ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಧೂಮಪಾನಿಗಳೆ ನಿಮಗಿದು ನೆನಪಿರಲಿ

By Prasad
|
Google Oneindia Kannada News

ಬೆಂಗಳೂರು, ಜು. 10 : ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್, ಏಟ್ ಪ್ಯಾಕ್ ಮಾಡುವವರು ಎಷ್ಟು ಶ್ರಮ ವಹಿಸುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಯಾವುದೇ ಶ್ರಮ ವಹಿಸದೇ ತಾವು ಕೂಡ ಸಿಕ್ಸ್ ಪ್ಯಾಕ್, ಏಟ್ ಪ್ಯಾಕ್ ಎಂದು ತಮ್ಮ ಬಗ್ಗೆ ಹೆಮ್ಮೆಯಿಂದ ಹೇಳುವವರೂ ಇದ್ದಾರೆ. ಅವರಾರು ಗೊತ್ತಾ? ಸಿಗರೇಟು ಸೇದುವವರು!

ಸಿಗರೇಟು ಯಾಕೆ ಸೇದುತ್ತಾರೆ? ಶೋಕಿಗಾಗಿಯಾ? ಹಣ ಪೋಲು ಮಾಡಿಲಿಕ್ಕಾ? ಮನಸ್ಸನ್ನು ಹಗುರ ಮಾಡಲಿಕ್ಕಾ? ದುಗುಡವನ್ನು ಕಡಿಮೆ ಮಾಡಲಿಕ್ಕಾ? ಹುಡುಗಿಯರಿಗಾಗಿಯಾ? ಅಪ್ಪ ಸೇದುತ್ತಾನೆಂದಾ? ಅಥವಾ ಸುಖಾ ಸುಮ್ಮನೆಯಾ? ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ಎಂದೂ ದೊರೆಯುವುದಿಲ್ಲ. ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದರೂ ಇದನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಪುರುಷರ ಜೊತೆಗೆ ಮಹಿಳೆಯರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.

ಧೂಮಪಾನ ಮಾಡುವವರ ಜೀವನಶೈಲಿಯ ಅಧ್ಯಯನ ಮತ್ತು ಈ ದುಶ್ಚಟದ ಬಗ್ಗೆ ಜಾಗೃತಿ ಮೂಡಿಸಲೆಂದು ಐಸಿಐಸಿಐ ಲೊಂಬಾರ್ಡ್ ಜೆನರಲ್ ಇನ್ಶೂರನ್ಸ್ ಕಂಪನಿ ನಡೆಸಿದ ಸಮೀಕ್ಷೆ ಅಚ್ಚರಿ ಹುಟ್ಟಿಸುವ ಮತ್ತು ದಂಗು ಬಡಿಸುವ ಅಂಶವನ್ನು ಉಗುಳಿದೆ. ಇಂದಿನ ಯುವಕರು ಯಾಕೆ ಸಿಗರೇಟು ಹವ್ಯಾಸಕ್ಕೆ ಬಲಿಯಾಗುತ್ತಿದ್ದಾರೆ, ಅದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿಯುವ ಪ್ರಯತ್ನವೇ 'ಐಸಿಐಸಿಐ ಲೊಂಬಾರ್ಡ್ ಸ್ಮೋಕಿಂಗ್ ಹ್ಯಾಬಿಟ್ 2013' ಸಮೀಕ್ಷೆ.

ಸಿಗರೇಟು ಸೇವಿಸುವವರಿಗೆ ಇನ್ನು ಮುಂದೆ ಸುಲಭವಾಗಿ ಆರೋಗ್ಯ ವಿಮೆ ಕೂಡ ದೊರೆಯಲಾರದು ಎಂಬುದು ಸ್ಮೋಕ್ ಮಾಡುವವರಿಗೆ ತಿಳಿದಿರಲಿ. ಹಾಗೆಯೆ, ಈ ಅಂಕಿಅಂಶ, ಸತ್ಯ ಸಂಗತಿಗಳನ್ನಾದರೂ ಓದಿದ ಮೇಲೆ ಸಿಗರೇಟು ಸೇವನೆಯ ಚಟವನ್ನು ಆಶ್ ಟ್ರೇಯಲ್ಲಿ ಹೊಸಕಿಹಾಕುತ್ತಾರೆ ಎಂಬ ನಂಬಿಕೆ ನಮ್ಮದು. ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೊಲ್ಕತಾದಲ್ಲಿ ನಡೆಸಿದ ಸಮೀಕ್ಷೆ ಕಂಡುಕೊಂಡ ಅಂಶಗಳೇನು ಮುಂದೆ ಸ್ಲೈಡ್ ಗಳಲ್ಲಿ ಓದಿರಿ.

