• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಚುಂಬನದ ದಿನ ಮುತ್ತಿನ ಮೆರವಣಿಗೆ

By Prasad
|

ಈ ಭೂಮಿಯ ಮೇಲೆ ಆಚರಣೆಗಳಿಗಂತೂ ಲೆಕ್ಕವೇ ಇಲ್ಲ. ಸ್ವಾತಂತ್ರ್ಯದ ದಿನ, ಪ್ರೇಮಿಗಳ ದಿನ, ಪರಿಸರ ದಿನ, ಅಮ್ಮನ ದಿನ, ಅಪ್ಪನ ದಿನ, ಹ್ಯಾಂಡ್ ಶೇಕ್ ಡೇ, ಜನಸಂಖ್ಯೆ ದಿನ, ಶಿಕ್ಷಕರ ದಿನ, ಕಿವುಡರ ದಿನ, ಆಹಾರ ದಿನ, ಏಡ್ಸ್ ಡೇ, ಮಾನವ ಹಕ್ಕುಗಳ ದಿನ, ಬುಕ್ ಡೇ, ಪ್ರಾರ್ಥನೆ ದಿನ... ಹಾಗೆಯೆ, ನಿನ್ನೆ ತಾನೆ ಜು.5ರಂದು ಜಗತ್ತಿನಾದ್ಯಂತ ಬಿಕಿನಿ ದಿನವನ್ನು ಆಚರಿಸುವವರು ಆಚರಿಸಿದ್ದಾರೆ.

ಲೈಫ್ ಸ್ಟೈಲ್ ಬದಲಾದಂತೆ ಆಚರಣೆಯ ರೀತಿಗಳು ಕೂಡ ಬದಲಾಗುತ್ತಾ ಸಾಗುತ್ತಿವೆ. ಅಂತಾರಾಷ್ಟ್ರೀಯ ಪ್ಯಾಂಟಿಲೆಸ್ ಡೇ, ಬ್ರಾಲೆಸ್ ಡೇ ಕೂಡ ಆಚರಿಸಲಾಗುತ್ತಿದೆಯೆಂದರೆ ಇನ್ನೂ ಎಂತೆಂಥ ದಿನಗಳು ಇರಬಹುದು ಎಂಬುದನ್ನು ಲೆಕ್ಕಹಾಕಿ. ಅಂದ ಹಾಗೆ, ಇಂದು, ಅಂದರೆ ಜುಲೈ 6ರಂದು ವಿಶ್ವದಾದ್ಯಂತ ಚುಂಬನ ದಿನವನ್ನು ಆಚರಿಸಲಾಗುತ್ತಿದೆ. ಕೆಲವೊಂದು ಆಚರಣೆಗಳಿಗೆ ಹೋಲಿಸಿದರೆ ಇದು ಎಷ್ಟೋ ಮೇಲು. ಮುತ್ತು ನೀಡುವುದು ಆರೋಗ್ಯಕ್ಕೂ ಹಿತಕರ.

ಚುಂಬನ, ಕಿಸ್, ಮುತ್ತು, ಪಪ್ಪಿ, ಚುಮ್ಮಾ, ಮುಕ್ಕಾ... ಪ್ರೀತಿಯ ಅಭಿವ್ಯಕ್ತಿಯಾಗಿರುವ ಮುತ್ತು ಹುಡುಗ ಹುಡುಗಿಯ ನಡುವೆಯೇ ಆಗಬೇಕಿಲ್ಲ. ಅಮ್ಮ ಮಗುವನ್ನು ಚುಂಬಿಸುವುದಿಲ್ಲವೆ, ಚಾಂಪಿಯನ್ ಟ್ರೋಫಿಗೆ ಕಿಸ್ ನೀಡುವುದಿಲ್ಲವೆ? ಇದು ಯುನೈಟೆಡ್ ಕಿಂಗ್‌ಡಂನಲ್ಲಿ ಆರಂಭವಾಗಿ ಈಗ ವಿಶ್ವವ್ಯಾಪಿಯಾಗಿದೆ. ಚಲನಚಿತ್ರಗಳಲ್ಲಂತೂ ಚುಂಬನಗಳಿಲ್ಲದಿದ್ದರೆ ಪ್ರೇಕ್ಷಕರೇ ಬರುವುದಿಲ್ಲ. ಕಿಸ್ಸನ್ನು ದೊಡ್ಡ ಇಶ್ಯೂ ಮಾಡುವ ಅಗತ್ಯವೇ ಇಲ್ಲ ಎಂದು ನಟಿಮಣಿಗಳು ಹೇಳುತ್ತಿದ್ದಾರೆ.

