• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒನ್ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

By Prasad
|

ಪ್ರಯಾಣಿಕರಿಗೆ ಸರಳ, ಸುರಕ್ಷಿತ ಮತ್ತು ಆನಂದದಾಯಕ ಪ್ರಯಾಣದ ಅನುಭವ ದೊರಕಿಸಿಕೊಡುವ ಉದ್ದೇಶದಿಂದ ಭಾರತದ ನಂ.1 ಪ್ರಾದೇಶಿಕ ಪೋರ್ಟಲ್ ಒನ್ಇಂಡಿಯಾ ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದೆ. ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯಲ್ಲಿ ಅಗ್ರಗಣ್ಯರಾಗಿರುವ ರೆಡ್‌ಬಸ್.ಇನ್ ಸಹಯೋಗದೊಂದಿಗೆ ಒನ್ಇಂಡಿಯಾ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಶುರು ಮಾಡಲಾಗಿದೆ.

ಬಸ್ ನಿಲ್ದಾಣಕ್ಕೆ ತೆರಳಿ ಉದ್ದುದ್ದ ಕ್ಯೂನಲ್ಲಿ ಗಂಟೆಗಟ್ಟಲೆ ನಿಂತು ಟಿಕೆಟ್ ಬುಕ್ ಮಾಡಿಸುವುದು ಎಷ್ಟು ಕಷ್ಟಕರ ಅಂತ ನಿಮಗೆಲ್ಲ ಗೊತ್ತು. ಇನ್ನು ಟಿಕೆಟ್‌ಗಾಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವೇ ಇಲ್ಲ. ಆದರೆ, ಪ್ರಯಾಣಿಕರಿಗಾಗಿ ನಾವು ನಮ್ಮೆಲ್ಲ ಶ್ರಮ, ಪ್ರೀತಿಯನ್ನು ಧಾರೆಯೆರೆದು ಸರಳವಾಗಿ ಟಿಕೆಟ್ ಬುಕ್ ಮಾಡುವ ಸವಲತ್ತನ್ನು ಪ್ರಯಾಣಿಕರಿಗಾಗಿ ತಂದಿದ್ದೇವೆ.

ಇಂಟರ್ನೆಟ್ ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ ಇಂಟರ್ನೆಟ್ ಬಳಕೆದಾರರ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಒನ್ಇಂಡಿಯಾ ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಬಸ್ ಟಿಕೆಟ್ ಬುಕ್ಕಿಂಗ್ ಕೂಡ ಅವುಗಳಲ್ಲೊಂದು. ಬಸ್ ದರಗಳು, ಸೀಟುಗಳ ಲಭ್ಯತೆಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಬುಕ್ ಮಾಡುವ ಅನುಕೂಲವನ್ನು ಒನ್ಇಂಡಿಯಾ ಒದಗಿಸುತ್ತಿದೆ.

bus.oneindia.in ಏನು ನೀಡಲಿದೆ?

ಬಸ್ ಟಿಕೆಟ್ ಬುಕ್ ಮಾಡುವ ಆರು ನೂರಕ್ಕೂ ಹೆಚ್ಚು ಏಜೆಂಟರುಗಳಿದ್ದಾರೆ. ಆದರೆ, ಆ ಏಜೆಂಟರುಗಳೆಲ್ಲ ಒಂದೇ ಕಡೆಯಲ್ಲಿ ಸಿಗುವುದು ಒನ್ಇಂಡಿಯಾದಲ್ಲಿ ಮಾತ್ರ! ಯಾವುದೇ ಪ್ರದೇಶದಿಂದ ಮತ್ತಾವುದೇ ಊರಿಗೆ, ಎಂಥದೇ ಬಸ್ಸಿನಲ್ಲಿ ಮತ್ತು ನಿಮಗಿಷ್ಟವಾದ ರೂಟ್‌ಗಳಲ್ಲಿ ಸಂಚರಿಸಲು ಬಸ್ ಟಿಕೆಟ್ ಬುಕ್ ಮಾಡಬಹುದು. ಮನೆಯಿರಲಿ, ಕಚೇರಿಯಿರಲಿ ಅಥವಾ ಸಂಚರಿಸುತ್ತಿರಲಿ, ಕಂಪ್ಯೂರ್ ಮುಖಾಂತರವಾಗಲಿ, ಮೊಬೈಲ್ ಮುಖಾಂತರವಾಗಲಿ ನೀವೆಲ್ಲೇ ಇದ್ದರೂ ಕೆಲವೇ ನಿಮಿಷಗಳಲ್ಲಿ ಬಸ್ ಟಿಕೆಟ್ ಬುಕ್ ಆಗಿರುತ್ತದೆ.

