• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರ್ರೆ ಗೆಲುವಿಗೆ ಹೆಜ್ಜೆ ಹಾಕಿದ ಬ್ರಿಟಿಷ್ ಪ್ರಧಾನಿ

By Mahesh
|

ಲಂಡನ್, ಜು.8: ಸುಮಾರು 77 ವರ್ಷಗಳ ನಂತರ ಇಂಗ್ಲೆಂಡ್ ಗೆ ವಿಂಬಲ್ಡನ್ ಕಿರೀಟ ಮತ್ತೆ ಸಿಕ್ಕಿದೆ. ಭಾನುವಾರ ಸಂಜೆ ಅಗ್ರ ಶ್ರೇಯಾಂಕದ ಜೊಕೊವಿಕ್ ರನ್ನು ಸೋಲಿಸಿದ ಆಂಡೆ ಮರ್ರೆ ಗೆಲುವಿನ ಸಂಭ್ರಮದಲ್ಲಿ ಬ್ರಿಟಿಷ್ ಪ್ರಧಾನಿ ಕೂಡಾ ಪಾಲ್ಗೊಂಡಿದ್ದು ವಿಶೇಷ.

77 ವರ್ಷಗಳ ಹಿಂದೆ ಫ್ರೆಡ್ ಪೆರ್ರಿ ವಿಂಬಲ್ಡನ್ ಕಿರೀಟ ಧರಿಸಿದ ನಂತರ ಇದುವರೆಗೂ ಆಂಗ್ಲ ಆಟಗಾರರು ಈ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. 2012ರಲ್ಲಿ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆಗೆ ಇದು ಎರಡನೆ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.

ಕಳೆದ ವರ್ಷ ವಿಂಬಲ್ಡನ್ ಫೈನಲ್ ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತಿದ್ದ ಮರ್ರೆ ಈ ವರ್ಷ ಮತ್ತೆ ಫೈನಲ್ ತಲುಪಿದ್ದರು. ಆದರೆ, ಟಾಪ್ ಸೀಡ್ ಆಟಗಾರ ಸೆರ್ಬಿಯಾದ ಜೊಕೊವಿಕ್ ರನ್ನು ಸೋಲಿಸುವುದು ಕಷ್ಟ ಎನ್ನಲಾಗಿತ್ತು.

ಅರ್ಜೆಂಟೀನಾದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೆಮಿಫೈನಲ್ ನಲ್ಲಿ 4 ಗಂಟೆ, 43 ನಿಮಿಷಗಳ ಕಾಲ ಸೆಣಸಾಡಿ ಗೆದ್ದಿದ್ದ ಜೊಕೊವಿಕ್ ಫೈನಲ್ ಸೋಲಲು 40 ಡಿಗ್ರಿಯಷ್ಟಿದ್ದ ಉಷ್ಣಾಂಶವೂ ಕಾರಣ ಎನ್ನಬಹುದು.

ಎರಡನೆ ಸೆಟ್ ನಲ್ಲಿ 4-1 ಹಾಗೂ ಮೂರನೆ ಸೆಟ್ ನಲ್ಲಿ 4-2 ರಿಂದ ಮುನ್ನಡೆಯನ್ನು ಸಾಧಿಸಿದ್ದರೂ ಜೊಕೊವಿಕ್ ಪಾಲಿಗೆ ವಿಂಬಲ್ಡನ್ ಕಿರೀಟ ಬರೆದಿರಲಿಲ್ಲ. ಒಟ್ಟಾರೆ 26 ವರ್ಷದ ಮರ್ರೆ ಗೆಲುವಿನ ಸಂಭ್ರಮವನ್ನು ಇಂಗ್ಲೆಂಡ್ ನಲ್ಲಿ ಆಚರಿಸಲಾಗುತ್ತಿದೆ.

ಅಂಡೆ ಮರ್ರೆ ಪತ್ನಿ ಕಿಮ್ ಸೀರ್ಸ್ ಹಾಗೂ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಸೇರಿದಂತೆ ಹಲವಾರು ಗಣ್ಯರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಮರ್ರೆ ಸಂಭ್ರಮವನ್ನು ಚಿತ್ರಗಳಲ್ಲಿ ನೋಡಿ...

 ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,

ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,

‘ಸ್ಮೈಲ್ ಪಿಂಕಿ' ಖ್ಯಾತಿಯ ಭಾರತದ ಪಿಂಕಿ ಸೋನ್ ಕರ್ ಆಂಡಿ ಮರ್ರೆ ಹಾಗೂ ನೊವಾಕ್ ಜೊಕೊ ವಿಕ್ ನಡುವಿನ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ನಾಣ್ಯವನ್ನು ಚಿಮ್ಮಿದರು. ಬಿಳಿ ಟೀ ಶರ್ಟ್, ಅಂಗಿ ಹಾಗೂ ಬಿಳಿ ನೆಕ್ಲಸ್ ಧರಿಸಿಕೊಂಡು ವಿಂಬಲ್ಡನ್ ಸೆಂಟರ್ ಕೋರ್ಟ್ ಗೆ ಪ್ರವೇಶಿ ಸಿದ ಪಿಂಕಿ ನೆರೆದಿದ್ದ ಪ್ರೇಕ್ಷಕರತ್ತ ಕೈ ಬೀಸಿದರು.

ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,

ಸ್ಮೈಲ್ ಪಿಂಕಿ ಸೀಳ್ದುಟಿ ಶಸ್ತ್ರಚಿಕಿತ್ಸೆಯ ಫಲಾನುಭವಿ,

ಹುಟ್ಟಿನಿಂದಲೇ ಸೀಳ್ದುಟಿ ಸಮಸ್ಯೆ ಯನ್ನು ಹೊಂದಿರುವವರಿಗೆ ಸ್ಮೈಲ್ ಟ್ರೈನ್ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದೆ. ಪಿಂಕಿಯ ಜೀವನಾಧರಿತ ‘ಸ್ಮೈಲ್ ಪಿಂಕಿ' ಎಂಬ ಸಾಕ್ಷಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿತ್ತು.

