ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕರ್ ಗಳಿಗೆ ಬೆಂಗಳೂರು ಉತ್ತಮ ನಗರವಂತೆ!

|
Google Oneindia Kannada News

hacker
ಬೆಂಗಳೂರು, ಜು.9 : ಐಟಿ ಸಿಟಿ ಬೆಂಗಳೂರು ಸದ್ಯ ಹ್ಯಾಕರ್ ಗಳ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂಬ ಮಾಹಿತಿ ಬಯಲಾಗಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಲ್ಲಿ ಹ್ಯಾಕಿಂಗ್ ಪ್ರಕರಣಗಳೇ ಹೆಚ್ಚಿವೆ.

ಇತ್ತೀಚಿನ ಕೆಲವು ಸರ್ಕಾರಿ ಮಾಹಿತಿಗಳು ಹ್ಯಾಕರ್ ಗಳ ಪಾಲಿಗೆ ಬೆಂಗಳೂರು ಸ್ವರ್ಗವಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಿವೆ. 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 53 ನಗರಗಳ ಸಮೀಕ್ಷೆ ನಡೆಸಿದಾಗ ಈ ಮಾಹಿತಿ ಬಯಲಾಗಿದೆ.

ಅತಿ ಹೆಚ್ಚು ಹ್ಯಾಕಿಂಗ್ ಪ್ರಕರಣ ದಾಖಲಾಗಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮಾತ್ರವಲ್ಲ, ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಹ್ಯಾಕರ್ ಗಳ ಹಾವಳಿ ಹೆಚ್ಚಾಗುತ್ತಿದೆ.

ಭಾರತದಲ್ಲಿ ಅಪರಾಧ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಅಪರಾಧ ವಿಭಾಗ 2012ರ ವಿವಿಧ ನಗರಗಳ ಅಪರಾಧ ಚಟುವಟಿಕೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಹ್ಯಾಕಿಂಗ್ ಪ್ರಕರಣಗಳು 2012ರಲ್ಲಿ ಹೆಚ್ಚಾಗಿವೆ ಎಂಬ ಮಾಹಿತಿ ಇದೆ.

ಎಷ್ಟು ಪ್ರಕರಣಗಳು : ಬೆಂಗಳೂರಿನಲ್ಲಿ 2012ರಲ್ಲಿ ಒಟ್ಟು 323 ಹ್ಯಾಕಿಂಗ್ ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್, ದೆಹಲಿ ಮತ್ತು ಚೆನ್ನೈ ನಗರಗಳಿಗೆ ಹೋಲಿಸಿದರೆ ಇದು ಬಹಳ ಹೆಚ್ಚು. ಹೈದರಾಬಾದ್ ನಲ್ಲಿ 38, ದೆಹಲಿಯಲ್ಲಿ 64 ಮತ್ತು ಚೆನ್ನೈನಲ್ಲಿ 14 ಪ್ರಕರಣಗಳು ದಾಖಲಾಗಿದ್ದರೆ, ವಾಣಿಜ್ಯ ನಗರಿ ಮುಂಬೈನಲ್ಲಿ 40 ಪ್ರಕರಣಗಳು ದಾಖಲಾಗಿವೆ.

2012ರಲ್ಲಿ ದೇಶದಲ್ಲಿ 1,875 ಹ್ಯಾಕಿಂಗ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 2011ರಲ್ಲಿ 95 ಮತ್ತು 2010ರಲ್ಲಿ 23 ಪ್ರಕರಣಗಳು ದಾಖಲಾಗಿದ್ದವು. 2012ರಲ್ಲಿ ಈ ಸಂಖ್ಯೆ 300ರ ಗಡಿದಾಟಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವೇಗವಾಗಿ ಅಭಿವೃದ್ಧಿ ಆಗುತ್ತಿರುವುದರಿಂದ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ. ನಗರದ ಕೆಲವು ಸೈಬರ್ ಸೆಂಟರ್ ಗಳು ಹ್ಯಾಕಿಂಗ್ ದಂಧೆಯಲ್ಲಿ ತೊಡಗಿವೆ ಎಂದು ಸಮೀಕ್ಷೆ ಅಂದಾಜಿಸಿದೆ.

English summary
Bangalore, country’s Cyber Capital, seems to be turning into a haven for hackers said, National Crime Records. Bangalore has recorded total of 323 hacking cases last year according to data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X