ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಾ, ಈ ಎರಡು ಅಭ್ಯಾಸಗಳು ನಿಮಗೆ ಮಾರಕ

By Srinath
|
Google Oneindia Kannada News

ಬೆಂಗಳೂರು, ಜುಲೈ 9: ನೀವು ಬೆಳೆಸಿಕೊಳ್ಳುವ ಅಭ್ಯಾಸಗಳು ಚಟಗಳಾಗಿ ಮಾರ್ಪಟ್ಟರೆ... ಆ ದೇವರೇ ಗತಿ. ಎಚ್ಚರಾ, ಇಲ್ಲೆರಡು (ದುರ)ಅಭ್ಯಾಸಗಳು ಇವೆ. ಅವರೆಡೂ ನಿಮಗೆ ಮಾರಕವಾಗಬಹುದು. ಅಂದರೆ ನಿಮ್ಮನ್ನು ಆರ್ಥಿಕವಾಗಿ ಮತ್ತು ದೈಹಿಕವಾಗಿ ಜರ್ಝರಿತಗೊಳಿಸಬಲ್ಲದು.

ಆಂಗ್ಲ ದೈನಿಕ 'ಬಿಸಿನೆಸ್ ಸ್ಟಾಂಡರ್ಡ್' ಪ್ರಕಾರ ಅವು ಯಾವುವೆಂದರೆ ಕುಡಿತ ಮತ್ತು ಧೂಮಪಾನ. ನಿಮಗರಿವಿಲ್ಲದಂತೆಯೇ, ಇವೆರಡೂ ಮೊದಲು ನಿಮ್ಮ ಜೇಬಿನಲ್ಲಿರುವ ದುಡ್ಡನ್ನು ಕಿತ್ತುಕೊಳ್ಳುತ್ತದೆ. ಆನಂತರ, ಆರೋಗ್ಯವನ್ನೂ ಕಿತ್ತುಕೊಳ್ಳುತ್ತದೆ. ಆಗ ನಿಮ್ಮ ದಯನೀಯ ಸ್ಥಿತಿ ನಿಮ್ಮ ಅರಿವಿಗೆ ಬರುತ್ತದೆ. ಆದರೆ ಅಷ್ಟೊತ್ತಿಗೆ ಎಲ್ಲವೂ ಮುಗಿದಿರುತ್ತದೆ.

ಏಕೆಂದರೆ ಕುಡಿತ/ ಧೂಮಪಾನ ದುರಭ್ಯಾಸದಿಂದ ಆರೋಗ್ಯ ಕೆಟ್ಟರೆ ಆರೋಗ್ಯ ವಿಮೆಯ ರಕ್ಷಾ ಕವಚ ನಿಮಗೆ ಲಭ್ಯವಾಗುವುದಿಲ್ಲ.

ಧೂಮ ಪಾನ ಪ್ರಿಯರೇ...

ಧೂಮ ಪಾನ ಪ್ರಿಯರೇ...

ನೀವು ಧೂಮ ಪಾನ ಪ್ರಿಯರು ಎಂಬುದರ ಬಗ್ಗೆ ವಿಮಾ ಕಂಪನಿಗಳಿಗೆ ಸಣ್ಣ ಅನುಮಾನ ಸುಳಿದರೂ ಕಥೆ ಮುಗಿಯಿತು. ಜಪ್ಪಯ್ಯಾ ಅಂದರೂ ಅವರು ನಿಮಗೆ ವಿಮಾ ಭದ್ರತೆ ಕಲ್ಪಿಸುವುದಿಲ್ಲ. ಅಷ್ಟೇ ಅಲ್ಲ. ಪಾಲಿಸಿದಾರರು ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ದುರ್ಮರಣಕ್ಕೀಡಾದರೆ ಸಾಯುವಾಗ ಅವರ ದೇಹದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ ಎಂದು ವೈದ್ಯರು ಸರ್ಟಿಫಿಕೇಟ್ ನೀಡಿಬಿಟ್ಟರೆ ವಿಮೆ ಪರಿಹಾರ ದೊರಕುವುದಿಲ್ಲ.

