ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸ್ ಮೇಲೆ ಅತ್ಯಾಚಾರವೆಸಗಿದ ಡಾಕ್ಟರ್ ಬಂಧನ

By Pti
|
Google Oneindia Kannada News

ರಾಯಗಡ, ಜು.9: ನರ್ಸ್ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರನ್ನು ರಾಯಗಡ ಪೊಲೀಸರು ಬಂಧಿಸಿದ್ದಾರೆ. ಡಾ.ಸುಧಾಂಶು ಗುಪ್ತಾ (31) ಎಂಬುವವರೇ ಬಂಧನಕ್ಕೊಳಗಾಗಿರುವ ವೈದ್ಯ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ರಾಯಗಡ ಪೊಲೀಸ್ ಸೂಪರಿಂಟೆಂಡೆಂಟ್ ರಾಹುಲ್ ಭಗತ್, "26 ವರ್ಷದ ದಲಿತ ನರ್ಸ್ ಕೊಟ್ಟ ದೂರಿನ ಅನ್ವಯ ಓಪಿ ಜಿಂದಾಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ.ಸುಧಾಂಶು ಗುಪ್ತಾ ಅವರನ್ನು ಬಂಧಿಸಿದ್ದೇವೆ" ಎಂದು ತಿಳಿಸಿದ್ದಾರೆ.

Doctor arrested for raping nurse Read more at: https://www.oneindia.com/2013/07/09/doctor-arrested-for-raping-nurse-promising-marriage-1255562.html
ಡಾ.ಗುಪ್ತಾ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಅತ್ಯಾಚಾರ ಬಾಧಿತೆ ನರ್ಸ್ ಆಸ್ಪತ್ರೆಯಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮದುವೆಯಾಗುತ್ತೇನೆ ಎಂದು ಆಕೆಯನ್ನು ನಂಬಿಸಿ ಕಳೆದ ಒಂದು ವರ್ಷದಿಂದ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಡೆಗೆ ಕೆಳಜಾತಿಯವಳು ಎಂಬ ಕಾರಣಕ್ಕೆ ಆಕೆಯನ್ನು ವರಿಸಲು ವೈದ್ಯ ಮಹಾಶಯ ನಿರಾಕರಿಸಿದ್ದ.

ಈ ಹಿನ್ನೆಲೆಯಲ್ಲಿ ನರ್ಸ್ ಕೋಟ್ರಾ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆಗಳ ಬಳಿಕ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ರೇಪ್) ಹಾಗೂ 3(1)12 of SC/ST ಕಾನೂನಿನ ಅಡಿ ಗುಪ್ತಾ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

ಈ ಕೇಸಿನ ಹಿನ್ನೆಲೆಯಲ್ಲಿ ಗುಪ್ತಾ ಅವರನ್ನು ಬಂಧಿಸಲಾಯಿತು. ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಜಿಕೆ ನೀಲಂ ಅವರು ಗುಪ್ತಾ ಅವರಿಗೆ ಜಾಮೀನು ನಿರಾಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ವಿಚಾರಣೆ ನಡೆಯುತ್ತಿದೆ. (ಪಿಟಿಐ)

English summary
A 31-year-old doctor of a private hospital was arrested for allegedly raping a dalit nurse on the pretext of marrying her in Chhattisgarh's Raigarh district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X