ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್, ಡ್ಯಾನ್ಸ್‌ಬಾರ್ ಗಳಿಗೆ ಬಂತು ವಸ್ತ್ರ ಸಂಹಿತೆ!

|
Google Oneindia Kannada News

ಬೆಂಗಳೂರು, ಜು.9 ರಾಜ್ಯದಲ್ಲಿನ ಪಬ್‌, ಡ್ಯಾನ್ಸ್‌ ಬಾರ್ ಹಾಗೂ ಲೇಡಿಸ್‌ ಸರ್ವೀಸ್‌ ಬಾರ್ ಸೇರಿದಂತೆ ಮನರಂಜನಾ ಕೇಂದ್ರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ.

ಸೋಮವಾರ ರಾಜ್ಯ ಗೃಹ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದ್ದು, ಪರಿಚಾರಕಿಯರ ಸುರಕ್ಷತೆ ಮತ್ತು ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದೆ. ಮನರಂಜನಾ ಕೇಂದ್ರದಲ್ಲಿ ಖಾಸಗಿ ಭದ್ರತೆ ಸೇರಿದಂತೆ ಸ್ವಚ್ಛತೆ, ಪಾರ್ಕಿಂಗ್‌ ಸೌಕರ್ಯ, ಪರವಾನಗಿ ನವೀಕರಣ ಮುಂತಾದ ವಿಷಯಗಳ್ನು ಇದರಲ್ಲಿ ಅಳವಡಿಸಲಾಗಿದೆ.

ಪರವಾನಗಿ ಅವಧಿ ಕಡಿತ : ಮನರಂಜನಾ ಕೇಂದ್ರಗಳ ಪರವಾನಗಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಲಾಗಿದ್ದು, ಪ್ರತಿ ವರ್ಷ ಅದನ್ನು ಮಾಲೀಕರು ನವೀಕರಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ಹೇಳಿದೆ.

ಬೆಂಗಳೂರಿನ ಕೆಲವು ಬಾರ್ ಮತ್ತು ರೆಸ್ಟೋರೆಂಟ್ ಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ ಎಂದು ಸರ್ಕಾರ ಅವುಗಳನ್ನು ಮುಚ್ಚಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಬಾರ್ ಮಾಲೀಕರ ಸಮಸ್ಯಗೆ ಸ್ಪಂದಿಸಿದ ಕೋರ್ಟ್ ಮಾರ್ಗಸೂಚಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಯಲದ ಆದೇಶದ ಹಿನ್ನಲೆಯಲ್ಲಿ ಈ ಮಾರ್ಗಸೂಚಿ ಪ್ರಕಟಗೊಂಡಿದೆ. ಮಾರ್ಗಸೂಚಿಯಲ್ಲಿ ಏನಿದೆ.

ಪರಿಚಾರರಕಿಯರ ಸುರಕ್ಷತೆಗೆ ಒತ್ತು

ಪರಿಚಾರರಕಿಯರ ಸುರಕ್ಷತೆಗೆ ಒತ್ತು

* ಪರಿಚಾರಕಿಯರ ವಯಸ್ಸು 21 ವರ್ಷ ಆಗಿರಬೇಕು
* ವಸ್ತ್ರ ಸಂಹಿತೆ ಕಡ್ಡಾಯ. ಪರಿಚಾರಕಿಯರು ಪ್ಯಾಂಟ್‌, ಟೀ ಶರ್ಟ್‌, ಸಲ್ವಾರ್ ಕಮೀಜ್‌ ಧರಿಸಬೇಕು.
* ಮಹಿಳಾ ನೌಕರರ ಕುರಿತು ಸಲ್ಲಿಸುವ ಮಾಹಿತಿಗಳಿಗೆ ಮಾಲಿಕರು ಹೊಣೆಗಾರರು.
* ಪರಿಚಾರಕಿಯರಿಗೆ ಆರೋಗ್ಯ ಸೌಲಭ್ಯ, ಇಎಸ್‌ಐ ಹಾಗೂ ಭವಿಷ್ಯ ನಿಧಿ (ಪಿಎಫ್) ಸೌರ್ಕಯ ಕಡ್ಡಾಯ.
* ಉದ್ಯೋಗಕ್ಕೆ ಸೇರುವ ಮುನ್ನ ಪರಿಚಾರಕಿಯರಿಂದ ಸ್ವ ಇಚ್ಛಾ ಹೇಳಿಕೆ ಪಡೆಯಬೇಕು.

ಪಬ್ ಗಳಲ್ಲಿ ಯಾವುದು ನಿಷಿದ್ಧ

ಪಬ್ ಗಳಲ್ಲಿ ಯಾವುದು ನಿಷಿದ್ಧ

* ಹಣ ಎಸೆಯುವುದು, ಅಂಗಾಂಗ ಚೇಷ್ಟೆಗಳು ಸೇರಿದಂತೆ ಯಾವುದೇ ದುರ್ವರ್ತನೆಗಳು ನಿಷಿದ್ಧ.
* ಡ್ಯಾನ್ಸ್‌ ಬಾರ್ ಗಳಲ್ಲಿ ಗ್ರಾಹಕರು ಮಾತ್ರ ನರ್ತಿಸಬೇಕು.
* ಪರಿಚಾರಕಿ ಸೇರಿದಂತೆ ಯಾವುದೇ ಉದ್ಯೋಗಿಯ ಭಾವಚಿತ್ರ ಹಾಗೂ ದೃಶ್ಯಾವಳಿ ಸೆರೆ ಹಿಡಿಯುವುದು ನಿಷಿದ್ಧ.
* ಮನರಂಜನಾ ಕೇಂದ್ರ ವ್ಯಾಪ್ತಿಯಲ್ಲಿ ಖಾಸಗಿ ಭದ್ರತೆ ಕಲ್ಪಿಸುವುದು.
* ಅನುಮಾನಾಸ್ಪದ ವ್ಯಕ್ತಿಗಳು, ರೌಡಿಗಳು ಆಗಮಿಸಿದರೆ ಪೊಲೀಸರಿಗೆ ಮಾಹಿತಿ ಕೊಡುವುದು ಕಡ್ಡಾಯ.

