ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್ ಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ : ಹೈಕೋರ್ಟ್

|
Google Oneindia Kannada News

High Court
ಬೆಂಗಳೂರು, ಜು.10 : ಬಾರ್ ಹಾಗೂ ಡಿಸ್ಕೋಥೆಕ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಮೂರು ತಿಂಗಳಿನಲ್ಲಿ ಜಾರಿಗೊಳಿಸಬೇಕು. ಬಾರ್ ಮಾಲೀಕರ ಮೇಲೆ ಇದನ್ನು ಬಲವಂತವಾಗಿ ಹೇರಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಮಹಿಳಾ ಉದ್ಯೋಗಿಗಳ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ಹಾಗೂ ಕೆಲ ಬಾರ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರ ಪೀಠ, ಮಂಗಳವಾರ ಈ ಆದೇಶ ನೀಡಿದೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಾರ ಮತ್ತು ಡಿಸ್ಕೋಥೆಕ್ ಗಳಿಗೆ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಮಾರ್ಗಸೂಚಿ ಪರಿಶೀಲನೆ ನಡೆಸಿದ ನ್ಯಾಯಪೀಠ, ಪರಿಚಾರಿಕೆಯರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಸೂಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು.

ಎರಡು ತಿಂಗಳುಗಳ ಕಾಲ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು. ಜಾರಿಯಲ್ಲಿರುವ ಮಾರ್ಗಸೂಚಿಯಲ್ಲಿ ಲೋಪ-ದೋಷಗಳು ಇದ್ದರೆ, 90 ದಿನಗಳ ಬಳಿಕ ಸೂಕ್ತ ಕಾನೂನು ತಿದ್ದುಪಡಿ ಮೂಲಕ ಅವುಗಳನ್ನು ಬದಲಾವಣೆ ಮಾಡುವಂತೆ ನ್ಯಾಯಾಲಯ ಆದೇಶಿಸಿತು.

ಮಾರ್ಗಸೂಚಿಗಳನ್ನು ಬಲವಂತವಾಗಿ ಬಾರ್ ಅಥವ ಡಿಸ್ಕೋಥೆಕ್ ಮಾಲೀಕರ ಮೇಲೆ ಸರ್ಕಾರ ಹೇರಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ವಸ್ತ್ರ ಸಂಹಿತೆ ಮತ್ತು ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಸಂಬಂಧ ಯಾವುದೇ ವಿನಾಯಿತಿ ನೀಡಲು ನ್ಯಾಯಾಲಯ ನಿರಾಕರಿಸಿತು.

ವಸ್ತ್ರ ಸಂಹಿತೆ : ಪರಿಚಾರಕಿಯರು ಪಾದದವರೆಗೆ ಪ್ಯಾಂಟ್ ಮತ್ತು ಪೂರ್ತಿ ತೋಳಿನ ಅಂಗಿ/ಟೀ ಷರ್ಟ್, ಸಲ್ವಾರ್ ಕಮೀಜ್-ದುಪ್ಪಟ್ಟಾ ಧರಿಸಬೇಕು. ಅಶ್ಲೀಲವಾಗಿ ದೇಹ ಪ್ರದರ್ಶನಕ್ಕೆ ಅವಕಾಶ ಇಲ್ಲ. ಸೀರೆ ಧರಿಸುವ ಅವಕಾಶಕ್ಕೆ ಕೊಕ್ ನೀಡಲಾಗಿದೆ. (ಸರ್ಕಾರ ಮಾರ್ಗಸೂಚಿಯ ಅಂಶಗಳೇನು?)

ಬಾರ್ ಅನುಮತಿ ಪಡೆಯುವ ಸಂದರ್ಭದಲ್ಲೇ ಮಹಿಳಾ ಉದ್ಯೋಗಿಗಳ ಸಮವಸ್ತ್ರದ ಮಾದರಿಯನ್ನು ನೀಡಬೇಕು. ಪ್ರಾಧಿಕಾರ ಸಮ್ಮತಿ ಸೂಚಿಸುವ ವಸ್ತ್ರವನ್ನು ಕಡ್ಡಾಯ ಧರಿಸಬೇಕಾಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ಪೂರ್ಣ ವಿವರ ಒಳಗೊಂಡ ಗುರುತಿನ ಚೀಟಿ ವಿತರಣೆ ಕಡ್ಡಾಯ ಎಂಬುದು ಮಾರ್ಗಸೂಚಿಯ ಪ್ರಮುಖ ಅಂಶವಾಗಿದೆ.

English summary
The High Court of Karnataka allowed women to work as waitresses in bars and restaurants with the condition that they must be aged 21 years and above. The Bench also observed that the new guidelines of the Home Department be adhered to in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X