ಮನೆಯಲ್ಲಿ ಸೇದುವುದು ಸರ್ವೇಸಾಮಾನ್ಯ

ಮನೆಯಲ್ಲಿ ಸೇದುವುದು ಸರ್ವೇಸಾಮಾನ್ಯ

ಬೆಂಗಳೂರಿನಲ್ಲಿ ಶೇ.86ರಷ್ಟು ಜನರು ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಸಿಗರೇಟು ಸೇವನೆ ಮಾಡುತ್ತಾರೆ. ಮನೆಗಳಲ್ಲಿ ಅಥವಾ ಬೇರೆಯವರ ಸ್ಥಳದಲ್ಲಿ ಧೂಮಪಾನ ಮಾಡುವುದು ಬೆಂಗಳೂರಿನಲ್ಲಿ ಸರ್ವೇಸಾಮಾನ್ಯ.

ಬೆಂಗಳೂರಿನಲ್ಲಿ ಶೇ.82ರಷ್ಟು ಪ್ರತಿದಿನ

ಬೆಂಗಳೂರಿನಲ್ಲಿ ಶೇ.82ರಷ್ಟು ಪ್ರತಿದಿನ

ಶೇ.82ರಷ್ಟು ಬೆಂಗಳೂರಿನ ಸಿಗರೇಟು ಸೇವಕರು ಪ್ರತಿದಿನ ಸಿಗರೇಟು ಸೇವಿಸುತ್ತಾರೆ. ಅವರಲ್ಲಿ ಶೇ.43ರಷ್ಟು ಜನರು ಪ್ರತಿದಿನ 2ರಿಂದ 3 ಸಿಗರೇಟು ಸೇದುತ್ತಾರೆ.

ಯೌವನದ ಹೊಸ್ತಿಲಲ್ಲಿ ಸಿಗರೇಟು ಸೇವನೆ

ಯೌವನದ ಹೊಸ್ತಿಲಲ್ಲಿ ಸಿಗರೇಟು ಸೇವನೆ

ಬೆಂಗಳೂರಿನಲ್ಲಿ ಶೇ.60ರಷ್ಟು ಸ್ಮೋಕರ್ಸ್ 16ರಿಂದ 20 ವಯಸ್ಸಿನೊಳಗೆ ಸಿಗರೇಟು ಸೇವನೆಯ ದಾಸರಾಗಿರುವುದಾಗಿ ಹೇಳುತ್ತಾರೆ. ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು.

ಸ್ನೇಹಿತರೊಡನೆ ಸೇದುವುದು ಹೆಚ್ಚು ಇಷ್ಟ

ಸ್ನೇಹಿತರೊಡನೆ ಸೇದುವುದು ಹೆಚ್ಚು ಇಷ್ಟ

ಶೇ.48ರಷ್ಟು ಬೆಂಗಳೂರಿನ ಸಿಗರೇಟು ಸೇವಕರು ತಮ್ಮ ಸಂಬಂಧಿ ಮತ್ತು ಮನೆಯವರೆದುರೇ ಸೇವಿಸುತ್ತಾರೆ. ಶೇ.97ರಷ್ಟು ಜನರು ಸ್ನೇಹಿತರೊಡನೆ ಸಿಗರೇಟು ಸೇವಿಸಲು ಇಚ್ಛಿಸುತ್ತಾರೆ.

ಇಂಥವರಿಗೆ ಏನು ಹೇಳೋಣ?

ಇಂಥವರಿಗೆ ಏನು ಹೇಳೋಣ?

ಶೇ.71ರಷ್ಟು ಬೆಂಗಳೂರಿನ ಸಿಗರೇಟು ಸೇವಿಸುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂಬ ತಿಳಿವಳಿಕೆಯಿದೆ. ಆದರೂ ಸೇದುತ್ತಾರೆ! ಇಂಥವರಿಗೆ ಏನು ಹೇಳೋಣ?

ಚಿದಂಬರ ರಹಸ್ಯ ಭೇದಿಸುವವರು ಯಾರು?

ಚಿದಂಬರ ರಹಸ್ಯ ಭೇದಿಸುವವರು ಯಾರು?

