ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ನೋಂದಣಿ: ಕರ್ನಾಟಕ ಯಾವ ಸ್ಥಾನದಲ್ಲಿದೆ?

By Srinath
|
Google Oneindia Kannada News

kerala-tops-in-aadhaar-enrolment
ತಿರುವನಂತಪುರ, ಜುಲೈ 9: ಸಾಕ್ಷರರ ನಾಡು ಕೇರಳ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಕೇಂದ್ರ ಸರಕಾರದ ವಿಶಿಷ್ಟ ಗುರುತಿನ ಚೀಟಿಯಾದ 'ಆಧಾರ್' ನೋಂದಣಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಕೇರಳದ ಜನಸಂಖ್ಯೆ 3.3 ಕೋಟಿ. ಈ ಪೈಕಿ ಈಗಾಗಲೇ 3.1 ಕೋಟಿ ಮಂದಿ ಆಧಾರ್ ಗೆ ಅಂಕಿತರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಆಧಾರ ನೋಂದಣಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಉಳಿದ 0.2 ಕೋಟಿ ಮಂದಿಯ ಆಧಾರ್ ನೋಂದಣಿ ಪ್ರಕ್ರಿಯೆ ನಡೆದಿದ್ದು, ಶೀಘ್ರವೇ ರಾಜ್ಯದಲ್ಲಿ ಎಲ್ಲರಿಗೂ ಆಧಾರ್ ಸಂಖ್ಯೆ ಪ್ರಾಪ್ತಿಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆಯ್ತು ಕೇರಳ ಮೊದಲಿದೆ, ನಂತರ ಯಾವ ರಾಜ್ಯ?:
ಆಂಧ್ರ ಪ್ರದೇಶದ 9 ಕೋಟಿ ಜನಸಂಖ್ಯೆಯಲ್ಲಿ 7 ಕೋಟಿ ಜನ ಆಧಾರ್ ಸಹಿತರಾಗಿದ್ದಾರೆ. ಆದರೆ, ಕನ್ನಡಿಗ ನಂದನ ನಿಲೇಕಣಿ ಅವರೇ ಆಧಾರ್ ಯೋಜನೆಯ ಚುಕ್ಕಾಣಿ ಹಿಡಿದಿದ್ದರೂ ಕರ್ನಾಟಕದಲ್ಲಿ ಆಧಾರ್ ನೋಂದಣಿ ಮಂದಗತಿಯಲ್ಲಿ ಸಾಗಿದೆ. ಹತ್ತಾರು ಅಡೆತಡೆಗಳು/ ಕಂಟಕಗಳು ನೋಂದಣಿದಾರರನ್ನು ಹೈರಾಣಗೊಳಿಸಿದೆ.

ತಾಜಾ ಜನಗಣತಿ ಮಾಹಿತಿಯಂತೆ ರಾಜ್ಯದಲ್ಲಿ 6.2 ಕೋಟಿ ಜನರಿದ್ದಾರೆ. ಆದರೆ ಎಲ್ಲರಿಗೂ ಆಧಾರ್ ದೊರೆತಿಲ್ಲ. ಇನ್ನೊಂದು ವರ್ಷದಲ್ಲಿ ರಾಜ್ಯದ ಅಷ್ಟೂ ಮಂದಿಗೆ ಆಧಾರ್ ಕಾರ್ಡ್ ವಿತರಿಸಲಾಗುವುದು ಎಂದು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ Unique Identification Authority of India (UIDAI) ಅಧ್ಯಕ್ಷ ನಂದನ ನಿಲೇಕಣಿ ಹೇಳಿದ್ದರು.

ಇನ್ನು, ದೇಶದಲ್ಲಿ ಈಗಾಗಲೇ 40 ಕೋಟಿ ಜನರು ಆಧಾರ್ ಯೋಜನೆಯಡಿ ನೋಂದಣೆ ಮಾಡಿಸಿಕೊಂಡಿದ್ದಾರೆ. ಇವರ ಪೈಕಿ 35 ಕೋಟಿ ಜನರಿಗೆ ಆಧಾರ್ ಕಾರ್ಡ್ ತಲುಪಿದೆ.

English summary
Kerala tops in Aadhaar Enrolment. Of the state's 3.3 crore population, more than 3.1 crore have been enrolled. This is the highest enrolment by any state in the country. In Andhra Pradesh, seven crore of the total nine crore population have been enrolled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X