• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಕುಂಬ್ಳೆಗೆ ಮೈಸೂರು ಪೇಟ, ವಿವಿ ಗೌರವ

By Mahesh
|

ಮೈಸೂರು, ಜು.5: ಮಾಜಿ ಟೀಂ ಇಂಡಿಯಾ ನಾಯಕ, ಹಾಲಿ ಕೆಎಸ್ ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಅವರಿಗೆ ಶುಕ್ರವಾರ ಮೈಸೂರಿನ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಮೈಸೂರು ವಿಶ್ವವಿದ್ಯಾಲಯದ 93ನೇ ಘಟಿಕೋತ್ಸವದಲ್ಲಿ ಕುಲಪತಿ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ಅನಿಲ್ ಕುಂಬ್ಳೆ ಅವರಿಗೆ ಮೈಸೂರು ಪೇಟ, ಶಾಲು ತೊಡೆಸಿ, ಗೌರವ ಡಾಕ್ಟರೇಟ್ ಪ್ರಮಾಣ ಪತ್ರ ನೀಡಿದರು.

ಸ್ವಾತಂತ್ರ್ಯ ಪ್ರತಿಮೆ ನೋಡಲು ಜನ ಮುಗಿಬಿದ್ದಿದ್ದಾರೆ. ಲಿಬರ್ಟಿ ಪ್ರತಿಮೆ ಇರುವ ದ್ವೀಪಕ್ಕೆ ಮೊದಲ ಫೆರಿ ಜನರನ್ನು ಹೊತ್ತು ಹೊಯ್ದಿದೆ. ಸ್ಯಾಂಡಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮಸುಕಾಗಿದ್ದ ಪ್ರತಿಷ್ಠಿತ ಪ್ರತಿಮೆ ಈಗ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ಜು.4 ರಂದು ಲಿಬರ್ಟಿ ಪ್ರತಿಮೆ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾದ ಸಂಭ್ರಮವನ್ನು ಅಮೆರಿಕದೆಲ್ಲೆಡೆ ಆಚರಿಸಲಾಗಿದೆ.

ಕೈರೋ: ಈಜಿಪ್ಟಿನಲ್ಲಿ ಎಲ್ಲೆಡೆ ಸೇನೆಯ ದಂಡು ಕಂದು ಬಂದಿದೆ. ನಸ್ಸರ್ ನಗರದಲ್ಲಿ ಮುಸ್ಲಿಂ ಸಮುದಾಯದವರು ಪದಚ್ಯುತ ಅಧ್ಯಕ್ಷ ಮೊರ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈಜಿಸ್ಟಿನ ಮುಖ್ಯ ನ್ಯಾಯಮೂರ್ತಿ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ಮೇಲೆ ಹಲವೆಡೆ ಪ್ರತಿಭಟನೆ, ಸಂಭ್ರಮಾಚರಣೆಯಾಗಿ ಮಾರ್ಪಟ್ಟಿದೆ.

ಲಂಡನ್: ಈ ಬಾರಿಯ ವಿಂಬಲ್ಡನ್ ನಲ್ಲಿ ಎರಡನೇ ಸ್ಟೆಫಿ ಗ್ರಾಫ್ ಎಂದೇ ಗುರುತಿಸಲ್ಪಡುತ್ತಿರುವ ಜರ್ಮನಿಯ ಸಬಿನ್ ಲಿಶಿಕಿ ಅವರು ಪೋಲ್ಯಾಂಡಿನ ಸ್ಪರ್ಧಿ ರಾವಾನ್ಸ್ಕ ಸೋಲಿಸಿ ಮಹಿಳೆಯರ ಸಿಂಗಲ್ಸ್ ಫೈನಲ್ ತಲುಪಿದ್ದಾರೆ.

ಉಳಿದಂತೆ ಅಹಮದಾಬಾದ್ ಸಂಪೂರ್ಣ ಜಲಾವೃತವಾಗಿದೆ.ಕರ್ನಾಟಕದ ಕರಾವಳಿ, ಮಲೆನಾಡು ಭಾಗಗಳಲ್ಲಿ ಆರಿದ್ರಾ ಮಳೆ ಆರ್ಭಟ ಮುಂದುವರೆದಿದೆ.. ಇಂದಿನ ಚಿತ್ರ ಸುದ್ದಿಗಳನ್ನು ನೋಡಿ...

ಡಾ. ಅನಿಲ್ ಕುಂಬ್ಳೆ

ಡಾ. ಅನಿಲ್ ಕುಂಬ್ಳೆ

ಮೈಸೂರು: ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ಏರೋನಾಟಿಕಲ್ ವಿಜ್ಞಾನಿ ರೊದ್ದಮ್ ನರಸಿಂಹ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೂ. ರಂಗಸ್ವಾಮಿ, ಕಾನೂನು ತಜ್ಞ ಟಿ.ಕೆ ವಿಶ್ವನಾಥನ್ ಅವರಿಗೆ ಜು.5 ರಂದು ನಡೆದ 93ನೇ ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಸ್ವಾತಂತ್ರ್ಯಪ್ರತಿಮೆ ಮುಕ್ತ