ಇಚ್ಛಾಶಕ್ತಿಯಿಂದ ಸಿಗರೇಟು ಸೇವನೆಯನ್ನು ತ್ಯಜಿಸಲು ಸಾಧ್ಯ ಎಂದು ಶೇ.57ರಷ್ಟು ಬೆಂಗಳೂರಿನ ಸ್ಮೋಕರ್ಸ್ ತಿಳಿದಿದ್ದಾರೆ. ಆದರೂ ಯಾಕೆ ಬಿಡುತ್ತಿಲ್ಲ? ಚಿದಂಬರ ರಹಸ್ಯ ಭೇದಿಸುವವರು ಯಾರು?

226 ಜನರು ಬೆಂಗಳೂರಿನವರು

226 ಜನರು ಬೆಂಗಳೂರಿನವರು

ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾದಲ್ಲಿ 18ರಿಂದ 35 ವರ್ಷದೊಳಗಿನ ಸಿಗರೇಟು ಸೇವನೆ ಚಟಕ್ಕೆ ಬಿದ್ದ 914 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 226 ಜನರು ಬೆಂಗಳೂರಿನವರು.

ಸ್ನೇಹಿತ ಒತ್ತಡ ಅಂತೆ, ಮಣ್ಣು!

ಸ್ನೇಹಿತ ಒತ್ತಡ ಅಂತೆ, ಮಣ್ಣು!

ಸ್ನೇಹಿತರ ಒತ್ತಡ ಅಥವಾ ಸಹವಾಸ ದೋಷದಿಂದ ಶೇ.77ರಷ್ಟು ಜನರು ಸಿಗರೇಟು ಸೇವಿಸಲು ಆರಂಭಿಸಿದ್ದಾರೆ. ಶೇ.42ರಷ್ಟು ಜನರಿಗೆ ಕೆಲಸದಲ್ಲಿನ ಒತ್ತಡವೂ ಸಿಗರೇಟು ಸೇವನೆಗೆ ಪ್ರೇರಕ ಶಕ್ತಿಯಾಗಿದೆ.

ದುಷ್ಪರಿಣಾಮ ಬೀರುವುದಿಲ್ಲವಂತೆ?

ದುಷ್ಪರಿಣಾಮ ಬೀರುವುದಿಲ್ಲವಂತೆ?

ಒಂದು ಮಿತಿಯಲ್ಲಿ ಸಿಗರೇಟು ಸೇವಿಸಿದರೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಶೇ.50ಕ್ಕಿಂತ ಹೆಚ್ಚು ಜನರು ಭಾವಿಸುತ್ತಾರೆ.

ಸಿಗರೇಟು ಸೇವನೆ ಸ್ಟೈಲಿಗಾಗಿ

ಸಿಗರೇಟು ಸೇವನೆ ಸ್ಟೈಲಿಗಾಗಿ

ಸಿಗರೇಟನ್ನು ಸ್ಟೈಲಿಗಾಗಿ ಅಥವಾ ಮತ್ತೊಬ್ಬರನ್ನು ಅನುಕರಣೆ ಮಾಡಿಕೊಂಡು ಸೇದುವವರೇ ಹೆಚ್ಚು. ಕೆಲವರಿಗೆ ಸಿಗರೇಟು ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ.

ತಂಬಾಕು ಸೇವನೆಯಿಂದ ಕ್ಯಾನ್ಸರ್

ತಂಬಾಕು ಸೇವನೆಯಿಂದ ಕ್ಯಾನ್ಸರ್

ಕಳೆದೆರಡು ವರ್ಷಗಳಿಂದ ಶೇ.5ರಷ್ಟು ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ವಿಮೆಗಾಗಿ ಅರ್ಜಿ ಹಾಕಿದವರಲ್ಲಿ ಶೇ.75ರಷ್ಟು ಪುರುಷರು ಮತ್ತು ಶೇ.25ರಷ್ಟು ಮಹಿಳೆಯರು. (ಇದು ಐಸಿಐಸಿಐನ ಆಂತರಿಕ ವಿಶ್ಲೇಷಣೆ)

ಆರೋಗ್ಯ ವಿಮೆ ಮಾಡಿಸಿಲ್ಲ

ಆರೋಗ್ಯ ವಿಮೆ ಮಾಡಿಸಿಲ್ಲ

ಶೇ.58ರಷ್ಟು ಸಿಗರೇಟು ಸೇದುವವರಿಗೆ ಆರೋಗ್ಯ ವಿಮೆ ಮಾಡಿಸಿಲ್ಲ. ಅರ್ಥಾತ್ ಅವರು ಆರೋಗ್ಯ ವಿಮೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಾಮಾಜಿಕ ಮತ್ತು ಮಾನಸಿಕ ಅಂಶಗಳೇ ಹಲವರನ್ನು ಸಿಗರೇಟು ಸೇವನೆಗೆ ಪ್ರೇರೇಪಿಸುತ್ತದೆ.

