ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಟಿವಿ ಮಾರುಕಟ್ಟೆಗೆ: ಬೆಲೆ 27 ಲಕ್ಷ ರೂ

By Srinath
|
Google Oneindia Kannada News

ಬೆಂಗಳೂರು, ಜುಲೈ8: ಡಬ್ಬಾ ಪೆಟ್ಟಿಗೆ ಟಿವಿಗಳು ನಮ್ಮ ಮನ/ಮನೆಗಳಿಂದ ಹೊರಬಿದ್ದು ಯಾವುದೋ ಕಾಲವಾಗಿದೆ. ಈಗೇನಿದ್ದರೂ ತೆಳನೆಯ ಮಾನಿಟರ್ ಇರುವ ಟಿವಿ ಜಮಾನಾ. ಅದರಲ್ಲೂ ಎಲ್ಇಡಿ/ಎಲ್ಇಡಿಯನ್ನು ಗೋಡೆಗೆ ನೇತುಹಾಕುವುದು ಪ್ರತಿಷ್ಠೆ ಅಲ್ಲ, ಜೀವನಶೈಲಿಯಾಗಿದೆ.

ಮೂರ್ಖರ ಪೆಟ್ಟಿಗೆ ಎಂದೇ ಜನಜನಿತವಾದ ಟಿವಿಯಲ್ಲಿ ಈಗ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. high definition ಟಿವಿಗಳು ದಾಂಗುಡಿಯಿಟ್ಟಿವೆ. ಆದರೆ ವಿಚಿತ್ರ ಅಂದರೆ ಟಿವಿ ಪ್ರೊಡಕ್ಷನ್ ಗಳು ಇನ್ನೂ high definitionನಲ್ಲಿ ತಯಾರಾಗುತ್ತಿಲ್ಲ.

ಆದರೂ ಜನ ಮುಗಿಬಿದ್ದು ಮುಂದೊಂದು ದಿನ ಟಿವಿ ಪ್ರೊಡಕ್ಷನ್ high definitionನಲ್ಲಿರುತ್ತವೆ ಎಂದು ಕಲ್ಪಿಸಿಕೊಂಡು ಕೂಸು ಹುಟ್ಟೋಕೆ ಮುಂಚೆಯೇ ಕುಲಾವಿ ಹೊಲಿಸಿದಂತೆ ದುಬಾರಿ LED ಟಿವಿ ಸೆಟ್ ತಂದಿಟ್ಟುಕೊಂಡಿದ್ದಾರೆ.

LED ಟಿವಿಯಲ್ಲಿ HD ರಿಸಲ್ಟೇ ಬರ್ತಿಲ್ಲ

LED ಟಿವಿಯಲ್ಲಿ HD ರಿಸಲ್ಟೇ ಬರ್ತಿಲ್ಲ

ಆದರೆ ಇಲ್ಲಿ ಹೇಳಹೊರಟಿರುವುದು ಇವುಗಳ ಬಗ್ಗೆ ಅಲ್ಲ. ಇದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದಡಿಯಿಟ್ಟಿರುವ ತಂತ್ರಜ್ಞಾನದ ಬಗ್ಗೆ. ಅದುವೇ ultra high definition ಟಿವಿ ಸೆಟ್. ಇನ್ನೂ LED ಟಿವಿಯಲ್ಲಿ HD ರಿಸಲ್ಟೇ ಬರ್ತಿಲ್ಲ. ಅಂಥಾದ್ದರಲ್ಲಿ ultra HD ಏಕೆ? ಅಂದರೆ ಉತ್ತರ ಗೊತ್ತಿಲ್ಲ. ಅಷ್ಟೇ ಅಲ್ಲ ಈ ultra high definition ಟಿವಿ ಸೆಟ್ ಬೆಲೆ ಕೇಳಿದರೆ ಅಷ್ಟೇ ...

ಉಳ್ಳವರು ಈ ಟೀವಿಯನ್ನೂ ಖರೀದಿಸಬಹುದು

ಉಳ್ಳವರು ಈ ಟೀವಿಯನ್ನೂ ಖರೀದಿಸಬಹುದು

ಹೌದು, ultra HD ಟಿವಿ ಸೆಟ್ ಬೆಲೆ ಕೇವಲ 27 ಲಕ್ಷ ರೂ. ಸೋನಿ, ಸ್ಯಾಮ್ಸಂಗ್ ಮತ್ತು ಎಲ್ ಜಿ ಕಂಪನಿಗಳು ದೊಡ್ಡ ಪರದೆಯಲ್ಲಿ (84 ಇಂಚು ಮಾನಿಟರ್) ಈ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿವೆ. ಉಳ್ಳವರು ಈ ಟೀವಿಯನ್ನೂ ಖರೀದಿಸಬಹುದು ಬಿಡಿ.

