ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈದುಂಬಿ ಧುಮ್ಮಿಕ್ಕುತ್ತಿದೆ ಜೋಗದ ಜಲಪಾತ

By ಜಿ.ಎಸ್. ಜಯಕೃಷ್ಣ, ತಲವಾಟ
|
Google Oneindia Kannada News

ಕಾರ್ಗಲ್, ಜು. 9 : ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆಯಾದರೂ ನೋಡಲೇಬೇಕಾದ ಜೋಗ್ ಜಲಪಾತ ಮತ್ತೆ ತನ್ನ ಮೈಸಿರಿ ತುಂಬಿಕೊಂಡು ಧುಮ್ಮಿಕ್ಕುತ್ತಿದೆ. ಕಳೆದ ವರ್ಷ ಮಳೆಯಿಲ್ಲದೆ ಬರಡಾಗಿ ನಿಂತಿದ್ದ ಜೋಗದ ಗುಂಡಿ ಈ ವರ್ಷ ತನ್ನ ವೈಭವವನ್ನು ಮರಳಿ ಪಡೆದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜೂನ್ ತಿಂಗಳಲ್ಲಿ ಮತ್ತು ಜುಲೈ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ನದಿಗಳೆಲ್ಲ ತುಂಬಿ ಹರಿಯುತ್ತಿವೆ. 831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ್ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜೋಗದಲ್ಲಿ ದಿನದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ಭಾನುವಾರ ಅಂದಾಜು 20 ಸಾವಿರ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ.

ಮುಂಗಾರು ಮಳೆ ಭೋರ್ಗರೆದು ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವುದು ಮಾತ್ರವಲ್ಲ, ಪ್ರವಾಸಿಗರಿಗೂ ಜೋಗ ಜಲಪಾತ ವೀಕ್ಷಿಸಲು ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದೆ. ಮತ್ತೆ ಇಂಥ ವೈಭೋಗ ನೋಡಲು ಸಿಗುವುದೋ ಇಲ್ಲವೋ ಎಂದು ಪ್ರವಾಸಿಗರು ಜೋಗದತ್ತ ಪಯಣ ಬೆಳೆಸುತ್ತಿದ್ದಾರೆ.

ಕಳೆದ ವರ್ಷ ಮುಂಗಾರು ದುರ್ಬಲವಾದ ಕಾರಣ ಜಲಪಾತಕ್ಕೆ ರಂಗೇರಿರಲಿಲ್ಲ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಸಾಕಷ್ಟು ಮಳೆಯಾಗಿದ್ದು, ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಮತ್ತು ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಈ ವರ್ಷ ಜುಲೈ ತಿಂಗಳ ಅಂತ್ಯದಲ್ಲಿ ಜಲಪಾತ ವೈಭವ ಮರುಕಳಿಸುವ ಸಾದ್ಯತೆ ಇದೆ. [ಜೋಗ ಪ್ರವಾಸ ಮಾರ್ಗದರ್ಶಿ]

ಮುಂಗಾರು ಮಳೆಯ ವೈಭೋಗ

ಮುಂಗಾರು ಮಳೆಯ ವೈಭೋಗ

ಮುಂಗಾರು ಮಳೆ ಕನ್ನಡ ಚಿತ್ರದಲ್ಲಿ ಯೋಗರಾಜ್ ಭಟ್ಟರು ಜೋಗ್ ಜಲಪಾತವನ್ನು ಅದ್ಭುತವಾಗಿ ಸೆರೆಹಿಡಿದಿದ್ದರು. ಅಂಥ ವೈಭೋಗ ಜೋಗಕ್ಕೆ ಮತ್ತೆ ಮರಳಿಬಂದಿದೆ. ಪ್ರವಾಸಿಗರು ತಂಡೋಪತಂಡವಾಗಿ ಜೋಗದತ್ತ ಧಾವಿಸುತ್ತಿದ್ದಾರೆ. ಸುತ್ತಮುತ್ತ ಉಳಿದುಕೊಳ್ಳಲು ಅನೇಕ ಹೋಂ ಸ್ಟೇಗಳು ಕೂಡ ಇವೆ.

ಇರೋದ್ರೊಳಗೆ ಒಮ್ಮೆ ನೋಡು ಜೋಗ ಗುಂಡಿ

ಇರೋದ್ರೊಳಗೆ ಒಮ್ಮೆ ನೋಡು ಜೋಗ ಗುಂಡಿ

ಇರೋದ್ರೊಳಗೆ ಒಮ್ಮೆ ನೋಡಬೇಕಾದ ಜೋಗ ಗುಂಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದ್ದು, ಬೆಂಗಳೂರಿನಿಂದ 340 ಕಿ.ಮೀ. ದೂರದಲ್ಲಿದೆ.

ಜೋಗ ಅಂದ್ರೇನೇ ಜಲಪಾತ

ಜೋಗ ಅಂದ್ರೇನೇ ಜಲಪಾತ

ತಮಾಷೆ ಅಂದ್ರೆ ಜೋಗ ಅಂದ್ರೇನೇ ಜಲಪಾತ ಯಾನೆ ಫಾಲ್ಸ್. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜಲಪಾತಕ್ಕೆ ಜೋಗ ಅಂದ ಕರೀತಾರೆ. ಹಾಗಿದ್ರೆ, ಜೋಗ ಜಲಪಾತವನ್ನು 'ಜಲಪಾತ ಜಲಪಾತ' ಅಂತ ಕರೆಯಬಹುದು!

ದೇಶದ ಎರಡನೇ ಅತಿ ಎತ್ತರದ ಫಾಲ್ಸ್

ದೇಶದ ಎರಡನೇ ಅತಿ ಎತ್ತರದ ಫಾಲ್ಸ್

831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಅತಿ ಹೆಚ್ಚು ಮಳೆ ಪಡೆಯುವ ಚಿರಾಪುಂಜಿಯಲ್ಲಿರುವ ನೋಹಕಾಲಿಕೈ ಜಲಪಾತ ದೇಶದ ಅತಿ ಎತ್ತರ ಜಲಪಾತ (1100 ಅಡಿ).

ಸುತ್ತಮುತ್ತ ಅನೇಕ ನೋಡತಕ್ಕ ಸ್ಥಳಗಳು

ಸುತ್ತಮುತ್ತ ಅನೇಕ ನೋಡತಕ್ಕ ಸ್ಥಳಗಳು

ಸಾಗರದಿಂದ 35 ಕಿ.ಮೀ. ದೂರದಲ್ಲಿರುವ ಜೋಗ ಜಲಪಾತದ ಸುತ್ತಮುತ್ತ ಅನೇಕ ನೋಡತಕ್ಕ ಸ್ಥಳಗಳಿವೆ. ಲಿಂಗನಮಕ್ಕಿ ಜಲಾಶಯದಲ್ಲಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೂ ಭೇಟಿ ನೀಡಬಹುದು.

English summary
Jog falls, one of the finest places to be seen in Shimoga, Karnataka, has got back it's old splendor due to heavy rain in Sharavati river basin. Thousands of travellers are heading towards Jog to have a glimpse of the falls which dives from the height of 831 ft. Don't miss it this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X