ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲ ಝಳಕ್ಕೆ ಉತ್ತರ ಅಮೆರಿಕ ನಿರುತ್ತರ!

By ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

Heat wave in North America
ಒಂದೆಡೆ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಕಳೆದ ತಿಂಗಳು ಭೀಕರ ಮಳೆಯ ಆರ್ಭಟಕ್ಕೆ ಸಾವಿರಾರು ಜನ ಪ್ರಾಣ ಕಳೆದುಕೊಂಡು, ಊರಿಗೆ ಊರೇ ಕೊಚ್ಚಿಕೊಂಡು ಹೋಗಿದ್ದರೆ, ಇನ್ನೊಂದೆಡೆ ಬಿಸಿಲಿನ ಬೇಗೆಗೆ ಹಲವರು ಪ್ರಾಣ ಕಳೆದುಕೊಂಡು, 8 ಸಾವಿರ ಎಕರೆಯಷ್ಟು ಅರಣ್ಯ ಪ್ರದೇಶ ಬಿಸಿಲಿನ ಝಳಕ್ಕೆ ಹತ್ತಿದ ಕಾಡ್ಗಿಚ್ಚಿಗೆ ಸುಟ್ಟು ಕರಕಲಾಗಿರುವುದನ್ನು ನೋಡಿ ಉತ್ತರ ಅಮೆರಿಕಾದ ಜನತೆ ತತ್ತರಿಸಿ ಹೋಗಿದ್ದಾರೆ.

ಹೊರಗಡೆ ಹೆಜ್ಜೆ ಇಟ್ಟರೆ ಬಿಸಿಲಿನ ಝಳ-ಝಳ, ಒಳಗಡೆ ಹೆಜ್ಜೆ ಇಟ್ಟರೆ ಕಾಸಿನ ಝಣ-ಝಣ ಶಬ್ದ ಕೇಳಿಬರೋ ವಿಶ್ವದ ಪ್ರಸಿದ್ದ ಪ್ರವಾಸಿ ತಾಣ ಲಾಸ್ ವೇಗಾಸ್ನಲ್ಲಿ ಮೊನ್ನೆ 115 ಡಿಗ್ರಿ F ಉಷ್ಣತೆ ಇತ್ತು. ಹವಾಮಾನ ಇಲಾಖೆಯ ಪ್ರಕಾರ ಜೂನ್ 1994ರ ನಂತರ ಲಾಸ್ ವೇಗಾಸ್ನಲ್ಲಿ ಕಂಡುಬಂದ ಗರಿಷ್ಟ ಉಷ್ಣಾಂಶ ಇದಾಗಿದೆ. ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಇದ್ದಿದ್ದು 130 ಡಿಗ್ರಿ F.

ಈ ಬಿಸಿಲಿನ ಬೆಂದ ಗಾಳಿಗೆ ನೆವಡಾ, ಆರಿಜೋನ ರಾಜ್ಯಗಳ ಸುಮಾರು 8 ಸಾವಿರ ಎಕರೆಯಷ್ಟು ಮರುಭೂಮಿಯ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಸುಟ್ಟು ಹೋಗಿದೆ. ಅಲ್ಲಿದ್ದ ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ಈ ಕಾಡ್ಗಿಚ್ಚನ್ನು ಶಮನಗೊಳಿಸಲು ಅಗ್ನಿಶಾಮಕದವರು ಹರಸಾಹಸ ಪಡುತ್ತಿದ್ದಾರೆ. ಅದೇ ಬೆಂಕಿಯಲ್ಲಿ 19 ಜನ ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದು ಒಂದು ದೊಡ್ಡ ದುರಂತವೇ ಸರಿ.

ಅಧಿಕ ಉಷ್ಣತೆಯ ಕಾರಣದಿಂದ ಹಲವಾರು ವಿಮಾನಗಳ ಸಂಚಾರ ಸ್ಥಗಿತ, ಮನೆಯಲ್ಲಿ ಏರ್ ಕಂಡಿಷನರ್ ಸರಿಯಾಗಿ ಕೆಲಸ ಮಾಡದ ಕಾರಣ ಒಬ್ಬ ವೃದ್ದರು ಲಾಸ್ ವೇಗಸ್ ನಲ್ಲಿ ಮೃತ ಪಟ್ಟಿದ್ದಾರೆ. ಅಕ್ರಮವಾಗಿ ಗಡಿಯಲ್ಲಿ ನುಸುಳಿ ಈ ಮರುಭೂಮಿಯ ಕಾಡಲ್ಲಿ ಕಣ್ತಪ್ಪಿಸಿ ಉಳಿದು ಕೊಂಡಿದ್ದ ಹಲವಾರು ಅಕ್ರಮ ವಲಸೆಗಾರರು ಕೂಡ ಅಸುನೀಗಿದ್ದಾರೆ.

ಪ್ರಕೃತಿ ಮುನಿದರೆ ಯಾರೂ ಏನು ಮಾಡಲಾಗದು ಅನ್ನೋದಿಕ್ಕೆ ಈ ಉತ್ತರಾಖಂಡ ಮತ್ತು ಉತ್ತರ ಅಮೆರಿಕಾದ ಅನಾಹುತಗಳೇ ಒಂದು ಸ್ಪಷ್ಟ ಉದಾಹರಣೆ ಎಂದರೆ ತಪ್ಪಾಗಲಾರದು. ಉತ್ತರಾಖಂಡ ಮತ್ತು ಉತ್ತರ ಅಮೆರಿಕಾದ ಪ್ರಕೃತಿ ವಿಕೋಪಕ್ಕೆ ಯಾರಲ್ಲಿಯೂ ಉತ್ತರವಿಲ್ಲ.

English summary
On one side Uttarakhand in India was bettered by flood and on the other side brutal heat wave is sweeping North America. Both have caused widespread damage to the people and property. Do we have answer to nature fury?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X