ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ವಿಂಬಲ್ಡನ್ ಕಿರೀಟ ಧರಿಸಿದ ಹೊಸ ರಾಣಿ

By Mahesh
|
Google Oneindia Kannada News

ಲಂಡನ್, ಜು.4: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫ್ರಾನ್ಸಿನ ಬಾರ್ಟೊಲಿ ಹೊಸ ಇತಿಹಾಸ ಬರೆದಿದ್ದಾರೆ. ಅಮೆರಿಕದ ವಿಲಿಯಮ್ಸ್ ಸಹೋದರಿಯರು, ರಷ್ಯಾದ ಮರಿಯಾ ಶರ್ಪೋವಾ ಅವರ ಕಾಲ ಮುಗಿದಿದೆ ಎಂದು ಬಾರ್ಟೊಲಿ ಸಾರಿದ್ದಾರೆ. ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ಫೈನಲ್ ಗೆದ್ದು ಬಾರ್ಟೊಲಿ ಹೊಸ ದಾಖಲೆ ಕೆತ್ತಿದ್ದಾರೆ.

ಜರ್ಮರ್ನಿಯ ದೈತ್ಯ ಸಂಹಾರಿ ಸಬಿನಾ ಲಿಸಿಕಿ ಅವರನ್ನು ಸುಲಭವಾಗಿ ಮಣಿಸಿದ ಫ್ರಾನ್ಸಿನ ಮರಿಯೋನ್ ಬಾರ್ಟೊಲಿ ವಿಂಬಲ್ಡನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಶನಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 28ರ ಹರೆಯದ 15ನೇ ಸೀಡ್ ಆಟಗಾರ್ತಿ ಬಾರ್ಟೊಲಿ ಅವರು ಲಿಸಿಕಿಯವರನ್ನು 6-1, 6-4 ಸೆಟ್ ಗಳಿಂದ ಸೋಲಿಸಿ ಚೊಚ್ಚಲ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಬಾರ್ಟೊಲಿ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಐದನೆ ಹಿರಿಯ ಆಟಗಾರ್ತಿ ಎನಿಸಿದ್ದಾರೆ. ತನ್ನ 47ನೆ ಗ್ರಾನ್ ಸ್ಲಾಮ್ ಪಂದ್ಯದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲದ ಅತಿ ಹೆಚ್ಚು ಗ್ರಾನ್ ಸ್ಲಾಮ್ ಪಂದ್ಯಗಳಲ್ಲಿ ಕಾಣಿಸಿಕೊಂಡು ಯಾನಾ ನೊವೊಟ್ನಾ ದಾಖಲೆ ಮುರಿದಿದ್ದಾರೆ.

2007ರಲ್ಲಿ ವಿಂಬಲ್ಡನ್ ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿದ್ದ ಬಾರ್ಟೊಲಿ ಅಮೆರಿಕದ ಆಟಗಾರ್ತಿ ವೀನಸ್ ವಿಲಿಯಮ್ಸ್ ಗೆ ಶರಣಾಗಿದ್ದರು.

ಬಾರ್ಟೊಲಿ 2006ರ ಬಳಿಕ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ಫ್ರೆಂಚ್ ಆಟಗಾರ್ತಿಯೆನಿಸಿದರು. ಫ್ರೆಂಚ್ ನ ಅಮೆಲಿ ಮೊರಿಸ್ಮೊ ಆಸ್ಟ್ರೇಲಿಯನ್ ಹಾಗೂ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. ವಿಂಬಲ್ಡನ್ ಮಹಿಳೆಯರ ಫೈನಲ್,ಪುರುಷರ ಡಬಲ್ಸ್ ಪಂದ್ಯಗಳ ಚಿತ್ರಗಳು ಇಲ್ಲಿದೆ ನೋಡಿ...

 ಬಾರ್ಟೊಲಿ -ಲಿಸಿಕಿ

ಬಾರ್ಟೊಲಿ -ಲಿಸಿಕಿ

28ರ ಹರೆಯದ 15ನೇ ಸೀಡ್ ಆಟಗಾರ್ತಿ ಬಾರ್ಟೊಲಿ ಅವರು ಲಿಸಿಕಿಯವರನ್ನು 6-1, 6-4 ಸೆಟ್ ಗಳಿಂದ ಸೋಲಿಸಿ ಚೊಚ್ಚಲ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು

