• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಕಾತುರ, ನಿರೀಕ್ಷೆಯಲ್ಲಿ ರೂಪದರ್ಶಿಗಳು

By Mahesh
|

ಬೆಂಗಳೂರು, ಜು.3: ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ಆಡೀಷನ್ ಶುರುವಾಗಿದೆ. ಬುಧವಾರ ತಮ್ಮ ಕರೆ ಯಾವಾಗ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಕಾದಿದ್ದ ರೂಪದರ್ಶಿಗಳ ಚಿತ್ರ ಇಲ್ಲಿದೆ.

ಏರ್ ಏಷ್ಯಾ ಸಿಇಒ ಟೋನಿ ಫರ್ನಾಂಡೀಸ್ ಸಕತ್ ಖುಷಿಯಾಗಿದ್ದಾರೆ. ಟಾಟಾ ಸಮೂಹದ ದಿಗ್ಗಜ ರತನ್ ಟಾಟಾ ಅವರು ನನ್ನ 'ಹೊಸ ಪೈಲಟ್' ಎಂದು ಟ್ವೀಟ್ಟರ್ ನಲ್ಲಿ ಘೋಷಿಸಿದ್ದಾರೆ.

ಟೋನಿ ಫರ್ನಾಂಡೀಸ್ ಅವರನ್ನು ಹಿಂಬದಿ ಸೀಟಿನಲ್ಲಿ ಕೂರಿಸಿ ಪೈಲಟ್ ಕ್ಯಾಬೀನ್ ಹೊಕ್ಕಿದ ರತನ್ ಟಾಟಾ ತಮ್ಮ ಹಳೆ ದಿನಗಳನ್ನು ನೆನಪಿಸಿಕೊಂಡು ವಿಮಾನ ಹಾರಾಟಕ್ಕೆ ಮುಂದಾದ ಚಿತ್ರ ಇಲ್ಲಿದೆ.

ಚೆನ್ನೈನಲ್ಲಿ ಆಟೋರಿಕ್ಷಾ ಚಾಲಕರ ವಿನೂತನ ಪ್ರತಿಭಟನೆ, ಕೋಲ್ಕತ್ತಾದ ಚಿಟ್ ಫಂಡ್ ಅವ್ಯವಹಾರದ ಆರೋಪಿ, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಭಾರತದ ಅಥ್ಲೀಟ್ ಗಳ ತಯಾರಿ ಮುಂತಾದ ಚಿತ್ರಗಳು ಕೂಡಾ ಇವೆ.

ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯುತ್ತಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ 7-8 ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದರು. ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ನಡೆದ ಪಂದ್ಯಗಳ ಚಿತ್ರಗಳು ನಿಮಗಾಗಿ ಇಲ್ಲಿದೆ.

ರೂಪದರ್ಶಿಗಳು

ರೂಪದರ್ಶಿಗಳು

ಮುಂಬೈನಲ್ಲಿ ಲಾಕ್ಮೆ ಫ್ಯಾಷನ್ ವೀಕ್ ಆಡೀಷನ್ ಶುರುವಾಗಿದೆ. ಬುಧವಾರ ತಮ್ಮ ಕರೆ ಯಾವಾಗ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಕಾದಿದ್ದ ರೂಪದರ್ಶಿಗಳ ಚಿತ್ರ

ಟಾಟಾ ಹೊಸ ಪೈಲಟ್

ಟಾಟಾ ಹೊಸ ಪೈಲಟ್

ಟಾಟಾ ಸಮೂಹದ ದಿಗ್ಗಜ ರತನ್ ಟಾಟಾ ಅವರು ನನ್ನ 'ಹೊಸ ಪೈಲಟ್' ಎಂದು ಟ್ವೀಟ್ಟರ್ ನಲ್ಲಿ ಘೋಷಿಸಿದ್ದಾರೆ.

ಆಟೋರಿಕ್ಷಾ ಚಾಲಕರ ಪ್ರತಿಭಟನೆ

ಆಟೋರಿಕ್ಷಾ ಚಾಲಕರ ಪ್ರತಿಭಟನೆ

ಕೊಯಮತ್ತೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಆಟೋರಿಕ್ಷಾ ಚಾಲಕರು ರಿಕ್ಷಾಕ್ಕೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಿದರು.

ಭಾರತದ ಕ್ರೀಡಾಪಟುಗಳು

ಭಾರತದ ಕ್ರೀಡಾಪಟುಗಳು

ಪುಣೆ: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ಗೆ ತಯಾರಿ ನಡೆಸಿರುವ ಭಾರತದ ಕ್ರೀಡಾಪಟುಗಳು

ಕೋಲ್ಕತ್ತಾದ ವಂಚಕಿ

ಕೋಲ್ಕತ್ತಾದ ವಂಚಕಿ

ಶಾರದಾ ಚಿಟ್ ಫಂಡ್ ನಿರ್ದೇಶಕಿ ದೇವ್ ಜಾನಿ ಮುಖ್ಯೋಪಾಧ್ಯಾಯ್ ಅವರನ್ನು ಕೋರ್ಟಿಗೆ ಕರೆದುಕೊಂಡು ಹೋಗುವಾಗ ಸಿಕ್ಕ ಚಿತ್ರ. ಕೋಟಿಗಟ್ಟಲೆ ಹಣ ವಂಚಿಸಿದ ಆರೋಪವನ್ನು ದೇವ್ ಜಾನಿ ಅವರ ಶಾರದಾ ಚಿಟ್ ಫಂಡ್ ಹೊಂದಿದೆ. ಚಿತ್ರ: swapan mahapatra