ವಾಟೆವರ್, ಚುಂಬನಕ್ಕೆ ಕುರಿತಂತೆ ಕನ್ನಡ ಚಿತ್ರರಂಗದಲ್ಲಿ ರಚಿಸಲಾಗಿರುವ ಕೆಲವು ಹಾಡುಗಳನ್ನು ಮೆಲಕು ಹಾಕುತ್ತ ಚುಂಬನದ ಚಿತ್ರಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳೋಣ. ಹಾಡುಗಳು ಹೀಗಿವೆ ನೋಡಿ : ಮುತ್ತು ಮಳೆಗಾಗಿ ಹೊತ್ತು ಕಾದಿದೆ..., ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು ಕೆಂದುಟಿ ಜೇನನು ಹೀರುವ ಮುನ್ನ ಭಯವೇಕಾಯಿತು, ಲಾಲಾಲಾ..., ನೀರಿನಲ್ಲಿ ಅಲೆಯ ಉಂಗುರ, ಕೆನ್ನೆ ಮೇಲೆ ಪ್ರೇಮದುಂಗುರ..., ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ ನಾನಿಲ್ಲಿ ಇರುವಾಗ, ಮಾತನು ನಿಲ್ಲಿಸು ಸುಮ್ಮನೆ ಪ್ರೀತಿಸು ಕಿಸ್ ಮಿ ಕಿಸ್ ಮಿ..., ಸುಮ್ ಸುಮ್ನೆ ಯಾಕೋ ತುಟಿಯಾ ಚುಂಬಿಸಿದೆ... [ಪಿಟಿಐ ಚಿತ್ರಗಳು]

ರಾಯಲ್ ಕಿಸ್

ರಾಯಲ್ ಕಿಸ್

ಈ ಕ್ಷಣದಿಂದ ನಾನು ನೀನೂ ಗಂಡ ಹೆಂಡತಿ. ರಾಜಕುಮಾರಿಗೆ ರಾಜಕುಮಾರನ ಚುಂಬನ.

ಟೆನ್ನಿಸ್ ಲೋಕದ ಸುಂದರಿ ಶೆರಾಪೋವಾ

ಟೆನ್ನಿಸ್ ಲೋಕದ ಸುಂದರಿ ಶೆರಾಪೋವಾ

ಈ ಮುತ್ತು ಇನಿಯನಿಗಲ್ಲ, ಪ್ರೀತಿಯ ಅಭಿಮಾನಿಗಳಿಗೆ.

ಮುದ್ದು ಮರಿಗೆ ಮುತ್ತಿನ ಸುರಿಮಳೆ

ಮುದ್ದು ಮರಿಗೆ ಮುತ್ತಿನ ಸುರಿಮಳೆ

ಜೋಜೋ ಲಾಲಿ ನಾ ಹಾಡುವೆ ಚಿನ್ನಾ ನಿನ್ನಾ ಮುದ್ದಾಡುವೆ. ಜೋ... ಜೋ

ಒಬಾಮಾ, ಮಿಷೆಲ್ ಚುಂಬನ ವಿನಿಮಯ

ಒಬಾಮಾ, ಮಿಷೆಲ್ ಚುಂಬನ ವಿನಿಮಯ

ಮೈ ಡಾರ್ಲಿಂಗ್

ವಿಶ್ವವನ್ನೇ ಗೆದ್ದ ಸಂಭ್ರಮ

ವಿಶ್ವವನ್ನೇ ಗೆದ್ದ ಸಂಭ್ರಮ

ಆಸ್ಟ್ರೇಲಿಯಾದ ಬರ್ನಾರ್ಡ್ ಟಾಮಿಕ್ ಟೆನ್ನಿಸ್ ಅಂಕಣವನ್ನು ಚುಂಬಿಸುತ್ತಿರುವುದು.

ಪ್ರೇಮಿಗಳ ದಿನ ಪ್ರಣಯಿಗಳ ಕಿಸ್ಸಿಂಗ್

ಪ್ರೇಮಿಗಳ ದಿನ ಪ್ರಣಯಿಗಳ ಕಿಸ್ಸಿಂಗ್

ನ್ಯೂಯಾರ್ಕ್ ಸ್ಟೇಟ್ ಬಿಲ್ಡಿಂಗ್ ಮೇಲೆ ಮದುವೆಯಾದ ದಿನ ವ್ಯಾಲಂಟೈನ್ಸ್ ಡೇ ಕಿಸ್ಸಿಂಗ್.

