ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವೀಡಿಷ್ ಬೆತ್ತಲೆ ಮಹಿಳೆಯರ ಭೀತಿಯಲ್ಲಿ ಈಜಿಪ್ಟ್

By Mahesh
|
Google Oneindia Kannada News

ಸ್ವೀಡನ್, ಜು.3: ಉಕ್ರೇನ್ ಮೂಲದ FEMEN ಸಮೂಹ ವಿಶ್ವದೆಲ್ಲೆಡೆ ಪ್ರಸಿದ್ಧಿ. ಮಹಿಳೆಯರ ಹಕ್ಕು ಪ್ರತಿಪಾದನೆಗಾಗಿ ವಿವಿಧ ದೇಶಗಳಲ್ಲಿ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದು, ಜಾಗೃತಿ ಮೂಡಿಸುವುದು ಈ ಸಮೂಹದ ಉದ್ದೇಶ. ಕಳೆದ ವಾರ ಸ್ವೀಡನ್ನಿನ ಮಸೀದಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದ ಮಹಿಳೆಯರು ಈಗ ಈಜಿಪ್ಟ್ ನ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.

Free women ಹಾಗೂ No Sharia ಎಂಬ ಫಲಕಗಳನ್ನು ಹಿಡಿದ ಮಹಿಳೆಯರು ಸ್ವೀಡನ್ನಿನ ಮಸೀದಿಯಲ್ಲಿ ತೆರೆದೆದೆ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸೆಂಟ್ರಲ್ ಸ್ಟಾಕ್ ಹೋಮ್ ಮಸೀದಿಯಲ್ಲಿ ಸೇರಿದ ಮಹಿಳಾ ಗುಂಪು ತಮ್ಮ ಉದ್ದದ ನಿಲುವಂಗಿಯನ್ನು ಏಕಾಏಕಿ ಕಳಚಿ ಹಾಕಿದರು. ತಮ್ಮ ಎದೆ, ಹೊಟ್ಟೆ ಮೇಲೆ ಮಹಿಳಾ ಪರ ಘೋಷಣೆಗಳನ್ನು ಬರೆದುಕೊಂಡಿದ್ದರು. My body is mine, not somebody's honor ಎಂಬ ವಾಕ್ಯ ಎಲ್ಲೆಡೆ ರಾರಾಜಿಸುತ್ತಿತ್ತು.

ಮುಸ್ಲಿಂ ಮಹಿಳೆಯರ ಹಕ್ಕು ಕಿತ್ತುಕೊಳ್ಳುವ ಈಜಿಪ್ಟ್ ಮೂಲಭೂತವಾದಿಗಳೇ ಎಚ್ಚರ, FEMEN ನಿಮ್ಮ ಕಡೆ ಬರಲಿದೆ ಎಂದು ಎಚ್ಚರಿಸಿದರು.ಸೆಂಟ್ರಲ್ ಸ್ಟಾಕ್ ಹೋಮ್ ಮಸೀದಿಯಲ್ಲಿ ತೆರೆದೆದೆ ಪ್ರತಿಭಟನೆ ನಡೆಸಿದ ಮಹಿಳೆಯರ ಚಿತ್ರಗಳು ಇಲ್ಲಿವೆ ನೋಡಿ...

ಬಂಧನದಿಂದ ಖುಷಿ

ಬಂಧನದಿಂದ ಖುಷಿ

ಮಹಿಳೆಯರ ಪ್ರತಿಭಟನೆಯಿಂದ ವಿಚಲಿತರಾದ ಮಸೀದಿ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಎಲ್ಲರನ್ನು ಅಲ್ಲಿಂದ ಖಾಲಿ ಮಾಡಿಸಿದ್ದಾರೆ. ಆದರೆ, ತಮ್ಮ ಬಂಧನದಿಂದ ಖುಷಿಯಾಗಿದೆ ಎಂದು ಫೆಮೆನ್ ಸಮೂಹದ ಸದಸ್ಯರು ಹೇಳಿಕೊಂಡಿದ್ದಾರೆ.

ಪುಣ್ಯಕ್ಕೆ ನಾವು ಇಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದೇವೆ ಅಷ್ಟೇ. ಬೇರೆ ದೇಶಗಳಲ್ಲಿ ಈ ರೀತಿ ಪ್ರತಿಭಟನೆ ಮಾಡುವ ಹಕ್ಕು ಇಲ್ಲ, ಪ್ರತಿಭಟನೆ ಮಾಡಿದ ಮಹಿಳೆ ಬದುಕುಳಿಯುವುದೂ ಇಲ್ಲ ಎಂದು ಫೆಮೆನ್ ಹೇಳಿಕೊಂಡಿದೆ.

