ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟ್ ತೀರ್ಪಿನಿಂದ ಸಂಸತ್ ಅರ್ಧಕ್ಕರ್ಧ ಖಾಲಿ

By Srinath
|
Google Oneindia Kannada News

ಬೆಂಗಳೂರು, ಜು.11: ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಶಾಸಕ ಅಥವಾ ಸಂಸದರು ಯಾರಾದರು ಇದ್ದರೆ ಬುಧವಾರದಿಂದಲೇ ಜಾರಿಗೆ ಬರುವಂತೆ ಅಂತಹವರನ್ನು ನೇರವಾಗಿ ವಿಧಾನ ಮಂಡಲ ಮತ್ತು ಸಂಸತ್ತನಿಂದ ಮನೆಗೆ ಕಳುಹಿಸಿಬಿಡಿ ಎಂದು ಸುಪ್ರೀಂ ಕೋರ್ಟ್ ಜನನಾಯಕರಿಗೆ ಶಾಕ್ ನೀಡಿದೆ.

ಒಂದಷ್ಟು ಡೌಟುಗಳು!?:

ಬೇರೆ ವಿಷಯಗಳನ್ನು ಚಚರ್ಚಿಸುವ ಮುನ್ನ ಒಂದು ಸಣ್ಣ ಡೌಟು- ಅಪರಾಧ ಪ್ರಕರಣ ಸಾಬೀತಾಗಿ, ಎರಡು ವರ್ಷ ಶಿಕ್ಷೆ ಅನುಭವಿಸಿದ್ದವರನ್ನು ಮನೆಗೆ ಕಳುಹಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು. ಆದರೆ ವಾಟ್ ಅಬೌಟ್ ವಿಚಾರಣಾಧೀನ ಕೈದಿಗಳು, ಇನ್ನೂ ಆರೋಪಪಟ್ಟಿಯನ್ನೇ ಹೊರಿಸಿಕೊಳ್ಳದ ಜನನನಾಯಕರು.

thanks-to-sc-rpa-order-parliament-may-lose-most-mps

ಅಥವಾ ವಾಟ್ ಅಬೌಟ್ 2 ವರ್ಷಕ್ಕಿಂತ ಕಡಿಮೆ ಶಿಕ್ಷೆ ಅನುಭವಿಸಿದ ಜನಪ್ರತಿನಿಧಿಗಳು? ಆಫ್ಟರ್ ಆಲ್, ಅಪರಾಧಿ ಅಪರಾಧಿಯೇ ಅಲ್ವಾ. ಆನೆ ಕದ್ದರೂ ಅಪರಾಧಿಯೇ ಇಡೀ ಬಳ್ಳಾರಿಯನ್ನೇ ಲೂಟಿ ಮಾಡಿದರೂ ಅಪರಾಧಿಯೇ, ಅಲ್ವಾ?

ಜನರಿಂದಲೇ, ಜನನನಾಯಕ ಅಲ್ವೇ?
ಸುಪ್ರೀಂಕೋರ್ಟ್ ನಿನ್ನೆಯ ತೀರ್ಪಿನಲ್ಲಿ, ಜೈಲು ಶಿಕ್ಷೆ ಅನುಭವಿಸುತ್ತಿರುವವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದೂಬ ಹೇಳಿದೆ. ವಾಟ್ ಅಬೌಟ್ ಸಂಪಂಗಿ/ ರಾಮಕ್ಕ ಅಂತ ಪ್ರಕರಣಗಳು? ಅದಕ್ಕಿಂತ ಹೆಚ್ಚಿಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದ್ದರೂ ಅಂತಹವರನ್ನೇ ಆರಿಸಿ ಕಳುಹಿಸುವ ಜನರಿಗೆ ಅರ್ಥಾತ್ ಮತದಾರ ಪ್ರಭುಗಳಿಗೆ ಯಾವ ಕೋರ್ಟು, ಯಾವ ಶಿಕ್ಷೆ ನೀಡಲಾದೀತು ಹೇಳಿ.

ಏನೇ ಆಗಲಿ, ಚುನಾವಣಾ ಕಾಯಿದೆಗೆ ಸಂಬಂಧ ಪಟ್ಟಂತೆ 1951ರ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 8 (4) ಅಡಿ - RPA- ಇಷ್ಟು ದಿನ ಸುರಕ್ಷಿತರಾಗಿದ್ದ ನಮ್ಮ ಘನನಾಯಕರಿಗೆ ಇನ್ನು ಮುಂದೆ ಒಂದಷ್ಟು ಬಿಸಿಮುಟ್ಟಲಿದೆ. ಯಾವುದೇ ಒಬ್ಬ ವ್ಯಕ್ತಿ ಜೈಲು ಶಿಕ್ಷೆಗೆ ಒಳಗಾಗಿದ್ದರೆ ಆತನನ್ನು ಸರಕಾರಿ ಸೇವೆಗೆ ಸೇರಿಸಿಕೊಳ್ಳುವಂತಿಲ್ಲ. ಅದೇ ಸರಕಾರವನ್ನು ಆಳುವ ಪ್ರತಿನಿಧಿ ಎಷ್ಟೆ ಕ್ರಮಿನಲ್ ಆಗಿದ್ದರೂ ಇದುವರೆಗೂ ಅದಕ್ಕೆ ಕಾನೂನು ಮಾನ್ಯತೆಯಿತ್ತು.

ಇನ್ಮುಂದೆ ಹಾಗಾವುದಿಲ್ಲ ಎಂಬುದೇ ಸದ್ಯದ ಸಮಾಧಾನ. ಷಹಾಬುದ್ದೀನುಗಳು, ಪಪ್ಪು ಯಾದವರು, ಸೂರಜ್ ಭಾನ್ ಗಳಿಗೆ ಇನ್ನು ಉಳಿಗಾಲವಿಲ್ಲ ಎಂದು ಆಶಾಭಾವ ಮೂಡಿದೆ. ಆದರೆ ಗೊತ್ತಿಲ್ಲ, ಇಂತಹುದೇ ಕ್ರಿಮಿನಲ್ಲುಗಳು ಸುಪ್ರೀಂಕೋರ್ಟ್ ಆದೇಶ/ಆಶಯವನ್ನು ಮಣ್ಣುಪಾಲು ಮಾಡಲು ಮತ್ತಿನ್ಯಾವ ತಿದ್ದುಪಡಿಗಳನ್ನು ತಂದು ತಮ್ಮ ಸ್ಥಾನಗಳನ್ನು ಅಬಾಧಿತವಾಗಿಸಿಕೊಳ್ಳುತ್ತಾರೋ ಗೊತ್ತಿಲ್ಲ.

English summary
Thanks to Supreme Court order on section 8 (4) of the Representation of the People Act, 1951, Parliament may lose most of its members as there are 47 percent of representatives have criminal background.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X