳ್ಳಬೇಕು ಎಂದು ನ್ಯಾಯಪೀಠವನ್ನು ಒತ್ತಾಯಿಸಿದ್ದರು.
ಮೋತಿಲಾಲ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾ. ಉಮಾನಾಥ್ ಹಾಗೂ ನ್ಯಾ. ಮಹೇಂದ್ರ ದಯಾಳ್ ಅವರ ವಿಭಾಗೀಯ ಪೀಠ, ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಸಮಾವೇಶಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಾಜ್ಞೆ ಹೊರಡಿಸಿಯೇ ಬಿಟ್ಟಿದೆ!

ಉತ್ತರ ಪ್ರದೇಶದಲ್ಲಿ ಮಿತಿಮೀರಿದ ಜಾತಿ ಸಮಾವೇಶಗಳು

ಉತ್ತರ ಪ್ರದೇಶದಲ್ಲಿ ಮಿತಿಮೀರಿದ ಜಾತಿ ಸಮಾವೇಶಗಳು

ಇತ್ತೀಚೆಗಷ್ಟೇ ಬಿಎಸ್‌ಪಿ, ಉತ್ತರ ಪ್ರದೇಶದ 38 ಲೋಕಸಭೆ ಕ್ಷೇತ್ರಗಳಲ್ಲಿ ಬ್ರಾಹ್ಮಣರ ಸಮಾವೇಶ ನಡೆಸಿತ್ತು. ಮುಸ್ಲಿಮರು ಹಾಗೂ ಇನ್ನಿತರ ಜಾತಿ ಸಮಾವೇಶಗಳನ್ನೂ ಆಯೋಜಿಸಲು ಮಾಯಾವತಿ ಮನಸ್ಸು ಮಾಡಿದ್ದರು.
ಮಾಯಾ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರೂ ಕಳೆದ ಆರು ತಿಂಗಳಿನಿಂದ ಬ್ರಾಹ್ಮಣ, ಹಿಂದುಳಿದ ವರ್ಗ ಹಾಗೂ ದಲಿತರ ಸಮಾವೇಶ ಮಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ರಾಜ್ಯಾದ್ಯಂತ ಜಾತಿ ಆಧಾರಿತ ಸಮಾವೇಶ ನಡೆಸಿ ತಾವೂ ಯಾರಿಗೂ ಕಮ್ಮಿ ಇಲ್ಲ ಎಂದು ನಿರೂಪಿಸಿದ್ದವು.

English summary
Allahabad high court bans caste-based political rally in Uttar Pradesh. In a significant and hostoric ruling delivered by the Lucknow bench of the Allahabad high court on Thursday, the judges banned the holding of caste-based political rallies in Uttar Pradesh with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X