ಆ ಎಂಥಾ ಆ ಕ್ಷಣ

ಆ ಎಂಥಾ ಆ ಕ್ಷಣ

2006ರ ಬಳಿಕ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ಫ್ರೆಂಚ್ ಆಟಗಾರ್ತಿ ಬಾರ್ಟೊಲಿ ವಿಂಬಲ್ಡನ್ ಗೆದ್ದ ಕ್ಷಣ

ಪ್ರೇಕ್ಷಕರ ನಡುವೆ

ಪ್ರೇಕ್ಷಕರ ನಡುವೆ

ವಿಂಬಲ್ಡನ್ ಟೆನಿಸ್ ಕಿರೀಟ ಗೆದ್ದ ಖುಷಿಯಲ್ಲಿ ಪ್ರೇಕ್ಷಕರ ಗ್ಯಾಲರಿಯತ್ತ ಹಾರಿದ ಬಾರ್ಟೊಲಿ

ರನ್ನರ್ ಆಪ್ ಆದ ದೈತ್ಯ ಸಂಹಾರಿ

ರನ್ನರ್ ಆಪ್ ಆದ ದೈತ್ಯ ಸಂಹಾರಿ

ಫೈನಲ್ ತನಕ ಚಿನಕುರಳಿ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದ ಜರ್ಮನಿಯ 23ನೇ ಸೀಡ್ ನ 23ವರ್ಷ ವಯಸ್ಸಿನ ಲಿಸಿಕಿ, ಫೈನಲ್ ನಲ್ಲಿ ಸೋತ ನಂತರ ಕಂಬನಿಗೆರೆದರು. 1999ರಲ್ಲಿ ಸ್ಟೆಫಿ ಗ್ರಾಫ್ ನಂತರ ಲಿಸಿಕಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು

ಭಲೆ ಸೋದರರು

ಭಲೆ ಸೋದರರು

ಲಂಡನ್: ಪುರುಷರ ಡಬಲ್ಸ್ ಫೈನಲ್ ಗೆದ್ದ ಖುಷಿಯಲ್ಲಿ ಅಮೆರಿಕ್ದ ಬಾಬ್ ಬ್ರಿಯಾನ್ ಹಾಗೂ ಮೈಕ್ ಬ್ರಿಯಾನ್ ಸಂಭ್ರಮ ಹೀಗಿತ್ತು ನೋಡಿ

ಬಾಬ್ ಬ್ರಿಯಾನ್ ಹಾಗೂ ಮೈಕ್ ಬ್ರಿಯಾನ್

ಬಾಬ್ ಬ್ರಿಯಾನ್ ಹಾಗೂ ಮೈಕ್ ಬ್ರಿಯಾನ್

ಲಂಡನ್: ಕ್ರೊಯೇಷಿಯಾದ ಇವಾನ್ ಡಾಡಿಗ್ ಹಾಗೂ ಬ್ರೆಜಿಲ್ ನ ಮಾರ್ಸೆಲ್ ಮೆಲೊ ಜೋಡಿಯನ್ನು ಸೋಲಿಸಿ ಪುರುಷರ ಡಬಲ್ಸ್ ಫೈನಲ್ ಗೆದ್ದ ಅಮೆರಿಕದ ಬಾಬ್ ಬ್ರಿಯಾನ್ ಹಾಗೂ ಮೈಕ್ ಬ್ರಿಯಾನ್.

ಇಂಗ್ಲೆಂಡಿನ ಕನಸು

ಇಂಗ್ಲೆಂಡಿನ ಕನಸು

ಸುಮಾರು 77 ವರ್ಷಗಳ ಬಳಿಕ ಇಂಗ್ಲೆಂಡ್ ಆಟಗಾರನೊಬ್ಬ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಕನಸು ಜೀವಂತ ಇರಿಸಿದ್ದಾರೆ. ಆಂಡಿ ಮರ್ರೆ ಭಾನುವಾರ ಸಂಜೆ ವಿಶ್ವದ ನಂ.1 ಆಟಗಾರ ಸೆರ್ಬಿಯಾದ ಜೋಕೋವಿಕ್ ಜೊತೆ ಪುರುಷರ ಸಿಂಗಲ್ಸ್ ಅಂತಿಮ ಹಣಾಗಣಿಯಲ್ಲಿ ಸೆಣಸಲಿದ್ದಾರೆ.

English summary
France's Marion Bartoli, 28, became the fifth oldest woman to win a Grand Slam title after she defeated Germany's Sabine Lisicki in a one-sided final in the Wimbledon championship on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X