ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ರಜೆ ನೀಡಲಿಲ್ಲ ಎಂದು ಪೇದೆ ಆತ್ಮಹತ್ಯೆ

|
Google Oneindia Kannada News

suicide
ಮೈಸೂರು, ಜು.5 : ಕೇಂದ್ರಿಯ ಭದ್ರತಾ ಪಡೆಯ ಪೇದೆಯೊಬ್ಬರು ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸಿಐಎಸ್ಎಫ್ ಪೇದೆ ಶುಕ್ರವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ರೇಂದ್ರಿಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಪೇದೆ ನರೇಶ್ ಕುಮಾರ್ (35) ಮೃತಪಟ್ಟ ದುರ್ದೈವಿ. ಮೈಸೂರಿನ ಇಲವಾಲ ಬಳಿ ತನ್ನ ಸರ್ವೀಸ್ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ನರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಹರಿಯಾಣದವರಾದ ನರೇಶ್ ಗೆ ಮೇಲಾಧಿಕಾರಿಗಳು ರಜೆ ನೀಡರಲಿಲ್ಲ.

ಮನೆಯವರು ಊರಿಗೆ ಬರುವಂತೆ ಹೆಚ್ಚಿನ ಒತ್ತಡ ಹಾಕುತ್ತಿದ್ದರು ಇದರಿಂದ ಬೇಸತ್ತ ನರೇಶ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2008ರಲ್ಲಿ ನರೇಶ್ ಕೇಂದ್ರಿಯ ಭದ್ರತಾ ಪಡೆಗೆ ಸೇರ್ಪಡೆಗೊಂಡಿದ್ದರು. ಆರ್ ಎಂಪಿಯ ಭದ್ರತೆಗಾಗಿ ನರೇಶ್ ರನ್ನು ನಿಯೋಜಿಸಲಾಗಿತ್ತು.

ಇವರ ಪತ್ನಿ ಮತ್ತು ಮಕ್ಕಳು ಹರಿಯಾಣದಲ್ಲಿದ್ದರು. ಆದರೆ, ಅವರನ್ನು ನೋಡಲು ತೆರಳುವುದಕ್ಕೂ ಅಧಿಕಾರಿಗಳು ರಜೆ ನೀಡಿರಲಿಲ್ಲ. ಊರಿಗೆ ಬರುವಂತೆ ಮನೆಯವರು ಪದೇ ಪದೇ ಒತ್ತಡ ಹಾಕುತ್ತಿದ್ದರು. ಇದರಿಂದ ಬೇಸತ್ತ ನರೇಶ್ ಶುಕ್ರವಾರ ಮುಂಜಾನೆ ತನ್ನ ರಿವಾಲ್ವಾರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಹಾವೇರಿಯಲ್ಲಿ ಪೇದೆ ಆತ್ಮಹತ್ಯೆ)

ಶುಕ್ರವಾರ ಬೆಳಗ್ಗೆ ನರೇಶ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಬಿಳಿಕೆರೆ ಪೊಳೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸಹ ರಾಜ್ಯ ಪೊಲೀಸ್ ಇಲಾಖೆಯ ಪೇದೆಗಳಿಬ್ಬರು ರಜೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಒಬ್ಬರು ಬದುಕಿದರೆ, ಮತ್ತೊಬ್ಬ ಪೇದೆ ಮೃತಪಟ್ಟಿದ್ದರು.

English summary
The 30-year-old CISF constable Naresh allegedly committed Suicide by shooting him self by service revolver. incident reported at Bilikere police station limits, Mysore district . Police registered the case and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X