ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಕಂದ 'ಮುಖ್ಯಮಂತ್ರಿ'ಗೆ ಜೀವಮಾನದ ಶಾಕ್

By Srinath
|
Google Oneindia Kannada News

Kannada implementation in central govt offices poor - Mukhyamantri Chandru
ಬೆಂಗಳೂರು, ಜುಲೈ 11: ಹೋದಲ್ಲೆಲ್ಲಾ ಬಂದಲ್ಲೆಲ್ಲಾ ಕನ್ನಡ ಕನ್ನಡ ಎಂದು ಜಪಿಸುವ, ಉಸಿರಾಡುವ ನಾಡಿನ ಶಾಶ್ವತ ಮುಖ್ಯಮಂತ್ರಿ ಚಂದ್ರು ನಿನ್ನೆ ಜೀವಮಾನದ ಶಾಕ್ ಅನುಭವಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಇತರೆ ಸದಸ್ಯರೊಂದಿಗೆ ರಾಜಧಾನಿಯಲ್ಲಿ ಸರಕಾರಿ ಕಚೇರಿಗಳಲ್ಲಿ ಕನ್ನಡದ ಕಲರವ ಹೇಗಿದೆ ಎಂದು ಪರಾಂಬರಿಸಲು ಅಂಚೆ ಕಚೇರಿಗೆ ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಮಹಿಳಾ ಅಧಿಕಾರಿ ಹಿಲ್ಡಾ ಅಬ್ರಹಾಂ ಅವರ ರೌರವ ಕಂಡು ಹೌಹಾರಿದ್ದಾರೆ.

ಅರಮನೆಯ ರಸ್ತೆಯಲ್ಲಿರುವ ಮುಖ್ಯ ಅಂಚೆ ಮಹಾಪಾಲಕರ ಕಚೇರಿಯಲ್ಲಿ ಬುಧವಾರ ಏನಾಯ್ತು ಅಂದರೆ ಮುಖ್ಯಮಂತ್ರಿ ಚಂದ್ರು ಅವರ ಕನ್ನಡದ ದಂಡು ಕಚೇರಿಯಲ್ಲಿ ಕನ್ನಡದ ಸ್ಥಿತಿಗತಿಯನ್ನು ಅರಿಯಲು ಮುಂದಾಗಿದೆ. ಕನ್ನಡ ಭಾಷೆಯ ಅನುಷ್ಠಾನದ ಕುರಿತು ಹಿಲ್ಡಾ ಅಬ್ರಹಾಂ ಅವರನ್ನು ವಿಚಾರಿಸಿದ್ದಾರೆ.

ಅಂಚೆಯಮ್ಮನ ಅಚ್ಚ ಆಂಗ್ಲ ಭಾಷಾ ಪ್ರೇಮ:
ಅದಕ್ಕೆ ಅಂಚೆಯಮ್ಮ ಅಚ್ಚ ಆಂಗ್ಲ ಭಾಷೆಯಲ್ಲಿ ಉತ್ತರ ನೀಡಿದ್ದಾರೆ. 'ಏನಮ್ಮಾ ಇದು? ವಸಿ ಕನ್ನಡದಲ್ಲಿ ಉತ್ತರ ಕೊಡಮ್ಮಾ. ನನಗೆ ಇಂಗ್ಲೀಷ್ ಬರೋಲ್ಲಾ' ಎಂದು ಸಿನಿಮಾ ಡೈಲಾಗಿನಂತೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ವಿಚಾರಿಸಿಕೊಂಡಿದ್ದಾರೆ.

ತನ್ನನ್ನು ಪ್ರಶ್ನಿಸುತ್ತಿರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಎಂಬ ತಿಳಿವಳಿಕೆಯಿಲ್ಲದೆ ಆಯಮ್ಮ ಏರಿದ ದನಿಯಲ್ಲಿ 'ಇದು ನನ್ನ ಕಚೇರಿ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ನೀವು ಹೇಳಿದಂತೆಲ್ಲಾ ಕೇಳಲಾಗದು' ಎಂದು ಮುಖ್ಯಮಂತ್ರಿ ಚಂದ್ರುರನ್ನು ಸರಿಯಾಗಿಯೇ ವಿಚಾರಿಸಿಕೊಂಡಿದ್ದಾಳೆ. ಇದನ್ನು ಕೇಳಿದ ಚಂದ್ರ ಅಂಡ್ ಟೀಂಗೆ Full Shock!

ಸಾವರಿಸಿಕೋಂಡ ಚಂದ್ರು ತಂಡ 'ಅದು ಹಾಗಲ್ಲಮ್ಮ. ಕೇಂದ್ರ ಸರಕಾರಿ ಸ್ವಾಮ್ಯದ ಇಲಾಖೆ ಮತ್ತು ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ಅನುಷ್ಠಾನ ಕುರಿತಂತೆ ನಾನು ಮತ್ತು ನನ್ನ ತಂಡದವರು ಪ್ರತಿ ವಾರ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ಹಾಗಾಗಿ ನೀವು ಸಹ ಮಾಹಿತಿ ನೀಡಬೇಕಮ್ಮಾ ಎಂದು ಕೇಳಿದೆ.

ಆದರೆ ಅಂಚೆ ಮಹಾಪಾಲಕಿ ಹಿಲ್ಡಾ ಅಬ್ರಹಾಂ ಇದಕ್ಕೆ ಜಗ್ಗದೆ 'i will file defamation case against you' ಎಂದು ಮುಖ್ಯಮಂತ್ರಿ ಚಂದ್ರುರತ್ತ ಗುರಾಯಿಸಿದ್ದಾಳೆ. 'ಇರಮ್ಮ ನೀನ್ಯಾಕೋ ಜಾಸ್ತಿ ಮಾತಾಡ್ತಿದ್ದೀಯಾ. ಕೇಂದ್ರಕ್ಕೆ ನಿನ್ನ ಬಗ್ಗೆ ಒಂದು ವರದಿ ಕಳುಹಿಸುತ್ತೆನೆ' ಎಂದು ಚಂದ್ರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಅಲ್ಲಿಂದ ಮುಂದಕ್ಕೆ ಮ್ಲಾನವದನರಾಗಿ ಮತ್ತೊಂದು ಕಚೇರಿಗೆ ಭೇಟಿ ನೀಡಿದ್ದಾರೆ. ಜಿಪಿಒ ಅಂದರೆ ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ ಅನ್ನಿ. ಅಂಚೆ ನಿರ್ದೇಶಕ ಶರವಣಗೆ ಕನ್ನಡದಲ್ಲಿ ಮಾತನಾಡಲು ಬಾರದೆ ಬೆಬ್ಬೆಬ್ಬೆ ಅಂದಿದ್ದಾರೆ.

ಕೊನೆಗೆ, 'ರಾಜ್ಯದ ಅಂಚೆ ಕಚೇರಿಗಳಲ್ಲಿ ಕನ್ನಡ ಬಾರದ ಅಧಿಕಾರಿಗಳು ಹೆಚ್ಚಿದ್ದು, ಅವರನ್ನು ಬದಲಿಸಿ, ಕನ್ನಡ ಭಾಷಿಕರನ್ನು ನೇಮಿಸುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು' ಎಂದು ಚಂದ್ರು ತಿಳಿಸಿದರು.

English summary
Kannada implementation in central govt offices poor observes Mukhyamantri Chandru, Chief of Kannada Development Authority (KDA) and an MLC. He felt this yesterday while he visited Chief post office in Palace road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X