ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಚ್ಚುವ ಭೀತಿಯಲ್ಲಿ ಚೆನ್ನೈ ಐಟಿ ಕಾರಿಡಾರ್

By Mahesh
|
Google Oneindia Kannada News

ಚೆನ್ನೈ, ಜು.4: ಬೆಂಗಳೂರು, ಹೈದರಾಬಾದ್ ನಡುವೆ ಚೆನ್ನೈ ಹಾಗೂ ಹೀಗೂ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಮೂಲ ಸೌಕರ್ಯ ಸಮಸ್ಯೆ ಉಲ್ಬಣವಾಗಿದ್ದು, ಮಹಾಬಲಿಪುರಂ ರಸ್ತೆಯಲ್ಲಿರುವ ಐಟಿ ಕಾರಿಡಾರ್ ಬಂದ್ ಆಗುವ ಭೀತಿಯಲ್ಲಿದೆ.

ಕಳೆದ ವಾರದಿಂದ ಹೀಗೊಂದು ಭೀತಿ ಇಲ್ಲಿನ ಟೆಕ್ಕಿಗಳಿಗೆ ಶುರುವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಚೆನ್ನೈನಲ್ಲಿ ನೀರಿನ ಸಮಸ್ಯೆ ಇದ್ದೇ ಇದೆ. ಆದರೆ, ಹಣ ಚೆಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಇಲ್ಲಿನ ಐಟಿ ಕಂಪನಿಗಳು ಯುಎಸ್, ಯುರೋಪಿನ ಫಾರ್ಚ್ಯೂನ್ 500 ಕಂಪನಿಗಳಿಗೆ ಬಿಲಿಯನ್ ಡಾಲರ್ ಗಳನ್ನು ಉತ್ಪಾದಿಸುತ್ತಿತ್ತು. ಆದರೆ, ಕಳೆದ ವಾರ ಬಹುತೇಕ ಎಲ್ಲಾ ಕಂಪನಿಗಳು ಜಲ ಸಮಸ್ಯೆಯಿಂದ ತತ್ತರಿಸಿವೆ.

ಸಮಸ್ಯೆಗೆ ಪರಿಹಾರ ಸ್ಥಳೀಯ ಮುನ್ಸಿಪಾಲಿಟಿ ಕೈಲಿ ಆಗುವುದಿಲ್ಲ ಎಂಬುದನ್ನು ಅರಿತ ಟೆಕ್ಕಿಗಳ ಸಮೂಹ ಈಗ ತಮಿಳುನಾಡು ಸರ್ಕಾರದ ಮೊರೆ ಹೋಗಲು ನಿರ್ಧರಿಸಿದೆ. ಇಲ್ಲಿನ OMR ಕಾರಿಡಾರ್ ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಕಾಗ್ನಿಜೆಂಟ್ ಹಾಗೂ ಇನ್ಫೋಸಿಸ್ ಸೇರಿದಂತೆ ಹಲವು ಕಂಪನಿಗಳು ಜಲ ಸಮಸ್ಯೆಗೆ ಸಿಲುಕಿವೆ. ನಗರಪಾಲಿಕೆ ನೀರು ಸರಬರಾಜು ಕೈ ಕೊಟ್ಟು ಎಷ್ಟು ದಿನಗಳಾಗಿದ್ದು, ಟ್ಯಾಂಕರ್ ಗಳಿಂದ ಶುದ್ಧ ನೀರು ಖರೀದಿಗೆ ಮುಂದಾಗಿದ್ದಾರೆ.

ಆದರೆ, ವಾಟರ್ ಟ್ಯಾಂಕರ್ ಸೇವೆ ನೀಡುವ ಸಂಸ್ಥೆಗಳು 52 ಗಂಟೆಗಳ ಮುಷ್ಕರ ಹೂಡಿದ್ದು, ಐಟಿ ಕಾರಿಡಾರ್ ಗೆ ಕೊಂಚ ಜಾರಾಗಿ ತಟ್ಟಿದೆ. ಐಟಿ ಕಂಪನಿಗಳಿಗೆ ಜಲ ಸಮಸ್ಯೆ ಕಂಪನಿ ಮುಚ್ಚುವಷ್ಟು ತೊಂದರೆ ಕೊಡುತ್ತಿದೆಯೆ? ಸರ್ಕಾರದ ಗಮನಕ್ಕೆ ಇನ್ನೂ ಬಂದಿಲ್ಲವೇಕೆ? ಈ ಬಗ್ಗೆ ದೊಡ್ಡ ದೊಡ್ಡ ಕಂಪನಿಗಳು ಏನು ಹೇಳುತ್ತಿವೆ? ಮುಂದೆ ಓದಿ...