ಸಂಪ್ರದಾಯ ಮುರಿದ ಪೋಪ್

ಸಂಪ್ರದಾಯ ಮುರಿದ ಪೋಪ್

ವ್ಯಾಟಿಕನ್‌ನ ಪೋಪ್ ಫ್ರಾನ್ಸಿಸ್ ಕೈದಿಯ ಕಾಲು ತೊಳೆದು ಚುಂಬಿಸಿದ ಸಂದರ್ಭ.

ಐ ಲವ್ ಯೂ

ಐ ಲವ್ ಯೂ

'ಜೋಕರ್' ಎಂದೇ ಖ್ಯಾತರಾಗಿರುವ ಟೆನ್ನಿಸ್ ತಾರೆ ಜೋಕೋವಿಕ್ ಟ್ರೋಫಿಗೆ ಮುತ್ತಿಡುತ್ತಿರುವುದು.

ಪೋಪ್ ಸಾಂತ್ವನ

ಪೋಪ್ ಸಾಂತ್ವನ

ಪೋಪ್ ಫ್ರಾನ್ಸಿಸ್ ಮಗುವಿಗೆ ಮುತ್ತಿಟ್ಟು ಸಂತೈಸುತ್ತಿರುವುದು.

ಅಪಾರ್ಥ ಮಾಡ್ಕೋಬೇಡಿ ಪ್ಲೀಸ್

ಅಪಾರ್ಥ ಮಾಡ್ಕೋಬೇಡಿ ಪ್ಲೀಸ್

ಅಂತಾರಾಷ್ಟ್ರೀಯ ನಾಯಕರಲ್ಲಿ ಇದು ಸರ್ವೇಸಾಮಾನ್ಯ.

ಕಿಸ್ಸರ್ ಮಾಸ್ಟರ್ ಬ್ಲಾಸ್ಟರ್

ಕಿಸ್ಸರ್ ಮಾಸ್ಟರ್ ಬ್ಲಾಸ್ಟರ್

ಏಷ್ಯಾ ಕಪ್ ನಲ್ಲಿ ಬಾಂಗ್ಲಾ ದೇಶದ ವಿರುದ್ಧ 100ನೇ ಸೆಂಚುರಿ ಹೊಡೆದ ಮೇಲೆ ಸಚಿನ್ ತೆಂಡೂಲ್ಕರ್ ಹೆಲ್ಮೆಟ್ ಅನ್ನು ಚುಂಬಿಸುತ್ತಿರುವುದು.

ಈ ಚುಂಬನ ದಾಖಲೆಗಾಗಿ ಮಾತ್ರ

ಈ ಚುಂಬನ ದಾಖಲೆಗಾಗಿ ಮಾತ್ರ

ಒಂದೇ ನಿಮಿಷದಲ್ಲಿ ಜಾಸ್ತಿ ಚುಂಬನ ಸ್ವೀಕರಿಸಿ ಗಿನ್ನಿಸ್ ದಾಖಲೆ ಮಾಡಲು ಹೊರಟಿದ್ದ ನಟಿ ವೀಣಾ ಮಲಿಕ್‌ಗೆ ಮುತ್ತಿಡುತ್ತಿರುವ ಅಭಿಮಾನಿ. ಯಾರಿಗುಂಟು ಯಾರಿಗಿಲ್ಲ?

ಇದು ಗೊಂಬೆಯಲ್ಲ ಪಾಪು ಜೀಸಸ್

ಇದು ಗೊಂಬೆಯಲ್ಲ ಪಾಪು ಜೀಸಸ್

ಗೊಂಬೆಯ ರೂಪದಲ್ಲಿರುವ ಇನ್ಫಂಟ್ ಜೀಸಸ್‌ಗೆ ಸಿಸ್ಟರ್ ಮುತ್ತು.

ಇನ್ಫೆಟ್ ಜೀಸಸ್‌ಗೆ ಮುತ್ತು

ಇನ್ಫೆಟ್ ಜೀಸಸ್‌ಗೆ ಮುತ್ತು

ಭುವನೇಶ್ವರದಲ್ಲಿ ಭಕ್ತಾದಿಗಳು ಇನ್ಫಂಟ್ ಜೀಸಸ್‌ಗೆ ಮುತ್ತಿಡುತ್ತಿರುವುದು.