ಸೆಲೆಬ್ರಿಟಿಗಳನ್ನು ನೋಡಿ ಪ್ರೇರಣೆ

ಸೆಲೆಬ್ರಿಟಿಗಳನ್ನು ನೋಡಿ ಪ್ರೇರಣೆ

ಆಘಾತಕಾರಿ ಸಂಗತಿಯೆಂದರೆ, ಶೇ.30ರಷ್ಟು ಮಹಿಳೆಯರು ಸೆಲೆಬ್ರಿಟಿಗಳು ಚಲನಚಿತ್ರಗಳಲ್ಲಿ ಮತ್ತು ಜಾಹೀರುತುಗಳಲ್ಲಿ ಸಿಗರೇಟು ಸೇದುವುದನ್ನು ನೋಡಿ ಪ್ರೇರಿತರಾಗಿ ಅದರ ದಾಸರಾಗಿದ್ದಾರೆ. ಅವರಲ್ಲಿ ಶೇ.52ರಷ್ಟು ಮಹಿಳೆಯರು ಸಿಗರೇಟು ಬಿಡುವ ಯಾವುದೇ ಯೋಚನೆ ಮಾಡಿಲ್ಲ. ಆದರೆ, ಶೇ.35ರಷ್ಟು ಪುರುಷರು ಸಿಗರೇಟು ಬಿಡುವ ಯೋಚನೆ ಮಾಡಿದ್ದಾರೆ.

ಆರೋಗ್ಯ ವಿಮೆ ಬಗ್ಗೆ ಅನಾದರ

ಆರೋಗ್ಯ ವಿಮೆ ಬಗ್ಗೆ ಅನಾದರ

ಸಿಗರೇಟು ಸೇವಿಸದವರಿಗೆ ಆರೋಗ್ಯ ವಿಮೆ ಮಾಡಿಸುವಾಗ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ ಎಂಬ ಪ್ರಮುಖ ಅಂಶ ಶೇ.65ರಷ್ಟು ಸಿಗರೇಟು ಸೇದುವವರಿಗೆ ಗೊತ್ತೇ ಇಲ್ಲ.

ತಂಬಾಕು ಸಂಬಂಧಿ ರೋಗಕ್ಕೆ ಬಲಿ

ತಂಬಾಕು ಸಂಬಂಧಿ ರೋಗಕ್ಕೆ ಬಲಿ

ತಂಬಾಕು ಸಂಬಂಧಿತ ರೋಗಕ್ಕೆ ತುತ್ತಾದ 46-55 ವರ್ಷ ವಯಸ್ಸಿನ ಗುಂಪಿನಲ್ಲಿ ಪುರುಷರ ಸಂಖ್ಯೆ ಶೇ.31ರಷ್ಟು ಇದ್ದರೆ, ಮಹಿಳೆಯರ ಸಂಖ್ಯೆ ಶೇ.41ರಷ್ಟಿದೆ.

ಸಿಗರೇಟು ತ್ಯಜಿಸಲು ದೃಢಸಂಕಲ್ಪ ಮಾಡಿರಿ

ಸಿಗರೇಟು ತ್ಯಜಿಸಲು ದೃಢಸಂಕಲ್ಪ ಮಾಡಿರಿ

ಸಿಗರೇಟು ಸಂಖ್ಯೆಗಳನ್ನು ಕ್ರಮೇಣ ಇಳಿಸುವುದರಿಂದ ಅಥವಾ ಚ್ಯೂಯಿಂಗ್ ಗಮ್ ಅಗಿಯುವುದರಿಂದ ಸಿಗರೇಟು ಸೇವನೆ ತ್ಯಜಿಸಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಸಿಗರೇಟು ತ್ಯಜಿಸಲು ಮಹಿಳೆಯರೇ ಆಗಲಿ ಪುರುಷರೇ ಆಗಲಿ ದೃಢಸಂಕಲ್ಪ ಮಾಡಬೇಕು. ಮಾಡ್ತೀರಾ?

English summary
ICICI Lombard General Insurance Company Ltd conducted a survey the smoking habits in Bangalore, Delhi, Mumbai and Kolkata to understand the facts which are influencing smoking. Ratio of women smokers is also on the rise. Moreover, there is a need to curb the habit of smoking for a better society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X