 ಚೆನ್ನೈನಲ್ಲಿ ನೀರಿಗೆ ಬರ

ಚೆನ್ನೈನಲ್ಲಿ ನೀರಿಗೆ ಬರ

ನಾಸ್ಕಾಮ್ ವರದಿಯಂತೆ ತಮಿಳುನಾಡಿನ 3/4 ಭಾಗದಷ್ಟು ಸಾಫ್ಟ್ ವೇರ್ ರಫ್ತು 50,000 ಕೋಟಿ ರು.ಗೂ ಅಧಿಕ ಮೊತ್ತ OMR ಐಟಿ ಕಾರಿಡಾರ್ ನಿಂದಲೇ ಉತ್ಪತ್ತಿಯಾಗುತ್ತದೆ. ಟಿಸಿಎಸ್ ನಂಥ ದೊಡ್ಡ ಸಂಸ್ಥೆ ಮೂಲ ಸ್ಥಾನ ಇಲ್ಲಿದ್ದು ಕರ್ನಾಟಕದ ಸಾಫ್ಟ್ ವೇರ್ ರಫ್ತು ಪ್ರಮಾಣಕ್ಕೆ ಪೈಪೋಟಿ ನೀಡಲು ಯತ್ನ ನಡೆದಿದೆ.

ನೀರಿನ ಸಮಸ್ಯೆ ಹೀಗೆ ದಿನಕ್ಕೆ 100 ಕೋಟಿ ರು.ಗೂ ಅಧಿಕ ಮೊತ್ತವನ್ನು ಸಾಫ್ಟ್ ವೇರ್ ಕಂಪನಿಗಳು ಕಳೆದುಕೊಳ್ಳುತ್ತವೆ. ದೊಡ್ಡ ಕಂಪನಿಗಳನ್ನು ನಂಬಿಕೊಂಡಿರುವ ಇನ್ನಿತರ ಹೋಟೆಲ್, ಸಾರಿಗೆ, ಮೂಲ ಸೌಕರ್ಯ ಇನ್ನಿತರ ಸಣ್ಣ ಉದ್ಯಮಗಳಿಗೂ ಭಾರಿ ನಷ್ಟವಾಗಲಿದೆ.

ಎಚ್ಚರಿಕೆ ಕಡೆಗಣಿಸಿದ ಕಂಪನಿಗಳು

ಎಚ್ಚರಿಕೆ ಕಡೆಗಣಿಸಿದ ಕಂಪನಿಗಳು

2011 ರಲ್ಲಿ Federation of Indian Chambers of Commerce and Industry ಸಮೀಕ್ಷೆ ನಡೆಸಿ ನೀರಿನ ಸಮಸ್ಯೆ ಉಲ್ಬಣವಾಗುವ ಸೂಚನೆ ನೀಡಿದ್ದರು. ಶೇ 60 ರಷ್ಟು ಕಂಪನಿಗಳು ಜಲಸಮಸ್ಯೆಯಿಂದ ನಷ್ಟವಾಗುತ್ತಿದೆ ಎಂದಿದ್ದವು.

ಪರಿಸ್ಥಿತಿ ಹೀಗೆ ಮುಂದುವರೆದರೆ 2021ರ ಹೊತ್ತಿಗೆ ಶೇ 80ರಷ್ಟು ಕಂಪನಿಗಳು ಸಂಪೂರ್ಣ ಮುಚ್ಚಬೇಕಾಗುತ್ತದೆ ಎನ್ನಲಾಗಿತ್ತು. ಆದರೆ, 2013ರಲ್ಲೇ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರಮುಖ ಕಂಪನಿಗಳಾದ ಇನ್ಪೋಸಿಸ್, ಟಿಸಿಎಸ್ ಹಾಗೂ ಕಾಗ್ನಿಜೆಂಟ್ ಈ ಎಚ್ಚರಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಿರಲಿಲ್ಲ. ಸರ್ಕಾರದ ಕೆಲಸ ಎಂದು ಸುಮ್ಮನಾಗಿದ್ದು ಮುಳುವಾಗುತ್ತಿದೆ.

ನಿಲೇಕಣಿ ಹೇಳಿಕೆ

ನಿಲೇಕಣಿ ಹೇಳಿಕೆ

ಮಹಾಬಲಿಪುರಂ ರಸ್ತೆ ಕಾರಿಡಾರ್ ನ ಕೈಗಾರಿಕಾ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿರುವುದು ವಾಟರ್ ಟ್ಯಾಂಕರ್ ಸರಬರಾಜು ಸಂಸ್ಥೆ ಮುಷ್ಕರ ಮಾತ್ರವಲ್ಲ. ಸಮಸ್ಯೆ ಮೊದಲಿನಿಂದಲೂ ಇದ್ದೇ ಇದೆ.