ಚುಂಬನಕ್ಕೆ ಮುಗಿಬಿದ್ದ ಭಕ್ತರು

ಚುಂಬನಕ್ಕೆ ಮುಗಿಬಿದ್ದ ಭಕ್ತರು

ಭುವನೇಶ್ವರದಲ್ಲಿ ಕ್ರೈಸ್ತ ಬಾಂಧವರು ಇನ್ಫಂಟ್ ಜೀಸಸ್‌ಗೆ ಮುತ್ತಿಡುತ್ತಿರುವುದು.

ಕುರಾನಿಗೆ ಪ್ರೀತಿಯ ಮುತ್ತು

ಕುರಾನಿಗೆ ಪ್ರೀತಿಯ ಮುತ್ತು

ಇರಾನಿನ ಅಧ್ಯಕ್ಷ ಮುಹ್ಮದ್ ಮುಸ್ಲಿಮರ ಪವಿತ್ರ ಗ್ರಂಥ ಕುರಾನಿಗೆ ಭಕ್ತಿಯಿಂದ ಚುಂಬಿಸುತ್ತಿದ್ದಾರೆ.

ಮೈ ಡಿಯರ್ ಲೇಡಿ

ಮೈ ಡಿಯರ್ ಲೇಡಿ

ಇಟ್ ಹ್ಯಾಪನ್ಸ್ ಓನ್ಲಿ ಇನ್ ವಿದೇಶ.

ಡಾಲ್ಫಿನ್ನಿಗೆ ಮುದ್ದು

ಡಾಲ್ಫಿನ್ನಿಗೆ ಮುದ್ದು

ಮನುಷ್ಯನ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಜಾಣ ಡಾಲ್ಫಿನ್ ಅನ್ನು ಚುಂಬಿಸಿ ಮುದ್ದಿಸುತ್ತಿರುವುದು.

ಯಪ್ಪೋ ಸಾಕಪ್ಪಾ ಸಾಕು

ಯಪ್ಪೋ ಸಾಕಪ್ಪಾ ಸಾಕು

ಅಭಿಮಾನಿಗಳ ಮುತ್ತಿನ ಸುರಿಮಳೆಯ ಸುನಾಮಿಯನ್ನು ತಾಳಲಾರದೆ ಸಾಕಪ್ಪಾ ಸಾಕು ಎಂದು ವೀಣಾ ಜಾಗ ಖಾಲಿ ಮಾಡುತ್ತಿರುವುದು. ಆದರೆ, ಅಭಿಮಾನಿಗಳು ಬಿಡಬೇಕಲ್ಲ!

ಟ್ರೋಫಿಗೆ ಟೆನ್ನಿಸ್ ತಾರೆಯ ಮುತ್ತು

ಟ್ರೋಫಿಗೆ ಟೆನ್ನಿಸ್ ತಾರೆಯ ಮುತ್ತು

ಟ್ರೋಫಿಗೆ ಟೆನ್ನಿಸ್ ತಾರೆಯ ಮುತ್ತು

ಗುಟ್ಟೊಂದ ಹೇಳುವೆ

ಗುಟ್ಟೊಂದ ಹೇಳುವೆ

ಮುಂದೇನಾಗುತ್ತದೆ ನಿಮ್ಮ ಊಹೆಗೆ ಬಿಟ್ಟಿದ್ದು.

ಗಲ್ಲಕೆ ಗಲ್ಲ ಸೋಕಲೆ ಕೆನ್ನೆ...

ಗಲ್ಲಕೆ ಗಲ್ಲ ಸೋಕಲೆ ಕೆನ್ನೆ...

ಗಲ್ಲಕೆ ಗಲ್ಲ ಸೋಕಲು ಕೆನ್ನೆ ಕೆಂಪೇಕಾಯಿತು, ಕೆಂದುಟಿ ಜೇನನು ಹೀರುವ ಮುನ್ನ ಭಯವೇಕಾಯಿತು.

ಡೆಕ್ ಮೇಲೆ ಚುಂಬನದ ಪೆಕ್

ಡೆಕ್ ಮೇಲೆ ಚುಂಬನದ ಪೆಕ್

ಅಧಿಕೃತವಾಗಿ ಮದುವೆಯಾದ ಮೊಟ್ಟ ಮೊದಲ ಸಲಿಂಗ ಕಾಮಿಗಳ ಚುಂಬನ ಸಂಭ್ರಮ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
July 6 is observed as International kiss day. Kissing is divine and it is great for health. Smooching has become common factor in movies. There are several ways of kissing. Let's celebrate it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more