ಸಿಸಿಟಿವಿ ಅಳವಡಿಕೆ ಕಡ್ಡಾಯ

ಸಿಸಿಟಿವಿ ಅಳವಡಿಕೆ ಕಡ್ಡಾಯ

* ಕಡ್ಡಾಯವಾಗಿ ಸಿಸಿಟಿವಿ (ಕನಿಷ್ಠ 24 ಮೆಗಾಪಿಕ್ಸೆಲ್‌ ಕ್ಯಾಮರಾ) ಅಳವಡಿಸಬೇಕು.
* ಸಿಸಿಟಿವಿ ದೃಶ್ಯಾವಳಿಗಳನ್ನು ಆಡಳಿತ ಮಂಡಳಿ ಕನಿಷ್ಠ ಮೂರು ತಿಂಗಳವರೆಗೆ ಸಂಗ್ರಹಿಸಬೇಕು.
* ಪರಿಚಾರಕಿಯರ ವೈಯಕ್ತಿಕ ಮಾಹಿತಿ ಸ್ಥಳೀಯ ಪೊಲೀಸ್‌ ಠಾಣೆ ಹಾಗೂ ಕಾರ್ಮಿಕ ಇಲಾಖೆಗೆ ಸಲ್ಲಿಸಬೇಕು.
* ಪರಿಚಾರಕಿಯರ ಭಾವಚಿತ್ರ, ಮತದಾರ ಗುರುತಿನ ಚೀಟಿ ಹಾಗೂ ಕಾಯಂ ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಸಲ್ಲಿಸಬೇಕು.

ಕನಿಷ್ಠ ವೇತನ, ಉಚಿತ ಸಾರಿಗೆ ಸೌಲಭ್ಯ

ಕನಿಷ್ಠ ವೇತನ, ಉಚಿತ ಸಾರಿಗೆ ಸೌಲಭ್ಯ

* ನೌಕರರಿಗೆ ಕನಿಷ್ಠ ವೇತನ, ಸೌಲಭ್ಯವನ್ನು ಕಲ್ಪಿಸುವುದು ಕಡ್ಡಾಯ.
* ಗೌರವ ಧನ ಅಥವಾ ವೇತನವನ್ನು ಬ್ಯಾಂಕ್‌ (ಚೆಕ್‌ ಮತ್ತು ಇಸಿಎಸ್‌) ಮೂಲಕ ಪಾವತಿಸಬೇಕು.
* ನೌಕರರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಬೇಕು.
* ನೇಮಕಾತಿಯಾದ ಕಾರ್ಯ ಸ್ಥಾನದಲ್ಲೇ ಕಾರ್ಯನಿರ್ವಹಣೆ. ನೌಕರರ ಕಾರ್ಯ ಸ್ಥಾನ ಬದಲಾವಣೆ ಮಾಡಬಾರದು.
* ಮಹಿಳಾ ನೌಕರರು ಉದ್ಯೋಗ ತೊರೆದರೆ ಅಥವಾ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೂಬ್ಬರು ನಿಯೋಜಿತರಾದರೆ 10 ದಿನದೊಳಗೆ ಪರವಾನಗಿ ಮಂಜೂರಾತಿ ಪ್ರಾಧಿಕಾರದ ಗಮನಕ್ಕೆ ತರಬೇಕು.

ಗ್ರಾಹಕರು ಗನ್ ಹಿಡಿದು ಬರುವಂತಿಲ್ಲ

ಗ್ರಾಹಕರು ಗನ್ ಹಿಡಿದು ಬರುವಂತಿಲ್ಲ

* ಮನರಂಜನಾ ಕೇಂದ್ರಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಸಲ್ಲಿಸಬೇಕು.
* ಮನರಂಜನಾ ಸ್ಥಳಕ್ಕೆ ಪೊಲೀಸರ ಹೊರತು ಬೇರೆ ಯಾರಿಗೂ ಬಂದೂಕು ಕೊಂಡೊಯ್ಯುವ ಅಧಿಕಾರವಿಲ್ಲ.
* ಕೇಂದ್ರದಲ್ಲಿ ನಿಯಮ ಉಲ್ಲಂಘನೆಯಾದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯ ಮತ್ತು ಸರ್ಕಾರದ ಅಧೀನ ಇಲಾಖೆಗಳಿಗೆ ಸಲ್ಲಿಸಬೇಕು.

English summary
The Home department has come out with a dress code for women serving liquor at bars and other places of public entertainment. The dress code, which is part of a set of guidelines for places of entertainment, will have to be approved by the licensing authority - the Bruhat Bangalore Mahanagara Palike or Town Municipal Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X