ಇದು ಎಲ್ಲೆಡೆ ಸಮಸ್ಯೆ ಸರ್ಕಾರಕ್ಕಿಂತ ಸರ್ಕಾರೇತರ ಸಮಸ್ಯೆಗಳ ನೆರವಿನಿಂದ ಆದಷ್ಟು ಪರಿಹಾರ ಕಾಯಲು ಯತ್ನಿಸಲಾಗಿದೆ. ಆದರೆ, ಚೆನ್ನೈನಲ್ಲಿ ಅಂತರ್ಜಲ ಮಟ್ಟವೂ ಕುಸಿಯುತ್ತಿರುವುದು ಸಮಸ್ಯೆ ಉಲ್ಬಣಿಸಿದೆ ಎಂದು ಅರ್ಘ್ಯಂ ಎನ್ ಜಿಒನ ಮುಖ್ಯಸ್ಥೆ ಇನ್ಫೋಸಿಸ್ ಸಂಸ್ಥೆ ಷೇರುದಾರರಾಗಿರುವ ರೋಹಿಣಿ ನಿಲೇಕಣಿ ಹೇಳಿದ್ದಾರೆ.

ಮಳೆ ನೀರು ಕೊಯ್ಲು, ಜಲ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲು ಅನೇಕ ಸಂಸ್ಥೆಗಳು ತಯಾರಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿಯಲ್ಲೇ ಕಾಲ ದೂಡಲಾಗುತ್ತಿದೆ.

ಪರಿಹಾರವೇ ಇಲ್ಲವೇ

ಪರಿಹಾರವೇ ಇಲ್ಲವೇ

ಟ್ಯಾಂಕರ್ ಗಳ ಮೂಲಕ ನೀರು ಬಳಕೆ ಬಿಟ್ಟರೆ ಬೇರೆ ಉಪಾಯ ಕಾಣುತ್ತಿಲ್ಲ.ಈ ಕೈಗಾರಿಕಾ ಪ್ರದೇಶದಲ್ಲಿ ಬೋರ್ ವೆಲ್ ಕೊರೆಯುವಂತಿಲ್ಲ. ನೀರಿನ ಶುದ್ಧೀಕರಣ ಘಟಕವೂ ನಿರ್ಮಾಣವಾಗಿಲ್ಲ.

ಸುಮಾರು 12,000 ಲೀಟರ್ ನಷ್ಟು ನೀರಿಗೆ 250-400 ರು ಕೊಟ್ಟು ಪಡೆದುಕೊಳ್ಳಲಾಗುತ್ತಿದೆ. ಐಟಿ ಕಾರಿಡಾರ್ ನಿಂದ ಹೆಚ್ಚಿನ ಲಾಭ ಬರುತ್ತಿದ್ದಂತೆ ಸುತ್ತ ಮುತ್ತಲ ಗ್ರಾಮಗಳಿಗೆ ನೀರು ಸರಬರಾಜು ಬಂದ್ ಆಗಿದೆ. ಗ್ರಾಮಸ್ಥರು ಹೆಚ್ಚಿನ ಬೆಲೆ ತೆರಲಾರದೆ ನೀರಿಲ್ಲದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಒಂದಿಷ್ಟು ಅಂಕಿ ಅಂಶ

ಒಂದಿಷ್ಟು ಅಂಕಿ ಅಂಶ

* ಬಾಟಲಿ ಹಾಗೂ ಪೊಚ್ ಗಳಲ್ಲಿ ಸುಮಾರು 1 ಕೋಟಿ ಲೀಟರ್ ಚೆನ್ನೈಗೆ ಸರಬರಾಜಾಗುತ್ತಿದೆ.
* ಬೇಸಿಗೆಯಲ್ಲಿ ಪ್ರತಿನಿತ್ಯ ಚೆನ್ನೈ ನಿವಾಸಿಗಳು 12 ಲಕ್ಷ ಲೀಟರ್ ನೀರು ಹೀರುತ್ತಾರೆ. ಬೇರೆ ಸಮಯದಲ್ಲಿ 6-8 ಲಕ್ಷ ಲೀ/ ಪ್ರತಿ ದಿನ
* ಚೆನ್ನೈನಲ್ಲಿ ಪ್ಯಾಕೇಜ್ ನೀರು ಸಂಸ್ಥೆಗಳ ಸಂಖ್ಯೆ ಸುಮಾರು 309 ನಷ್ಟಿದೆ.
* ಶುಕ್ರ, ಡಯಟ್ ಆಕ್ವಾ, ಸಬೋಲ್ಸ್, ಟ್ರಿನಿಟಾ, ಗಂಗಾರ್, ಸ್ನೋ ಬರ್ಡ್, ಅಕ್ವಾ ಶಕ್ತಿ, ನೀಲಾ, ಶ್ರೀಬಾಲಾಜಿ ಮುಂತಾದ ಸಂಸ್ಥೆಗಳ ಸರಬರಾಜು ವ್ಯತ್ಯಯವಾದರೆ ಕಂಪನಿಗಳು ತತ್ತರಿಸುವುದು ಮಾಮೂಲಿಯಾಗಿದೆ

English summary
Chennai's information technology corridor faces shutdown. Businesses in the Old Mahabalipuram Road corridor, which generates billions of dollars in revenue from Fortune 500 clients in the US and Europe, almost shut down work a week ago
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X