ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BBMP ಉಸ್ತುವಾರಿಯಲ್ಲಿ ಮರ ಕಡಿಸುವುದು ಹೇಗೆ?

By Srinath
|
Google Oneindia Kannada News

ಬೆಂಗಳೂರು, ಜುಲೈ 5: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ (BBMP) ಈಗಾಗಲೇ Chief Conservator of Forests ಅಧೀನದಲ್ಲಿ Forest Cell ಎಂಬ ವಿಭಾಗ ಇದೆ. ಆದರೆ ಸಾರ್ವಜನಿಕರು ಮರ ಕಡಿಸುವುದಕ್ಕೆ ಅಥವಾ ಕಾನೂನುಬಾಹಿರವಾಗಿ ಮರ ಕಡಿಸುತ್ತಿದ್ದರೆ ನೇರವಾಗಿ ಇವರಿಗೆ ದೂರುವಂತಿಲ್ಲ.

ಸಾರ್ವಜನಿಕರು ಮರ ಕಡಿಯುವ ಸಂಬಂಧ ಮೊದಲು Tree Officer ನಂತರ Range Officer ಅವರನ್ನು ಸಂಪರ್ಕಿಸಬೇಕಾಗುತ್ತದೆ.

Bangalore tree felling authority structure phone-numbers
So ಮೊದಲು Tree Officerಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಅವರು ಸ್ಥಳ ಪರೀಕ್ಷೆ ನಡೆಸಿ, ತಮ್ಮ ಮೇಲಾಧಿಕಾರಿಯಾದ Range Officerಗೆ ವರದಿಯನ್ನು ಸಲ್ಲಿಸುತ್ತಾರೆ. ಅವರ ವರದಿಯನ್ನಾಧರಿಸಿ Range Officerಗಳು ತಮ್ಮ ವಿವೇಚನೆ ಬಳಸಿ ಮರ ಕಡಿಸುವುದಕ್ಕೆ ಅನುಮತಿಸುತ್ತಾರೆ. ಅಥವಾ ಅದರ ಅಗತ್ಯ ಇಲ್ಲ ಅಂತಾದರೆ ಮರ (ಕೊಂಬೆ) ಕಡಿಯುವುಯದಕ್ಕೆ ಅನುಮತಿ ನಿರಾಕರಿಸುತ್ತಾರೆ. ಅದಕ್ಕೂ ಮುನ್ನ Range Officerಗಳು ತಮ್ಮ ಮೇಲಧಿಕಾರಿಯಾದ ACFಗಳಿಂದ ಅನುಮತಿ ಪತ್ರ ಪಡೆದುಕೊಳ್ಳುತ್ತಾರೆ.

ಬಿಬಿಎಂಪಿ ಅಧೀನದಲ್ಲಿ ಕಾನೂನುರೀತ್ಯ ಮರ-ಕೊಂಬೆ ಕಡಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿರಿ. ಬರೀ ಅಷ್ಟೇ ಅಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿ ಯಾರಾದರೂ ಮರ ಕಡಿಯುತ್ತಿದ್ದರೆ ಅದನ್ನು ತಡೆಯಲು ತಕ್ಷಣ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು.

BBMP ಮರ ಪ್ರಾಧಿಕಾರವು ತನ್ನ ಕಾರ್ಯಾನುಕೂಲಕ್ಕಾಗಿ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡನೆಯಾಗಿವೆ. ಹಾಗಾಗಿ ಭೌಗೋಳಿಕವಾಗಿ ಆಯಾ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಈ ಅಧಿಕಾರಿಗಳ ಕಾರ್ಯಸ್ಥಾನ ಇಲ್ಲಿದೆ.

ಉತ್ತರ ಬೆಂಗಳೂರು: ವೆಂಕಟ್ ರೆಡ್ಡಿ, ACF, ಎಂಜಿ ರಸ್ತೆಯಲ್ಲಿರುವ ಮೇಯೋ ಹಾಲ್ - 94806 83083
ದಕ್ಷಿಣ ಬೆಂಗಳೂರು : ರಂಗನಾಥ ಸ್ವಾಮಿ, ACF, ಜಯನಗರ 2ನೆ ಬ್ಲಾಕ್ - 94806 83842

BBMPಯಲ್ಲಿ Tree Authority ಎಂಬ ಉನ್ನತ ಪ್ರಾಧಿಕಾರವೂ ಇದೆ. ಒಂದು ವೇಳೆ ACF ನಿರ್ಣಯದಿಂದ ನಿಮಗೆ ತೃಪ್ತಿ ಸಿಗಲಿಲ್ಲವೆಂದಾದರೆ Tree Authorityಯನ್ನು ಸಂಪರ್ಕಿಸಬಹುದು.

ಕರ್ನಾಟಕ ಮರ ಸಂರಕ್ಷಣೆ ಕಾಯಿದೆ- 1976ರ ಅನುಸಾರ ಮೂರು ವರ್ಷಗಳ ಹಿಂದೆ 2010ರಲ್ಲಿ ಮರ ಪ್ರಾಧಿಕಾರ Tree Authority ಎಂಬುದನ್ನು ಸ್ಥಾಪಿಸಲಾಯಿತು. ಮರ ಕಡಿಸುವುದಕ್ಕೆ ಸಂಬಂಧಪಟ್ಟಂತೆ ಈ ಮರ ಪ್ರಾಧಿಕಾರದ ತೀರ್ಮಾನವೇ ಅಂತಿಮ. ಮರ ಪ್ರಾಧಿಕಾರದಲ್ಲಿ ಪದನಿಮಿತ್ತ ಅಧ್ಯಕ್ಷರಾಗಿ ಮೇಯರ್ ಜತೆಗೆ ತೋಟಗಾರಿಕೆ ವಿಭಾಗದ ಜಂಟಿ ನಿರ್ದೇಶಕರು ಮತ್ತು ಒಬ್ಬ ಕಾರ್ಪೊರೇಟರ್ ಸಹ ಇರುತ್ತಾರೆ.

ಇವರ ಜತೆಗೆ, Tree Authorityದಲ್ಲಿ ಬಿಬಿಎಂಪಿ ಆಯುಕ್ತರು ಮತ್ತು Chief Conservator of Forests (CCF), Deputy Conservator of Forests (DCF) ಮತ್ತು Assistant Conservator of Forests (ACF) ಸಹ ಇರುತ್ತಾರೆ.

English summary
Trees are cut or pruned constantly in Bangalore many times illegally- sometimes legally. In that case who should i complain to. The phone numbers of the concerned officers (Assistant Conservator of Forests-ACF) in the Bruhat Bangalore Mahanagara Palike (BBMP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X