ಧೂಮಪಾನಿಗೆ ವಿಮಾ ನಿಯಮ:

ಧೂಮಪಾನಿಗೆ ವಿಮಾ ನಿಯಮ:

ಇನ್ನು ಧೂಮಪಾನಿಯಾಗಿದ್ದರೆ ದಿನಕ್ಕೆ ಎಷ್ಟು ಸಿಗರೇಟು ಸೇದುತ್ತಿದ್ದೀಯಾ? ಎಂದು ಕೇಳಿಕೊಂಡು ವಿಶೇಷವಾಗಿ ವೈದ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವಿಮಾ ನಿಯಮ ಹೇಳುತ್ತದೆ. ಇಂತಹವರಿಗೆ ವಿಮೆ ಸುರಕ್ಷೆ ಇಲ್ಲಾ ಅಂತಲೇ ಕಂಪನಿಗಳು ಹೇಳುವುದು. ಆದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಪ್ರೀಮಿಯಂ ಕಟ್ಟಿ ವಿಮಾ ಯೋಜನೆ ಪಡೆಯಬೇಕಾಗುತ್ತದೆ.

ಹೆಚ್ಚುವರಿ ಪ್ರೀಮಿಯಂ ಕಟ್ಟಿ

ಹೆಚ್ಚುವರಿ ಪ್ರೀಮಿಯಂ ಕಟ್ಟಿ

ಕುಡಿತದ ಚಟ ಇರುವವರಿಗೆ ಮಧುಮೇಹ, ಕಿಡ್ನಿ ವೈಫಲ್ಯ, ಹೃದಯ ರೋಗ ಮುಂತಾದವು ಮುತ್ತಿಕೊಳ್ಳುವುದು ಸಾಮಾನ್ಯ. ಪಾಲಿಸಿ ಮಾಡಿಸುವಾಗ ವೈದ್ಯಕೀಯ ತಪಾಸಣೆಯಿಂದ ಈ ರೋಗ ಲಕ್ಷಣಗಳು ಕಂಡುಬಂದರೆ ಮತ್ತದೇ ಹೆಚ್ಚುವರಿ ಪ್ರೀಮಿಯಂ ಕಟ್ಟಿ ವಿಮಾ ಯೋಜನೆ ಪಡೆಯಬೇಕಾದ ಸ್ಥಿತಿ ನಿಮ್ಮದಾಗುತ್ತದೆ.

ನೀತಿ ಪಾಠ:

ನೀತಿ ಪಾಠ:

ಒಂದು ಈ ಎರಡೂ (ದುರ)ಅಭ್ಯಾಸಗಳನ್ನು ಬಿಟ್ಟುಬಿಡಿ; ಇಲ್ಲವೇ, ಹೆಚ್ಚುವರಿ ಪ್ರೀಮಿಯಂ ಕಟ್ಟಿ ವಿಮಾ ಯೋಜನೆ ಪಡೆಯಿರಿ. ಆಯ್ಕೆ ನಿಮ್ಮದು!

ಒಳಗುಟ್ಟು:

ಒಳಗುಟ್ಟು:

ಈ ಎರಡೂ (ದುರ)ಅಭ್ಯಾಸಗಳು ನಿಮಗೆ ಇಲ್ಲವಾದಲ್ಲಿ ನೀವು ಹೆಚ್ಚು ಆರೋಗ್ಯದಿಂದ ನಳನಳಿಸುತ್ತೀರಿ. ಜತೆಗೆ ನಿಮ್ಮ ಹಣಕಾಸು ಆರೋಗ್ಯವೂ ತನ್ನಷ್ಟಕ್ಕೆ ತಾನೇ ಉತ್ತಮವಾಗಿರುತ್ತದೆ. ಏನಂತೀರಿ?

English summary
Take Care- Two habits that could get you in deep insurance trouble. Drinking, or Smoking, not only do these habits have an adverse effect on your health, but even getting a health insurance cover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X