ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಡ್ಡೋಡಿ ವಿದ್ಯುತ್ ಸ್ಥಾವರ ಓಡಿಸಿದ ಸಚಿವ ಜೈನ್

By Mahesh
|
Google Oneindia Kannada News

Fishery Minister Abhayachandra jain assurance on UMPP
ಮಂಗಳೂರು, ಜು.8: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಜನರಿಗೆ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ನೆಮ್ಮದಿಯ ಸುದ್ದಿ ನೀಡಿದ್ದಾರೆ.

ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಯೋಜನೆಯ ಹಾರು ಬೂದಿ ಸಹಿಸಿಕೊಳ್ಳಲು ಹೆಣಗಾಡುತ್ತಿರುವ ಹೊತ್ತಿಗೆ ಅಲ್ಟ್ರಾ ಮೆಗಾ ಪವರ್ ವಿದ್ಯುತ್ ಯೋಜನೆಯನ್ನು ಹೊತ್ತುಕೊಂಡು ಸರ್ಕಾರಿ ಸ್ವಾಮ್ಯದ ಎನ್ ಟಿಪಿಸಿ ಸಂಸ್ಥೆ ಬರುವ ಸುದ್ದಿ ಅಪ್ಪಳಿಸಿತ್ತು. ಆದರೆ, ಇಂಥ ಯಾವುದೇ ಸ್ಥಾಪನೆಗೆ ಸರ್ಕಾರ ಮುಂದಾಗಿಲ್ಲ ಎಂದು ಜೈನ್ ಸ್ಪಷ್ಟಪಡಿಸಿದ್ದಾರೆ.

ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆರಂಭದಿಂದಲೇ ವಿರೋಧ ವ್ಯಕ್ತಪಡಿಸಿದ್ದೆ. ನನ್ನ ನಿಲುವಿಗೆ ಈಗಲೂ ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ನೀಡಲಾಗದು ಎಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ.

2011ರಲ್ಲಿ ಉದ್ಯೋಗ ಮಿತ್ರ ಯೋಜನೆಯಡಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ನಿಡ್ಡೋಡಿಯಲ್ಲಿ 200 ಎಕರೆ ಅರಣ್ಯ ಇಲಾಖೆಯ ಸರಕಾರಿ ಜಮೀನನ್ನು ನಿಗದಿಪಡಿಸಿ ಕೇಂದ್ರ ಸರಕಾರಕ್ಕೆ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪ್ರಸ್ತಾವನೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಸಲ್ಲಿಕೆಯಾಗಿದೆಯೇ ಹೊರತು ಆಗಿನ ಮುಖ್ಯಮಂತ್ರಿಯಾಗಲಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಾಗಲಿ ಅಲ್ಲಿನ ವಾಸ್ತವದ ಬಗ್ಗೆ ಮಾಹಿತಿಯನ್ನು ನೀಡಲಾಗಿಲ್ಲ. ಅಲ್ಲಿ ಈ ಯೋಜನೆಗೆ ಜನರ ತೀವ್ರ ವಿರೋಧ ಇದೆ. ಆ ವಿರೋಧಕ್ಕೆ ನನ್ನ ಬೆಂಬಲ ಇಂದಿಗೂ ಅಚಲವಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ತಾನೇ ಖುದ್ದಾಗಿ ಚರ್ಚಿಸಿ ಜನರ ಹಿತ ಕಾಪಾಡಲಾಗುವುದು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಬೆರೆಸಲಾಗದು. ಮಾತ್ರವಲ್ಲದೆ, ಬಜೆಟ್ ಅವೇಶನದ ಬಳಿಕ ಕೇಂದ್ರದ ವಿದ್ಯುತ್ ಸಚಿವರನ್ನೂ ಭೇಟಿಯಾಗಿ ಮನವರಿಕೆ ಮಾಡಿ ಯೋಜನೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಲು ಕೋರಲಿದ್ದೇನೆ ಎಂದು ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಸ್ಥಾವರ ಏಕೆ ಬೇಡ: ಉಡುಪಿ ಜಿಲ್ಲೆ ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಈಗಾಗಲೇ 1200 ಮೆಗಾವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಯೋಜನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಂಗಳೂರು ತಾಲೂಕಿನ ಮುಲ್ಕಿ-ಕಿನ್ನಿಗೋಳಿ- ಮೂಡುಬಿದರೆ ನಡುವೆ ಬರುವ ನಿಡ್ಡೋಡಿ ಎಂಬ ಪುಟ್ಟ ಗ್ರಾಮದಲ್ಲಿ ತಲೆ ಎತ್ತಲು ಹಾತೊರೆಯುತ್ತಿರುವ ನೇಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ ಟಿಪಿಸಿ) ಸಂಸ್ಥೆಯ ಬೃಹತ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕರ್ನಾಟಕ ಸರ್ಕಾರ ಓಕೆ ಎಂಬ ಸುದ್ದಿ ಆತಂಕಕ್ಕೆ ಕಾರಣವಾಗಿತ್ತು.

ಸುಮಾರು 4000 ಮೆ.ವ್ಯಾ ಸಾಮರ್ಥ್ಯದ ಘಟಕದಲ್ಲಿ ಪ್ರತಿ ದಿನ ಸುಮಾರು 55,000 ಟನ್ ಪ್ರಮಾಣದ ಕಲಿದ್ದಲು ಭಸ್ಮವಾಗಲಿದೆ. ಪ್ರತಿದಿನದ ಹಾರುಬೂದಿಯ ಪ್ರಮಾಣ 10,000 ಟನ್ ಗಳನ್ನು ಮೀರಲಿದೆ.

ಜೊತೆಗೆ ಮಾರಕ ಪಾದರಸದ ಪ್ರಮಾಣ 30-40 ಕೆ.ಜಿ ಕೂಡಾ ಸೇರಲಿದೆ. ಇನ್ನೂ ಅನೇಕ ರಾಸಯನಿಕಗಳು ಗಾಳಿಯನ್ನು ಸೇರಲಿದೆ. ಶುದ್ಧ ಕುಡಿಯುವ ನೀರು ಇನ್ಮುಂದೆ ಮರೀಚಿಕೆಯಾಗಲಿದೆ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸಿದ ನಂದಿಕೂರು ಜನಜಾಗೃತಿ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.

English summary
Fishery Minister Abhayachandra jain assured that UMPP will not be set up at Niddodi in Dakshina Kannada and Udupi District. Karnataka Government earlier proposed to plant a Ultra Mega Power Project (UMPP)by NTPC at Niddodi placed in the Mulki-Kinnigoli-Moodabidri route
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X