ಸ್ವಾತಂತ್ರ್ಯಪ್ರತಿಮೆ ಮುಕ್ತ

ನ್ಯೂಯಾರ್ಕ್ : ಲಿಬರ್ಟಿ ಪ್ರತಿಮೆ ನೋಡಲು ಸಾಗಿದ ಜನ ಸಮೂಹ

ಕೈರೋದಲ್ಲಿ ಅಶಾಂತಿ

ಕೈರೋದಲ್ಲಿ ಅಶಾಂತಿ

ಈಜಿಪ್ಟಿನಲ್ಲಿ ಎಲ್ಲೆಡೆ ಸೇನೆಯ ದಂಡು ಕಂದು ಬಂದಿದೆ. ನಸ್ಸರ್ ನಗರದಲ್ಲಿ ಮುಸ್ಲಿಂ ಸಮುದಾಯದವರು ಪದಚ್ಯುತ ಅಧ್ಯಕ್ಷ ಮೊರ್ಸಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೊಸ ಕಾರು

ಹೊಸ ಕಾರು

ಪುಣೆ: ಮರ್ಸೀಡೆಸ್ ಬೆಂಜ್ ಇ ಕ್ಲಾಸ್ ನ ಹೊಸ ಕಾರನ್ನು ಗುರುವಾರ ಹೊರ ಬಿಡಲಾಗಿದೆ.

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಲಂಡನ್: ಫ್ರಾನ್ಸಿನ ಬಾರ್ಟೋಲಿ ಅವರು ಬೆಲ್ಜಿಯಂನ ಫ್ಲಿಕೆನ್ಸ್ ಸೋಲಿಸಿ ಫೈನಲ್ ತಲುಪಿದ್ದಾರೆ.

ವಾಟರ್ ಫೈನಲ್ ಪಂದ್ಯ

ವಾಟರ್ ಫೈನಲ್ ಪಂದ್ಯ

ಲಂಡನ್: ಫ್ರಾನ್ಸಿನ ಬಾರ್ಟೋಲಿ ಅವರು ಬೆಲ್ಜಿಯಂನ ಫ್ಲಿಕೆನ್ಸ್ ನಡುವಿನ ಕ್ವಾಟರ್ ಫೈನಲ್ ಪಂದ್ಯದ ಚಿತ್ರ

ಜರ್ಮನಿಯ ಪ್ರತಿಭೆ

ಜರ್ಮನಿಯ ಪ್ರತಿಭೆ

ದೈತ್ಯ ಸಂಹಾರಿಯಾಗಿ ಫೈನಲ್ ತಲುಪಿರುವ ಜರ್ಮನಿಯ ಲಿಶಿಕಿ ಸೆಮಿಫೈನಲ್ ಪಂದ್ಯ ಗೆದ್ದ ಖುಷಿಯಲ್ಲಿ ಕಂಡು ಬಂದಿದ್ದು ಹೀಗೆ

ವಿಂಬಲ್ಡನ್ ಚಿತ್ರಗಳು

ವಿಂಬಲ್ಡನ್ ಚಿತ್ರಗಳು

ಜರ್ಮನಿಯ ಲಿಶಿಕಿ ಸೆಮಿಫೈನಲ್ ಪಂದ್ಯದ ಆಟದ ಭಂಗಿ

ಮಂಗಳೂರು ಮಳೆ

ಮಂಗಳೂರು ಮಳೆ

ಮಂಗಳೂರು: ಹೋಮ್ ಗಾರ್ಡ್ ಸಹಾಯದಿಂದ ಮರವೂರಿನ ಅಣೆಕಟ್ಟನ್ನು ದಾಟುತ್ತ್ತಿರುವ ಜನ. ಮಂಗಳೂರಿನ ಸುತ್ತಮುತ್ತಲಿನ ಊರುಗಳಲ್ಲಿ ಮಳೆ ತನ್ನ ಅರ್ಭಟ ಶುಕ್ರವಾರವೂ ಮುಂದುವರೆಸಿದೆ.

ಅಹಮದಾಬಾದ್ ಚಿತ್ರ

ಅಹಮದಾಬಾದ್ ಚಿತ್ರ

ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್

ಅಹಮದಾಬಾದ್ ಜಲಮಯ

ಅಹಮದಾಬಾದ್ ಜಲಮಯ

ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್ ಪ್ರಮುಖ ರಸ್ತೆಗಳು

ಅಹಮದಾಬಾದ್ ಚಿತ್ರ

ಅಹಮದಾಬಾದ್ ಚಿತ್ರ

ಸಂಪೂರ್ಣ ಜಲಮಯವಾಗಿರುವ ಅಹಮದಾಬಾದ್ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ

ಮಂಗಳೂರಿನ ಮಳೆ

ಮಂಗಳೂರಿನ ಮಳೆ

ಮನೆಗೆ ನೀರು ನುಗ್ಗಿದ್ದರಿಂದ ಗಾಬರಿಯಾಗಿ ನಿಂತು ನೋಡುತ್ತಿರುವ ಮಂಗಳೂರು ಜನ

English summary
Todays News stories in Pics: Mysore: Former Indian cricketer Anil Kumble being felicitated with an honorary doctorate by the Mysore University during the 93rd commencement ceremony of varsity in Mysore on Friday. and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X