ಈಗೇನಿದ್ದರೂ 50 ಇಂಚಿಗಿಂತ ಕಡಿಮೆ ಗಾತ್ರದ ಟಿವಿಗಳಿವೆ. ಇದು HDಗೆ ಓಕೆ. ಆದರೆ ಜನ ಇತ್ತೀಚೆಗೆ 50 ಅಂಗುಲಕ್ಕಿಂತ ಹೆಚ್ಚು ದೊಡ್ಡ ಪರದೆಯ ಟಿವಿ ಬೇಕು ಎಂದು ಕೇಳುತ್ತಿದ್ದಾರೆ.

ನಾಲ್ಕು ಪಟ್ಟು ಹೆಚ್ಚು ಗುಣಮಟ್ಟ

ನಾಲ್ಕು ಪಟ್ಟು ಹೆಚ್ಚು ಗುಣಮಟ್ಟ

ಅಂದರೆ ಅತ್ಯುತ್ತಮ ಪಿಕ್ಚರ್ ಗುಣಮಟ್ಟದ ultra HD ಮಾತ್ರವೇ 50 ದಾಟಿದ 84 ಅಂಗುಲದ ಟಿವಿಗೆ ಸೂಕ್ತವಾಗಿರುತ್ತವೆ. ಹಾಗಾಗಿ ultra HD ಟಿವಿ ಸೆಟ್ ಗೆ ಬೇಡಿಕೆ ಬಂದಿದೆ ಎನ್ನುತ್ತಿವೆ ಈ ಕಂಪನಿಗಳು. ಅಂದಹಾಗೆ ultra HD ಟಿವಿಗಳು ಸಾಮಾನ್ಯ LED ಟಿವಿಗಿಂತ ನಾಲ್ಕು ಪಟ್ಟು ಹೆಚ್ಚು ಗುಣಮಟ್ಟದ್ದಾಗಿರುತ್ತದೆ.

ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆ ನಿಮ್ಮ ಮನೆಗೂ

ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆ ನಿಮ್ಮ ಮನೆಗೂ

ಗಮನಿಸಿ: ಸೀಮಿತ ಉತ್ಪಾದನೆಯ ಈ ಟಿವಿ ಸೆಟ್ ಸದ್ಯಕ್ಕೆ ಇನ್ನೂ ಭಾರತಕ್ಕೆ ಬಂದಿಲ್ಲ. ಆದರೆ ವಿಶ್ವದ ಕೆಲವೆಡೆ ತೆರೆ ಕಂಡಿವೆ. ಸೋನಿ ಕಂಪನಿ ಈ ಟಿವಿಗಳ ಮಾರಾಟ ಪ್ರಚಾರ/ಜಾಹೀರಾತಿಗೆಂದೇ 250 ಕೊಟಿ ರೂ. ಖರ್ಚು ಮಾಡುತ್ತಿದೆ! ನೀವೂ ಇದಕ್ಕೆ ಸೈ ಅಂದರೆ ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆ ನಿಮ್ಮ ಮನೆಗೂ ಇದು ದಾಂಗುಡಿಯಿಡಬಹುದು.

ಈಗಿರುವ ದುಬಾರಿ ಟಿವಿ ಸೆಟ್ ಅಂದರೆ

ಈಗಿರುವ ದುಬಾರಿ ಟಿವಿ ಸೆಟ್ ಅಂದರೆ

ಈಗಿರುವ ದುಬಾರಿ ಟಿವಿ ಸೆಟ್ ಅಂದರೆ ಸೋನಿ ಮತ್ತು ಎಲ್ ಜಿ ಕಂಪನಿಯ ಸಾಮಾನ್ಯ HDಯ (65 ಅಂಗುಲ) 3D TV. ಇದರ ಬೆಲೆ 3.70 ಲಕ್ಷ ರೂ ಆಸುಪಾಸು. ಅದೇ ಸ್ಯಾಮ್ಸಂಗ್ ಕಂಪನಿ 75 ಇಂಚಿನ HD TVಯನ್ನು 7.5 ಲಕ್ಷ ರೂಗೆ ಮಾರಾಟ ಮಾಡುತ್ತಿದೆ.

English summary
Ultra HD TV sets at Rs 27 lakh ready to enter India market. A television priced at Rs 27 lakh? Yes. Manufacturers like Sony, Samsung and LG believe India is ready to be developed as a market for high-end ultra high definition (UHD) sets with demand for bigger screen sizes expected to grow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X