• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧರ್ಮಪುರಿಯ ರೋಚಕ ಲವ್ ಸ್ಟೋರಿ ದುರಂತ ಅಂತ್ಯ!

|
dharmapuri
ಚೆನ್ನೈ, ಜು.6 : ಎಂಟು ತಿಂಗಳ ಹಿಂದೆ ತಮಿಳುನಾಡಿನ ಧರ್ಮಪುರಿಯಲ್ಲಿ ಜಾತಿ ಕಲಹಕ್ಕೆ ಕಾರಣವಾಗಿದ್ದ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ವನ್ನಿಯಾರ್ ಸಮುದಾಯದ ಯುವತಿಯನ್ನು ವಿವಾಹವಾಗಿದ್ದ ಯುವಕ, ಇಳವರಸನ್ ಮೃತದೇಹ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.

ಇಳವರಸನ್ (19)ನನ್ನು ಮದುವೆಯಾಗಿದ್ದ ದಿವ್ಯಾ (21), ನಾನು ಆತನ ಜೊತೆ ಹೋಗುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಳು. ಈ ಹೇಳಿಕೆಗಳು ಪ್ರಕಟವಾದ ತಕ್ಷಣ ಇಳವರಸನ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಶುಕ್ರವಾರ ಧರ್ಮಪುರಿಯ ರೈಲ್ವೆ ನಿಲ್ದಾಣದಿಂದ ಸಮೀಪದಲ್ಲೇ ಇಳವರಸನ್ ಮೃತದೇಹ ಪತ್ತೆಯಾಗಿದೆ. ಪೊಲೀಸರು ಇದು ಆತ್ಮಹತ್ಯೆ ಪ್ರಕರಣ, ಇಳವರಸನ್ ಬರೆದಿಟ್ಟ ಡೆತ್ ನೋಟ್ ಸಿಕ್ಕಿದೆ ಎಂದು ಹೇಳಿದ್ದಾರೆ.

ಮರು ಪರೀಕ್ಷೆಗೆ ಆಗ್ರಹ : ಇಳವರಸನ್ ಕುಟುಂಬ ಸದಸ್ಯರು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಇಳವರಸನ್ ಮೃತದೇಹವನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಸುರಕ್ಷಿತವಾಗಿ ಕಾಯ್ದಿರಿಸಬೇಕೆಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಪ್ರಕರಣವೇನು : ದಲಿತ ಯುವಕ ಇಳವರಸನ್ ವನ್ನಿಯಾರ್ ಸಮುದಾಯದ ದಿವ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಯುವಕನ ಜೊತೆ ವಿವಾಹಕ್ಕೆ ದಿವ್ಯಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.

ನವೆಂಬರ್ ತಿಂಗಳಿನಲ್ಲಿ ಈ ಜೋಡಿ ಪಲಾಯನಗೈದು ವಿವಾಹವಾಗಿದ್ದರು. ಇದರಿಂದ ಮನನೊಂದ ದಿವ್ಯಾಳ ತಂದೆ ನಾಗರಾಜನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನಾ ಅವರು, ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಮದ್ರಾಸ್ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ನಾಗರಾಜನ್ ಸಾವಿನ ನಂತರ, ಎರಡು ಜಾತಿಗಳ ನಡುವಿನ ಸಂಘರ್ಷಕ್ಕೆ ಉಂಟಾಗಿತ್ತು. ಚೆನ್ನೈ ಸಮೀಪದ ಮರಕ್ಕಾನಮ್ ಎಂಬಲ್ಲಿರುವ 200 ದಲಿತರ ಗುಡಿಸಲುಗಳಿಗೆ ದಿವ್ಯಾ ಜಾತಿಯ ಜನರು ಬೆಂಕಿ ಹಚ್ಚಿದ್ದರು.

ಜಾತಿ ಸಂಘರ್ಷ ಮತ್ತು ಹೈಕೋರ್ಟ್ ವಿಚಾರಣೆ ನಂತರ ದಿವ್ಯಾ ಮನೆಗೆ ಮರಳಿದ್ದವು. ಗುರುವಾರ ಆಕೆ ನಾನು ಇಳವರಸನ್ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಳು. ಇದರ ನಂತರ ಇಳವರಸನ್ ಮೃತದೇಹ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿ ಪ್ರೇಮಕಥೆ ದುರಂತ ಅಂತ್ಯವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dalit youth E. Ilavarasan, 20, was found dead near Dharmapuri rail track on Friday, July 5. his Vanniyar wife Divya announced her decision to desert him and return to her mother for good. It was a sad twist to the saga of the young lovers who had defied the caste pressures and married last November.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more