ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SFO ವಿಮಾನ ಪತನ, ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

By Mahesh
|
Google Oneindia Kannada News

Three Indians on board, Asiana Airlines flight crashes in US
ಸ್ಯಾನ್ ಫ್ರಾನ್ಸಿಸ್ಕೋ, ಜು.7: ಏಶಿಯಾನಾ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಸುಮಾರು 200ಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಸಿಯೋಲ್ ನಿಂದ ಸ್ಯಾನ್ ಫ್ಯಾನ್ಸಿಸ್ಕೋ ಗೆ ಬಂದ ಏಷಿಯಾನಾ ವಿಮಾನ ಅಪಘಾತಕ್ಕೀಡಾಗಿದ್ದು, ಗಾಯಗೊಂಡವರಲ್ಲಿ ಮೂವರು ಭಾರತೀಯರು ಸೇರಿದ್ದಾರೆ. ಈ ಪೈಕಿ ಒಬ್ಬರಿಗೆ collar bone ಮುರಿತವಾಗಿದೆ. ಇನ್ನಿತರರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ದಕ್ಷಿಣ ಕೊರಿಯಾದ ಭಾರತೀಯ ರಾಯಭಾರಿ ವಿಷ್ಣು ಪ್ರಕಾಶ್ ಅವರು ಹೇಳಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ 291 ಪ್ರಯಾಣಿಕರು, 16 ಜನ ಸಿಬ್ಬಂದಿ ವಿಮಾನದಲ್ಲಿದ್ದರು. ಈ ಪೈಕಿ 77 ಜನ ಕೊರಿಯಾದವರು, 141 ಚೀನಿಯರು, 61 ಜನ ಅಮೆರಿಕದ ನಾಗರೀಕರು, ಮೂವರು ಭಾರತೀಯರು ಹಾಗೂ 1 ಜಪಾನಿ ಎಂದು ತಿಳಿದು ಬಂದಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಹೋಮ್ ಲ್ಯಾಂಡ್ ಸೆಕ್ಯುರಿಟಿ ಹಾಗೂ ಉಗ್ರ ನಿಗ್ರಹದಳದ ಸಹಾಯಕಿ ಲೀಸಾ ಮೊನಾಕೊ ಅವರು ವಿಷದಪಡಿಸಿದ್ದಾರೆ. ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಒಬಾಮಾ, ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಸಾಮಾಜಿಕ ಜಾಲ ತಾಣದ ಮೂಲದ ವಿವಿಧ ದೇಶಗಳ ರಾಯಭಾರಿ ಕಚೇರಿಗಳು ತಮ್ಮಲ್ಲಿರುವ ಮಾಹಿತಿಯನ್ನು ನೀಡುತ್ತಿದ್ದಾರೆ. ಪ್ರಯಾಣಿಕರು ಹಾಗೂ ಅವರ ಸಂಬಂಧಿಕರಲ್ಲಿ ಆತಂಕದ ಕ್ಷಣಗಳು ಇನ್ನೂ ದೂರಾಗಿಲ್ಲ. ಟ್ವಿಟ್ತರ್ ನಲ್ಲಿ ವಿಮಾನ ದುರಂತದ ದೃಶ್ಯಗಳು, ಚಿತ್ರಗಳು ಹರಿದಾಡುತ್ತಿವೆ.

ಮುನ್ನೆಚ್ಚರಿಕೆ ಕೊಡಲಿಲ್ಲ:ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣ(SFO)ದಲ್ಲಿ ಏಷಿಯಾನಾ ವಿಮಾನ ಇಳಿಯುವಾಗ ನೆಲಕ್ಕೆ ಬಡಿದಾಗ ದೊಡ್ಡ ಶಬ್ದ ಉಂಟಾಯಿತು. ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದರ ಅರಿವಿರಲಿಲ್ಲ. ಸಿಬ್ಬಂದಿಗಳು ಯಾವುದೇ ಮುನ್ಸೂಚನೆ, ಅಪಾಯದ ಎಚ್ಚರಿಕೆ, ಅಪ್ಪಳಿಸಿದ್ದರ ಬಗ್ಗೆ ಮಾಹಿತಿ ನೀಡಲೇ ಇಲ್ಲ ಎಂದು ಭಾರತೀಯ ಮೂಲದ ವೇದ್ ಪಾಲ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ವೇದ್ ಪಾಲ್ ಸಿಂಗ್ ಅವರ 15 ವರ್ಷದ ಮಗನ ಮೇಲೆ ಲಗ್ಗೇಜ್ ಬಿದ್ದು ಹಣೆಗೆ ಗಾಯವಾಗಿದೆ. ಇನ್ನೊಬ್ಬ ಪ್ರಯಾಣಿಕ ಸಕೇನ್ ಸಿಂಗ್ ಅವರ ಮೂಳೆ ಮುರಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಎಲ್ಲರೂ ದೂರುತ್ತಿದ್ದಾರೆ. ಆದರೆ, ವಿಮಾನ ಅಪಘಾತದ ನಿಜ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

English summary
Three Indians were on board the ill-fated Asiana Airlines flight which crashed landed at the San Francisco airport, killing two people and injuring more than 180, officials said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X