ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯದ ಕಾಲ ಮುಗಿದಿದೆ, ಜನಶ್ರೀ ಕಥೆ?

By ಸುದ್ದಿಗಾರ
|
Google Oneindia Kannada News

Kannada TV media News : Samaya Closed, Janasri to Close
ಕನ್ನಡ ಸುದ್ದಿ ವಾಹಿನಿಗಳ ಗುಂಪಿಗೆ ಮತ್ತೊಂದು ಚಾನೆಲ್ ಸೇರ್ಪಡೆಗೊಂಡ ಭರದಲ್ಲೇ ಅಳಿದುಳಿದ ಚಾನೆಲ್ ಗಳು ಕದ ಮುಚ್ಚುವ ಸುದ್ದಿ ಬಂದಿದೆ. ಒಂದು ವಾಹಿನಿಯಿಂದ ಮತ್ತೊಂದು ವಾಹಿನಿಗೆ ಟಿವಿ ಪತ್ರಕರ್ತರ ಜಿಗಿದಾಟ ಅನಿವಾರ್ಯವಾಗಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ 'ಸದಾ ನಿಮ್ಮೊಂದಿಗೆ' ಎಂಬ ವಾಕ್ಯದೊಂದಿಗೆ ಆರಂಭವಾದ ಸಮಯ ಟಿವಿ ರಾಜ್ಯದ 17 ಜಿಲ್ಲೆಗಳಲ್ಲಿ ಎಂದಿಗೂ ಆನ್ ಆಗಲೇ ಇಲ್ಲವಂತೆ. ಟಿಆರ್ ಪಿ ವಾರ್ ನಲ್ಲಿ ಸಮಯ ನೆಲಕಚ್ಚಿದ ಮೇಲೆ ಸಂಸ್ಥೆ ಅವಸಾನಕ್ಕೆ ನಾಂದಿ ಹಾಡಲೇಬೇಕಾಗಿದೆ..

ಕೊನೆಗೂ ಕದ ಮುಚ್ಚಿನ ಮೊತ್ತಮೊದಲ ಕನ್ನಡ ವಾಹಿನಿ ಎಂಬ ಕೀರ್ತಿಯನ್ನು ಸಮಯ ವಾಹಿನಿ ಪಡೆದುಕೊಂಡಿದೆ. ಆಂತರಿಕ ಸಮಸ್ಯೆಗಳಿಗೆ ಸಮಯ ಮತ್ತು ಜನಶ್ರೀಗಳ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಕೆಲ ದಿನಗಳಿಂದ ಸುದ್ದಿ ಮತ್ತು ಹೊಸ ಕಾರ್ಯಕ್ರಮಗಳ ನಿರ್ಮಾಣ ಸ್ಥಗಿತಗೊಂಡಿದ್ದು ಹಳೆಯ ಕಾರ್ಯಕ್ರಮಗಳು ಸಧ್ಯಕ್ಕೆ ಪ್ರಸಾರವಾಗುತ್ತಿವೆ. ಅದೂ ಇನ್ನೇನು ಕೊನೆಗೊಳ್ಳಲಿದೆ ಎಂಬುದು ಸುದ್ದಿ.

ವಾಹಿನಿಗೆ ಬೀಗ ಬಿದ್ದುದರಿಂದಾಗಿ ಅನೇಕ ಉದ್ಯೋಗಿಗಳ ಭವಿಷ್ಯ ಸಂಕಷ್ಟಕ್ಕೊಳಗಾಗಿದೆ. ಕೆಲ ಸಮಯದಿಂದ ಸರಿಯಾಗಿ ಸಂಬಳವೂ ಬರದಿರುವುದರಿಂದ ಹಲವರು ಲೇಬರ್ ಕಮಿಷನ್ ಕದ ತಟ್ಟಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಂದ ಸಚಿನ್/ಶಾಂತಾ/ನಿರಾಣಿ/ಮಂಜುನಾಥ್ ತಂಡಕ್ಕೆ ಚಾನೆಲ್ ವರ್ಗಾವಣಿಯ ಎಲ್ಲಾ ಕಾನೂನಾತ್ಮಕ ಹಂತಗಳು ಪೂರ್ಣಗೊಳ್ಳದಿದ್ದುದರಿಂದ ಸಮಯದಲ್ಲಿ ಈಗ ಬರೀ ಗೊಂದಲವಂತೆ.

