ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕರಿಂದ ವಿದೇಶಿ ಮಹಿಳೆಯರಿಗೆ ಕಿರುಕುಳ

|
Google Oneindia Kannada News

auto
ಬೆಂಗಳೂರು, ಜು.9: ಬೆಂಗಳೂರಿನಲ್ಲಿ ಆಟೋ ಚಾಲಕರು ವಿದೇಶಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎರಡು ಪ್ರಕರಣಗಳು ದಾಖಲಾಗಿವೆ. ಬನ್ನೇರುಘಟ್ಟ ಮತ್ತು ಕೋರಮಂಗಲ ಠಾಣೆಗಳಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿ ಕಾರ್ಲಾ ಎಂಬ ಯುವತಿ ಚರ್ಚ್ ನಿಂದ ಮನೆಗೆ ಹೋಗಲು ಆಟೋ ಏರಿದ್ದಾಳೆ. ಮೀಟರ್ ಮೇಲೆ 10 ರೂ. ಹೆಚ್ಚು ಕೊಡಬೇಕು ಎಂಬ ಷರತ್ತಿನ ಮೇಲೆ ಆಟೋ ಹತ್ತಿಸಿಕೊಂಡ ಚಾಲಕ, ದಾರಿಯಲ್ಲಿ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮೈ ಮುಟ್ಟಲು ಪ್ರಯತ್ನಿಸಿದ್ದಾನೆ ಎಂದು ಯುವತಿ ಬನ್ನೇರುಘಟ್ಟ ಠಾಣೆಗೆ ದೂರು ನೀಡಿದ್ದಾಳೆ.

ಚಾಲಕ ನನ್ನ ಮೈಮುಟ್ಟಲು ಪ್ರಯತ್ನಿಸಿದ. ನನ್ನ ಮೈಬಣ್ಣವನ್ನು ವರ್ಣಿಸಿ ಕಿರುಕುಳ ನೀಡಿದ. ಕನ್ನಡಿ ಮೂಲಕ ನನಗೆ ಫ್ಲೈಯಿಂಗ್ ಕಿಸ್ ಕೊಟ್ಟು ನನಗೆ ಕಿರುಕುಳ ನೀಡಿದ ಎಂದು ಕಾರ್ಲಾ ಎಂಬ ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. ಆಟೋ ನಂಬರ್ ಪಡೆದಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಪ್ರಕರಣ : ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹೆಬಾ ಮತ್ತು ಮ್ಯಾರೋ ಎಂಬ ಇಬ್ಬರು ವಿದೇಶಿ ಯುವತಿಯರು ದೂರು ನೀಡಿದ್ದಾರೆ. ಆಟೋ ಚಾಲಕ ನಮಗೆ ಉಗಿದು ಹೋಗಿದ್ದಾನೆ ಎಂಬುದು ಯುವತಿಯರ ದೂರು.

ಈ ಇಬ್ಬರು ಯುವತಿಯರು ಸೋಮವಾರ ಬ್ರಿಗೇಡ್ ರಸ್ತೆಯಿಂದ ಕೋರಮಂಗಲಕ್ಕೆ ಹೋಗಲು ಆಟೋ ಹತ್ತಿದ್ದಾರೆ. ಮೀಟರ್ ಮೇಲೆ 100 ರೂ. ಜಾಸ್ತಿ ಕೇಳಿದ ಚಾಲಕ ಇವರನ್ನು ಕರೆದುಕೊಂಡು ಹೊರಟಿದ್ದಾನೆ. ಆಟೋವನ್ನು ವೇಗವಾಗಿ ಓಡಿಸಿ ನಮ್ಮನ್ನು ಗಾಬರಿಗೊಳಿಸಿದ್ದಾನೆ. ನಾವು ವಿಳಾಸ ಕೇಳಲು ನಿಲ್ಲಿಸಲು ಹೇಳಿದರೂ ನಿಲ್ಲಿಸದೆ ಕಿರುಕುಳ ನೀಡಿದ್ದಾನೆ ಎಂದು ಯುವತಿಯರು ಆರೋಪಿಸುತ್ತಾರೆ.

ಆಟೋ ವೇಗವಾಗಿ ಹೋಗುವುದು ಕಂಡು ಕೂಗಿಕೊಂಡ ಯುವತಿಯರನ್ನು ಆಟೋದಿಂದ ಇಳಿಸಿದ ಚಾಲಕ ಹೇಳಿದ ದರಕ್ಕಿಂತ 100 ರೂ. ಜಾಸ್ತಿ ಹೇಳಿದ್ದಾನೆ. ಇವರು ಕೊಡಲು ನಿರಾಕರಿಸಿದಾಗ ಅವರಿಗೆ ಉಗಿದಿದ್ದಾನೆ ಎಂದು ಯವತಿಯರು ಪೊಲೀಸರ ಬಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

English summary
Auto drivers harassed foreign passengers in Bangalore. Two causes reported in Bannerghatta and Koramangala police station limits. police registered the case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X