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಯುಸ್ ನ ಸ್ಲೊ ನೆ ಸ್ಟೀಫನ್ಸ್ ಸೋಲಿಸಿದ ಫ್ರಾನ್ಸ್ ನ ಮಾರಿಯಾನ್ ಬರ್ಟೋಲಿ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜರ್ಮನಿಯ ದೈತ್ಯ ಸಂಹಾರಿ ಲಿಶಿಕಿ ಕ್ವಾಟರ್ ಫೈನಲ್ ತಲುಪಿದ್ದಾರೆ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಪೋಲೆಂಡ್ ನ ಅಗ್ನಿಸ್ಜೆಂಕಾ ರಾವಾನ್ಸಕಾಗೆ ವೈದ್ಯಕೀಯ ನೆರವು

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಚೀನಾದ ಲಿ ನಾ ಸೋಲಿಸಿದ ಪೋಲೆಂಡ್ ನ ಅಗ್ನಿಸ್ಜೆಂಕಾ ರಾವಾನ್ಸಕಾ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ.

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಚಿತ್ರ

ವಿಂಬಲ್ಡನ್ ಟೆನಿಸ್ ಟೂರ್ನಿ ಚಿತ್ರಗಳು : ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಸೋಲಿಸಿದ ಬೆಲ್ಜಿಯಂನ ಕಿರ್ಸ್ಟನ್ ಫ್ಲಿಪ್ಕೆನ್ಸ್

ಕೆರಿಬಿಯನ್ ಸುಂದರಿಯರು

ಕೆರಿಬಿಯನ್ ಸುಂದರಿಯರು

ಸೆಲ್ಕಾನ್ ಮೊಬೈಲ್ ಕಪ್ ತ್ರಿಕೋನ ಸರಣಿ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ ಕಂಡು ಬಂದ ಚಿಯರ್ ಲೀಡರ್ಸ್

ಲಾರಿ ತುಂಬ ದುಡ್ಡು

ಲಾರಿ ತುಂಬ ದುಡ್ಡು

ಮುಂಬೈ: ಸುಮಾರು 150 ಬ್ಯಾಗುಗಳಲ್ಲಿ ನಗದು, ಆಭರಣ ಸೇರಿ 200 ಕೋಟಿ ರು.ಗೂ ಅಧಿಕ ಮಾಲು ತುಂಬಿದ್ದ ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡು ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ನಿಲ್ಲಿಸಿದ್ದಾಗ ಸಿಕ್ಕ ಚಿತ್ರ.. ಪಿಟಿಐ: Shashank Parade

ನಿಶ್ಚಿಂತೆಯ ವಿಶ್ರಾಂತಿ

ನಿಶ್ಚಿಂತೆಯ ವಿಶ್ರಾಂತಿ

ಕೋಲ್ಕತ್ತಾ: ಕೈ ರಿಕ್ಷಾ ಗಾಡಿ ಓಡಿಸುವ ವ್ಯಕ್ತಿ ಬೋ ಬಜಾರ್ ಪ್ರದೇಶದಲ್ಲಿ ಗಾಡಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾನೆ, ಪೂರ್ವ -ಪಶ್ಚಿಮ ಮೆಟ್ರೋ ಮಾರ್ಗ ಬದಲಾವಣೆಗೆ ಆಗ್ರಹಿಸಿ ಒಂದು ದಿನ ಬಂದ್ ಆಚರಿಸಲಾಯಿತು. PTI Photo by Swapan Mahapatra

ಬೆಂಗಳೂರಲ್ಲಿ ದಿಗ್ವಿಜಯ್

ಬೆಂಗಳೂರಲ್ಲಿ ದಿಗ್ವಿಜಯ್

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ನಗೆ ಬೀರಿದ್ದು ಹೀಗೆ. PTI Photo by Shailendra Bhojak

ಪುಣೆಯಲಿ ಕಸರತ್ತು

ಪುಣೆಯಲಿ ಕಸರತ್ತು

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಟೂರ್ನಿ ಆರಂಭೋತ್ಸವ ಸಂದರ್ಭದಲ್ಲಿ ಮಕ್ಕಳಿಂದ ಮಲ್ಲಕಂಬ ಕಸರತ್ತು ಪ್ರದರ್ಶನ

ಭೂಮಿ ಕೊಡುವುದಿಲ್ಲ

ಭೂಮಿ ಕೊಡುವುದಿಲ್ಲ

ಪರಾದಿತ್: ಪೊಸ್ಕೋ ಉಕ್ಕು ಯೋಜನೆಗೆ ಭೂಮಿ ನೀಡುವುದಿಲ್ಲ ಎಂದು ಒಡಿಸ್ಸಾ ರಾಜ್ಯದ ಪರಾದಿಪ್ ಜಿಲ್ಲೆಯ ಪಟಾನಾ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದು ಹೀಗೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays News stories in Pics: Mumbai: Models wait for the auditions of Lakme Fashion week in Mumbai on Wednesday. PTI Photo by Shashank Parade and Many More interesting pictures
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more