ಈ ಸೇವೆ ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಲಿದೆ. ಅತ್ಯುತ್ತಮ ಬಸ್ ಸೇವೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗಬೇಕಿದ್ದರೆ ಗ್ರಾಹಕರು ಒನ್ಇಂಡಿಯಾಗೆ ಬರಬೇಕು. ಹೋಗಬೇಕಾದ ಸ್ಥಳವನ್ನು ಆಯ್ಕೆ ಮಾಡಬೇಕಾದ ಕೆಲಸವಷ್ಟೇ ಪ್ರಯಾಕಣಿಕರದು. ಅವರಿಗೆ ಅತ್ಯಂತ ಸರಳವಾಗಿ, ವೇಗವಾಗಿ ಮತ್ತು ಯಾವುದೇ ಗೊಂದಲಗಳಿಲ್ಲದೆ ಟಿಕೆಟ್ ದೊರಕಿಸಿಕೊಡುವ ಜವಾಬ್ದಾರಿ ಒನ್ಇಂಡಿಯಾದ್ದು. ಅದೇ ನಮ್ಮ ಧ್ಯೇಯ ಕೂಡ.

bus.oneindia.inನಲ್ಲಿ ಬುಕ್ ಮಾಡುವುದು ಹೇಗೆ?

1. ಊರು ಮತ್ತು ದಿನಾಂಕ : ಎಲ್ಲಿಂದ ಎಲ್ಲಿಗೆ ಹೋಗಬೇಕು, ಯಾವ ದಿನಾಂಕದಂದು ಹೋಗಬೇಕು ಆಯ್ಕೆ ಮಾಡಿಕೊಂಡು, ಸರ್ಚ್ ಬಸಸ್ ಬಟನ್ ಕ್ಲಿಕ್ಕಿಸಿ.

2. ಬಸ್ ಮತ್ತು ಸೀಟು : ಮೊದಲಿಗೆ ಬಸ್ ಆಪರೇಟರ್ ಆಯ್ಕೆ ಮಾಡಿಕೊಳ್ಳಿ. ಸೀಟುಗಳು ಎಷ್ಟಿವೆ ಎಂದು ನೋಡಿಕೊಂಡು, ಬೇಕಾದ ಸೀಟು ಆಯ್ದುಕೊಳ್ಳಿ. ಹತ್ತಬೇಕಾದ ಸ್ಥಳ ಕ್ಲಿಕ್ಕಿಸಿ ಮುಂದುವರಿಯುವ ಬಟನ್ ಒತ್ತಿರಿ.

3. ಪ್ರಯಾಣದ ವಿವರ : ಮೊಬೈಲ್ ನಂಬರ್, ಈಮೇಲ್ ವಿವರಗಳನ್ನು ನಮೂದಿಸಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಎಸ್ಎಂಎಸ್ ಅಥವಾ ಈಮೇಲ್ ಮುಖಾಂತರ ತಿಳಿಸಲು ಈ ವಿವರಗಳು ಅಗತ್ಯ. ಎಸ್ಎಂಎಸ್ ಎಮ್‌ಟಿಕೆಟ್ (mTicket) ಆಗಿದ್ದು, ಎಲ್ಲ ಬಸ್ಸುಗಳು ಸ್ವೀಕರಿಸುತ್ತವೆ. ಇದಾದ ನಂತರ ಮತ್ತೆ ಮುಂದುವರಿಯಿರಿ.

4. ಹಣ ಪಾವತಿ : ನಿಮ್ಮ ವೈಯಕ್ತಿಕ ಮಾಹಿತಿ, ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಒದಗಿಸಿ 'ಸಬ್ಮಿಟ್' ಬಟನ್ ಒತ್ತಿರಿ.