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ

ಲಂಡನ್: ವಿಂಬಲ್ಡನ್ ಕಪ್ ನೊಂದಿಗೆ ವಿಜೇತ ಇಂಗ್ಲೆಂಡಿನ ಆಂಡೆ ಮರ್ರೆ ಹಾಗೂ ರನ್ನರ್ ಅಪ್ ಸೆರ್ಬಿಯಾದ ನುವಾಕ್ ಜೋಕೊವಿಕ್

ಅದ್ಭುತ ಚುಂಬನ

ಅದ್ಭುತ ಚುಂಬನ

ಕಳೆದ ಬಾರಿ ಫೈನಲ್ ತನಕ ಬಂದು ಎಡವಿದ್ದ ಮರ್ರೆ ಕನಸು ಕೊನೆಗೂ ಈಡೇರಿದೆ. ವಿಂಬಲ್ಡನ್ ಹುಲ್ಲುಹಾಸಿನ ಕಿಂಗ್ ತನ್ನ ಕಪ್ ಗೆ ಪ್ರೀತಿಯ ಮುತ್ತನೀಡುತ್ತಿದ್ದಾರೆ.

ವೆಲ್ ಡನ್

ವೆಲ್ ಡನ್

2012ರಲ್ಲಿ ಅಮೆರಿಕನ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಮರ್ರೆಗೆ ಇದು ಎರಡನೆ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.

ಆನಂದ ಭಾಷ್ಪ ಸುರಿಸಿದ ಮರ್ರೆ

ಆನಂದ ಭಾಷ್ಪ ಸುರಿಸಿದ ಮರ್ರೆ

77 ವರ್ಷಗಳ ಆಂಗ್ಲರ ಕನಸು ನನಸಾದ ಕ್ಷಣ

ವೆಲ್ ಡನ್ ಮರ್ರೆ

ವೆಲ್ ಡನ್ ಮರ್ರೆ

ಅಂಡೆ ಮರ್ರೆ ಪತ್ನಿ ಕಿಮ್ ಸೀರ್ಸ್

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ

ಮರ್ರೆ ಗೆಲುವನ್ನು ಕೊಂಡಾಡಿದ ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್

ಜಾರಿ ಬಿದ್ದ ಜಾಣ

ಜಾರಿ ಬಿದ್ದ ಜಾಣ

ಜೊಕೊವಿಕ್ ಫೈನಲ್ ಸೋಲಲು 40 ಡಿಗ್ರಿಯಷ್ಟಿದ್ದ ಉಷ್ಣಾಂಶವೂ ಕಾರಣ ಎನ್ನಬಹುದು.

ಜೋಕೊವಿಕ್

ಜೋಕೊವಿಕ್

ಎರಡನೆ ಸೆಟ್ ನಲ್ಲಿ 4-1 ಹಾಗೂ ಮೂರನೆ ಸೆಟ್ ನಲ್ಲಿ 4-2 ರಿಂದ ಮುನ್ನಡೆಯನ್ನು ಸಾಧಿಸಿದ್ದರೂ ಜೊಕೊವಿಕ್ ಪಾಲಿಗೆ ವಿಂಬಲ್ಡನ್ ಕಿರೀಟ ಬರೆದಿರಲಿಲ್ಲ.

ಜೂನಿಯರ್ಸ್

ಜೂನಿಯರ್ಸ್

ಆಸ್ಟ್ರೇಲಿಯಾದ ನಿಕ್ ಕೈರಿಗಿಯೊಸ್ ಹಾಗೂ ಥಾನಾಸಿ ಕೊಕ್ಕಿನಾಕಿಸ್(ಬಲ) ಬಾಯ್ಸ್ ಡಬಲ್ಸ್ ಫೈನಲ್ ಗೆದ್ದ ಸಂಭ್ರಮದಲ್ಲಿ

ಬಾಯ್ಸ್ ಡಬಲ್ಸ್ ಫೈನಲ್

ಬಾಯ್ಸ್ ಡಬಲ್ಸ್ ಫೈನಲ್

ಬಾಯ್ಸ್ ಡಬಲ್ಸ್ ಫೈನಲ್ ಗೆದ್ದ ಆಸ್ಟ್ರೇಲಿಯಾದ ನಿಕ್ ಕೈರಿಗಿಯೊಸ್ ಹಾಗೂ ಥಾನಾಸಿ ಕೊಕ್ಕಿನಾಕಿಸ್

ಬಾಯ್ಸ್ ಸಿಂಗಲ್ಸ್ ವೀರ

ಬಾಯ್ಸ್ ಸಿಂಗಲ್ಸ್ ವೀರ

ವಿಂಬಲ್ಡನ್ ಬಾಯ್ಸ್ ಸಿಂಗಲ್ಸ್ ಫೈನಲ್ ನಲ್ಲಿ ಕೊರಿಯಾದ ಹ್ಯಾಯಿನ್ ಚುಂಗ್ ಸೋಲಿಸಿ ಪ್ರಶಸ್ತಿ ಗೆದ್ದ ಇಟಲಿಯ ಗಿಯಾನ್ಲುಗಿ ಕ್ವಿನ್ಜಿ,

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಇಂಗ್ಲೆಂಡಿನಲ್ಲಿ ಟೆನಿಸ್ ಸಂಭ್ರಮ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Putting an end to Britain's agonising 77-year wait for a Wimbledon men's singles champion, Andy Murray won the title on Sunday, July 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more