ಜನಶ್ರೀ ಎಂಬ ಮುಳುಗುತ್ತಿದ್ದ ಹಡಗಿನ ನಾವಿಕ ಅನಂತ ಚಿನಿವಾರರು ಸುವರ್ಣ ನ್ಯೂಸ್ ಸಂಪಾದಕರಾಗಿ ಸೇರಿದ ನಂತರ ಹಿಂದೆ ಸುವರ್ಣ ಸ್ಯೂಸ್ ಮುಖ್ಯಸ್ಥರಾಗಿದ್ದ ಶಶಿಧರ ಭಟ್ ಹಡಗಿಗೆ ಹೆಗಲು ನೀಡಿದ್ದಾರೆ. ಆದರೆ ಆ ಭಾರ ಸಹಿಸುವಂತಹುದೇ ಅಲ್ಲ ಹೊಸ ದಿಕ್ಕಿನತ್ತ ಸಾಗುವುದೇ ಎಂದು ಕಾದು ನೋಡಬೇಕಿದೆ.
ಆರಂಭದಿಂದಲೂ ಟಿವಿ9 ಜತೆಗಿದ್ದ ಲಕ್ಷ್ಮಣ್ ಹೂಗಾರ್ ಸುವರ್ಣ ನ್ಯೂಸ್ ಸೇರಿದ್ದರೆ ರಂಗನಾಥ್ ಭಾರದ್ವಾಜ್ ಸುವರ್ಣದಿಂದ ಹೊರ ಹೊರಟಿದ್ದಾರೆ ಎಂಬುದು ಇನ್ನೊಂದು ಸುದ್ದಿ.

ಹೀಗೆ ಸುದ್ದಿ ವಾಹಿನಿಗಳು ಭಾರೀ ಸುದ್ದಿಗಳನ್ನು ನೀಡುತ್ತಿದ್ದರೆ "ಸಮಯ - ಸದಾ ನಿಮ್ಮೊಂದಿಗೆ" ಎಂದು ಪದೇ ಪದೇ ಹೇಳುತ್ತಿದ್ದ ಸಮಯ ಈಗ ನಮ್ಮೊಂದಿಗಿಲ್ಲ.
ಇಲ್ಲಿ ತನಕದ ಸುದ್ದಿ-ಕಾಲಂ9 ಬ್ಲಾಗ್ ಕೃಪೆ

ಮಿಕ್ಕಂತೆ ನಮ್ಮ ವರದಿಗಾರರು ಕಂಡಂತೆ: ಜನಶ್ರೀ ತೊರೆದ ಅನಂತ ಚಿನಿವಾರರು ಸುವರ್ಣ ಸೇರಿದ ಮೇಲೆ ವಾರ್ತಾ ವಾಚಕ ಚಂದನ್ ಶರ್ಮ, ರಾಜಕೀಯ ವರದಿಗಾರ ಈಶ್ವರ್ ಅವರು ಜನಶ್ರೀಯಿಂದ ಸುವರ್ಣ ಸುದ್ದಿ ವಾಹಿನಿ ಹಾರಿದ್ದಾರೆ. ಟಿವಿ 9 ಕನ್ನಡ ವಾಹಿನಿಯಿಂದ ಲಕ್ಷ್ಮಣ್ ಹೂಗಾರ್ ಅವರು ಸುವರ್ಣ ಸುದ್ದಿ ವಾಹಿನಿ ಜಗಲಿಗೆ ಒರಗಿಕೊಂಡಿದ್ದಾರೆ.

ರಮಾಕಾಂತ್, ಸೌಮ್ಯ ರಾಮನಗರ ಜೋಡಿ ಕೂಡಾ ಜನಶ್ರೀ ಬಿಟ್ಟು ಸುವರ್ಣ ಪಥದತ್ತ ಹೆಜ್ಜೆ ಹಾಕುತ್ತಾರೆ ಎಂಬ ಸುದ್ದಿ ಇದೆ. ವಾರ್ತಾ ವಾಚಕಿ, ನಿರೂಪಕಿ ಶ್ರೀಲಕ್ಷ್ಮಿ ಅವರು ಇನ್ನೂ ಜನಶ್ರೀ ಬಿಡುವ ಬಗ್ಗೆ ಗೊಂದಲದಲ್ಲಿದ್ದಾರೆ.

ನಿಮ್ಮ ಗಮನಕ್ಕೆ: ಉದಯ ನ್ಯೂಸ್, ಟಿವಿ9, ಸುವರ್ಣ ನ್ಯೂಸ್ 24×7, ಜನಶ್ರೀ, ಪಬ್ಲಿಕ್ ಟಿವಿ, ಕಸ್ತೂರಿ ನ್ಯೂಸ್ 24, ರಾಜ್ ನ್ಯೂಸ್ ಕನ್ನಡ ಈಗಿರುವ ಸುದ್ದಿ ವಾಹಿನಿಗಳು. ಈ ಪಟ್ಟಿಗೆ ಈಟಿವಿ ನ್ಯೂಸ್ ಚಾನೆಲ್ ಹೊಸದಾಗಿ ಸೇರ್ಪಡೆಯಾಗಲು ಕಾದಿದೆ.

English summary
Kannada TV news channel Samaya TV stopped its broadcasting in many parts of Karnataka. Several Big wigs like Satish Jarakiholi,Murugesh Nirani tried to uplift the condition but failed miserably in TRP war with other channels. Janasri likely to follow Samaya TV soon says report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X