5. ದೃಢೀಕರಣ : ನಿಮ್ಮ ಟಿಕೆಟ್ ಯಶಸ್ವಿಯಾಗಿ ಬುಕ್ ಆಗಿರುತ್ತದೆ. ಎಲ್ಲ ವಿವರಗಳು ನೀವು ಒದಗಿಸಿರುವ ಈಮೇಲ್ ವಿಳಾಸಕ್ಕೆ ಅಥವಾ ಮೊಬೈಲ್ ನಂಬರಿಗೆ ಎಸ್ಎಂಎಸ್ ಮೂಲಕ ರವಾನಿಸಲಾಗುವುದು.

ಹಣ ಪಾವತಿಸುವುದು ಹೇಗೆ?

ವೀಸಾ ಮತ್ತು ಮಾಸ್ಟರ್‌ಕಾರ್ಡ್ ಇರುವ ಕ್ರೆಡಿಟ್ ಕಾರ್ಡ್ ಬಳಕೆದಾರರು ಮತ್ತು ವೀಸಾ, ವೀಸಾ ಎಲೆಕ್ಟ್ರಾನ್, ಮಾಸ್ಟರ್‌ಕಾರ್ಡ್ ಮತ್ತು ಮೇಸ್ಟ್ರೋ ಕಾರ್ಡ್ ಇರುವ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಬಳಸಿ ಬಸ್ ಟಿಕೆಟ್ ಬುಕ್ ಮಾಡಬಹುದು. ಎಲ್ಲ ಬ್ಯಾಂಕುಗಳೊಂದಿಗೆ ಒಪ್ಪಂದ ಆಗಿರುವುದರಿಂದ ನೆಟ್ ಬ್ಯಾಂಕಿಂಗ್ ಮುಖಾಂತರವೂ ಬಸ್ ಟಿಕೆಟ್ ಬುಕ್ ಮಾಡಬಹುದು.

ಆನ್‌ಲೈನ್ ಮೂಲಕ ಟಿಕೆಟ್ ಮಾಡಲು ಹೆಚ್ಚಿನ ಹಣವನ್ನು ಇಸಿದುಕೊಳ್ಳುವುದಿಲ್ಲ. ನಾವು ದಿನದ 24 ಗಂಟೆ ಕೆಲಸ ಮಾಡುವುದರಿಂದ ಯಾವುದೇ ಸಮಯದಲ್ಲಿ ಟಿಕೆಟ್ ಬುಕ್ ಮಾಡಿರಿ. ಸರಳ, ಸುರಕ್ಷಿತ ಮತ್ತು ಆನಂದದಾಯಕ ಪ್ರಯಾಣದ ಅನುಕೂಲ ಮಾಡಿಕೊಡುವುದು ನಮ್ಮ ಮೂಲ ಧ್ಯೇಯ. ನಮ್ಮ ತಂಡದಲ್ಲಿನ ಪ್ರತಿಯೊಬ್ಬರು ಇದಕ್ಕಾಗಿ ದುಡಿಯುತ್ತೇವೆ. ಇನ್ನೂ ಉತ್ತಮ ಸೇವೆ ನೀಡಲು ನಿಮ್ಮ ಸಹಕಾರ ಬೇಕು ಅಷ್ಟೇ. ಈ ವ್ಯವಸ್ಥೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನಿಮ್ಮ ಅಮೂಲ್ಯ ಅಭಿಪ್ರಾಯಗಳಿಗೆ ಸದಾ ಸ್ವಾಗತ.

ಆನ್‌ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಿರಿ ಹೊಸ ಅನುಭವಕ್ಕೆ ತೆರೆದುಕೊಳ್ಳಿರಿ. ಹ್ಯಾಪಿ ಜರ್ನಿ.

English summary
Oneindia, India's #1 language portal has launched an online bus ticket booking platform with a vision of creating an easy, safe & delightful online bus ticket booking experience. Oneindia Bus services is powered by Redbus.in, market leaders in online bus tickets booking. Happy journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more