ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನಾಡಿನ ಸೂಪರ್ ಫಾಸ್ಟ್ ಸುದ್ದಿಸಂಚಯ

|
Google Oneindia Kannada News

Karnataka
ಬೆಂಗಳೂರು, ಜು.8 : ತುತ್ತಿನ ಚೀಲ ತುಂಬಿಸಿಕೊಳ್ಳಲು ನೆರೆಯ ಆಂಧ್ರ ಪ್ರದೇಶದಿಂದ ತರೀಕೆರೆಗೆ ಕೂಲಿ ಕೆಲಸಕ್ಕೆ ಆಗಮಿಸಿದ್ದ ಕಾರ್ಮಿಕರು, ವಿದ್ಯುತ್‌ ತಂತಿ ತುಗಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ತಿಮ್ಮಪ್ಪ(40) ಮತ್ತು ವೆಂಕಟೇಶ್‌ ಎಂದು ಗುರುತಿಸಲಾಗಿದೆ. ನಾಗರಾಜ್ ಎಂಬುವರಿಗೆ ಸೇರಿದ ಅಂಗಡಿ ಮಳಿಗೆಯ ಪಾಯ ತೆಗೆಯುತ್ತಿದ್ದ ವೇಳೆ, ನೆಲ ಮಾರ್ಗದಲ್ಲಿ ಅಳವಡಿಸಲಾದ ವಿದ್ಯುತ್‌ ತಂತಿ ತಿಮ್ಮಪ್ಪ ಅವರಿಗೆ ತಗಲಿದೆ. ಇವರನ್ನು ರಕ್ಷಿಸಲು ಬಂದ ವೆಂಕಟೇಶ್‌ಗೂ ಸಹ ಮೃತಪಟ್ಟಿದ್ದಾರೆ.

ಮಗಳನ್ನೇ ನಾಲೆಗೆ ಎಸೆದ ತಂದೆ : ಪಾಪಿ ತಂದೆಯೊಬ್ಬ ಕುಡಿದ ಅಮಲಿನಲ್ಲಿ ಮಗಳನ್ನು ನಾಲೆಗೆ ಎಸೆದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ. ತಂದೆ ಸುರೇಶ್ ಪುತ್ರಿ ಸಹನಾ(4)ಳನ್ನು ತುಂಬಿ ಹರಿಯುವ ನಾಲೆಗೆ ಎಸೆದಿದ್ದಾನೆ. ಬದನವಾಳು ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.

ಬರದ ನಾಡಿನಲ್ಲಿ ನೀರಿನ ಬುಗ್ಗೆ : ಬರದ ನಾಡು ಎಂಬ ಹಣೆಪಟ್ಟಿ ಹೊತ್ತ ಬಾಗೇಪಲ್ಲಿ ತಾಲೂಕಿನಲ್ಲಿ ನೀರಿನ ಚಿಲುಮೆ ದೊರಕಿದ್ದು ಜನರಿಗೆ ಕೊಂಚ ಸಮಾಧಾನ ತಂದಿದೆ. ತಾಲೂಕಿನ ಗುಳೂರು ಆಂಜನೇಯ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ರಾತ್ರಿ ನೀರಿನ ಚಿಲುಮೆ ಕಾಣಿಸಿಕೊಂಡಿದೆ. ಜನರು ಇದನ್ನು ಆಂಜನೇಯ ದೇವರ ಪವಾಡ ಎಂದು ನಂಬಿದ್ದಾರೆ. ನೀರು ಕುಡಿಯಲು ಯೋಗ್ಯವಾಗಿದ್ದು, ಗ್ರಾಮದ ಜನರಿಗೆ ಚಿಲುಮೆಯಿಂದಾಗಿ ಕುಡಿಯುವ ನೀರಿನ ಆಸರೆ ದೊರಕಿದಂತಾಗಿದೆ.

ಎಚ್ಡಿಕೆಗೆ ಸಿದ್ದು ತಿರುಗೇಟು : ನಾನು ಜಾತಿ ರಾಜಕೀಯ ಮಾಡುತ್ತಿಲ್ಲ. ಜಾತಿ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿರುವ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.

ಒಕ್ಕಲಿಗರಿಂದಲೇ ಸಿದ್ದರಾಮಯ್ಯ ಬೆಳೆದದ್ದು ಎಂಬ ಕುಮಾರಸ್ವಾಮಿ ಹೇಳಿಕೆಗೆ ಇಂದು ಪ್ರತಿಕ್ರಿಸಿದ ಸಿಎಂ, ರಾಜಕಾರಣದಲ್ಲಿ ಒಂದೇ ಜಾತಿಯಿಂದ ಯಾರೂ ಬೆಳೆಯಲು ಸಾಧ್ಯವಿಲ್ಲ. ಅವರು(ಕುಮಾರಸ್ವಾಮಿ) ಬೆಳೆದದ್ದು ಯಾರಿಂದ ಎಂದು ಪ್ರಶ್ನಿಸಿದರು. (ಒಕ್ಕಲಿಗರನ್ನು ನಿರ್ಲಕ್ಷಿಸಬೇಡಿ ಸಿಎಂಗೆ ಎಚ್ಡಿಕೆ ಎಚ್ಚರಿಕೆ)

ಭೂಮಿ ಕೊಡಿ ಮುನಿಯಪ್ಪ : ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖನೆಗೆ 1200 ಎಕರೆ ಭೂಮಿಯನ್ನು ಸರ್ಕಾರ ನೀಡಬೇಕೆಂದು ಕೇಂದ್ರ ಸಣ್ಣ ಕೈಗಾರಿಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಸೋಮವಾರ ಸಿಎಂ ಭೇಟಿ ಮಾಡಿದ ಅವರು, ಹಿಂದಿನ ಸರ್ಕಾರ ಭೂಮಿ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಬಂಗಾರಪೇಟೆ ಜೋಡಿ ಕೊಲೆ ರಹಸ್ಯ ಬಯಲು: ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದ್ದ ಕೊಲೆಯ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ. ಗಂಜಾ ಸೇವನೆ ಮಾಡುತ್ತಿದ್ದ ಮಹಮ್ಮದ್(22) ಎಂಬ ಯುವಕ ಈ ಜೋಡಿ ಕೊಲೆಯನ್ನು ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ನಿವಾಸಿಯಾದ ಈತ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಗಂಜಾ ಕೊಳ್ಳಲು ಹಣ ಬೇಕಾಗಿದ್ದರಿಂದ ಈತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.(ಕೋಲಾರ : ಮೂರು ಗಂಟೆಯಲ್ಲಿ ಮೂವರ ಕೊಲೆ!)

English summary
Super fast news bites from interior Karnataka. Andhra Pradesh based 2 Laborers killed in an electric shock circuit in Tarikere town. A drunken father throws his 4 year daughter into Canal in Nanjangud taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X