ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಬಗ್ಗೆ ಮಾತನಾಡಲು ಸಮಯವಿಲ್ಲ : ಅಡ್ವಾಣಿ

|
Google Oneindia Kannada News

L.K.Advani
ಬೆಂಗಳೂರು, ಜು.6 : ಯಡಿಯೂರಪ್ಪ ಬಿಜೆಪಿಗೆ ಮರಳಿ ಬನ್ನಿ ಅಭಿಯಾನಕ್ಕೆ ಹಿನ್ನಡೆ ಉಂಟಾಗಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಜೊತೆ ಯಡಿಯೂರಪ್ಪ ಪಕ್ಷ ಮರು ಸೇರ್ಪಡೆ ಕುರಿತು ಮಾತುಕತೆ ನಡೆಸಲು ಹೊರಟ್ಟಿದ್ದ ನಿಯೋಗಕ್ಕೆ ಸಮಯಾವಕಾಶ ದೊರಕಿಲ್ಲ.

ಸೋಮವಾರ ರಾಜ್ಯದ ಸಂಸದರ ನಿಯೋಗ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿ, ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕಿತ್ತು.

ಆದರೆ, ಪಕ್ಷದ ವಿಷಯ ಚರ್ಚಿಸುವುದಿದ್ದರೆ ಬನ್ನಿ. ಯಡಿಯೂರಪ್ಪ ಬಗ್ಗೆ ಮಾತನಾಡುವುದಾದರೆ ಬರಬೇಡಿ ಎಂದು ಹೇಳಿರುವ ಎಲ್.ಕೆ.ಅಡ್ವಾಣಿ, ರಾಜ್ಯದ ಸಂಸದರ ನಿಯೋಗದ ಭೇಟಿಗೆ ಸಮಯಾವಕಾಶ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಪಕ್ಷಕ್ಕೆ ಮರಳುವುದು ಬಿಜೆಪಿ ವರಿಷ್ಠ ಎಲ್.ಕೆ.ಅಡ್ವಾಣಿ ಅವರಿಗೆ ಇಷ್ಟವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ದಿನದಿಂದ ಅವರ ಮೇಲೆ ಅಡ್ವಾಣಿ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದರು.

ಸಂಸದರ ಸಮಿತಿಯಲ್ಲಿ ಯಾರಿದ್ದಾರೆ : ಮಾಜಿ ಸಿಎಂ ಸದಾನಂದ ಗೌಡ ಸಮಿತಿಯ ನೇತೃತ್ವ ವಹಿಸಿದ್ದಾರೆ. ಡಿ.ಬಿ.ಚಂದೇಗೌಡ, ಪಿ.ಸಿ.ಮೋಹನ್, ಪಿ.ಸಿ.ಗದ್ದಿಗೌಡರ್, ಜಿ.ಎಂ.ಸಿದ್ದೇಶ್, ರಮೇಶ್ ಕತ್ತಿ, ಸುರೇಶ್ ಅಂಗಡಿ ಸೋಮವಾರ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದ್ದರಿಂದ ಅಡ್ವಾಣಿ ಅವರ ಭೇಟಿಗೆ ಸಂದಸದರ ತಂಡ ಸಮಯಾವಕಾಶ ಕೇಳಿತ್ತು. ಆದರೆ, ಅನಂತ್ ಕುಮಾರ್ ಮೂಲಕ ಸಂದೇಶ ರವಾನಿಸಿರುವ ಅಡ್ವಾಣಿ ಪಕ್ಷವ ವಿಷಯ ಮಾತನಾಡುವುದಿದ್ದರೆ ಬನ್ನಿ. ಯಡಿಯೂರಪ್ಪ ಸೇರ್ಪಡೆ ಕುರಿತು ಮಾತನಾಡಲು ಬರಬೇಡಿ. ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು. ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.(ಯಡಿಯೂರಪ್ಪ ಬಿಜೆಪಿಗೆ ಏಕೆ ಬೇಕು)

ಆಮೂಲಕ ಬಿ.ಎಸ್.ಯಡಿಯೂರಪ್ಪ ಪಕ್ಷ ಸೇರ್ಪಡೆ ಕುರಿತು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜವಾಬ್ದಾರಿಯನ್ನು ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ರಾಜನಾಥ್ ಸಿಂಗ್ ನಿರ್ಧಾರದ ಮೇಲೆ, ಯಡಿಯೂರಪ್ಪ ಪ್ಷಕಕ್ಕೆ ಮರಳುವ ವಿಷಯ ನಿರ್ಧರಿತವಾಗಲಿದೆ.

English summary
Senior BJP leader L.K.Advani not approved for bring back Yeddyurappa campaign. advani refuse to meet Karnataka MPs committee who in leads role in bring back BSY campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X