ಮಹಿಳೆ ಪರ ಹೋರಾಟ

ಮಹಿಳೆ ಪರ ಹೋರಾಟ

ಮಹಿಳೆಯರ ವಸ್ತ್ರ, ನಡವಳಿಕೆ, ನಿತ್ಯ ಜೀವನದ ಕಟ್ಟುಪಾಡು ಅಲ್ಲದೆ ಎಷ್ಟು ಮಕ್ಕಳನ್ನು ಹೆರಬೇಕು, ಸಮಾಜದಲ್ಲಿ ಹೇಗಿರಬೇಕು, ಉದ್ಯೋಗಕ್ಕೆ ಹೋಗಬೇಕೇ ಬೇಡವೆ, ಶಿಕ್ಷಣ ಪಡೆಯಬೇಕೇ ಬೇಡವೇ ಎಂದು ನಿರ್ಧರಿಸಲು ನಮಗೆ ಹಕ್ಕಿದೆ.

ಇದರಲ್ಲಿ ಮೂಲಭೂತವಾದಿಗಳಿಗೇನು ಕೆಲ್ಸ ಎಂದು ಈಜಿಪ್ಟಿನ ಪ್ರತಿಭಟನಾ ನಿರತ ಮಹಿಳೆ ಆಲಿಯಾ ಮಗ್ದ ಎಲ್ಮಾಂಡಿ ಹೇಳಿದ್ದಾರೆ.
ನಾಚಿಕೆ ಏಕೆ?

ನಾಚಿಕೆ ಏಕೆ?

ನಾವೇನು ವೇಶ್ಯೆಯರಲ್ಲ, ನಾವು ನಾಚಿಕೆ ಬಿಟ್ಟು ಅಂಗ ಪ್ರದರ್ಶನ ಮಾಡಲು ಬಂದಿಲ್ಲ. ನಮ್ಮ ಹಕ್ಕು ನೀಡದೆ ದಬ್ಬಾಳಿಕೆ ಮಾಡುತ್ತಾ ನಮ್ಮನ್ನು ವೇಶ್ಯೆಯರು ಜರೆದವರೇ ನರಕ ಕೂಪ ಸೇರುತ್ತಾರೆ ಎಂದು ಪ್ರತಿಭಟನಾಕಾರರು ಹೂಂಕರಿಸಿದ್ದಾರೆ

ಫೆಮೆನ್ ಹೇಳಿಕೆ

ಫೆಮೆನ್ ಹೇಳಿಕೆ

ಫೆಮೆನ್ ತನ್ನ ವೆಬ್ ಸೈಟ್ ನಲ್ಲಿ ನೀಡಿರುವ ಹೇಳಿಕೆ ಪ್ರಕಾರ, ಸ್ವೀಡಿಷ್ ಮಸೀದಿಯಲ್ಲಿ ಪ್ರತಿಭಟನೆ ನಡೆಸಿದವರು ಈಜಿಪ್ಟ್ ಮೂಲದ ಮಹಿಳೆಯರು, ಮತ್ತೆ ಕೆಲವರು ಟ್ಯೂನಿಷಿಯಾ, ಸ್ವೀಡಿಷ್ ಮಹಿಳೆಯರು ಇದ್ದರು. ಇಸ್ಲಾಂ ಮೂಲಭೂತವಾದಿಗಳು, ಮಹಿಳೆಯರ ಮೇಲೆ ಶೋಷಣೆ ಮಾಡುವವರ ವಿರುದ್ಧ ದನಿ ಎತ್ತಿದ್ದಾರೆ.

ಈ ರೀತಿ ಪ್ರತಿಭಟನೆ ಯುರೋಪ್ ದಾಟಿ ಇನ್ನೂ ಹಲವು ಕಡೆ ಹಬ್ಬಬೇಕಿದೆ. ಮಹಿಳೆಯರ ಪರ ದನಿ ಎತ್ತುವವರ ಶಕ್ತಿಯಾಗಬೇಕಿದೆ.

ಫೆಮೆನ್ ಕರೆ

ಫೆಮೆನ್ ಕರೆ

ಇಸ್ಲಾಂ ಮುಖಂಡರು ಶತಮಾನಗಳಿಂದ ನಡೆಸಿಕೊಂಡು ಬಂದಿರುವ ಕಂದಾಚಾರ, ಮೂಢನಂಬಿಕೆ, ಶೋಷಣೆಯನ್ನು ಈಜಿಪ್ಟಿಯನ್ ಮಹಿಳೆಯರು ಖಂಡಿಸಬೇಕಿದೆ. ಮಹಿಳೆಯರು ದಾಸಿಯರಲ್ಲ ಎಂಬುದನ್ನು ಕ್ರಾಂತಿ ಮೂಲಕ ಸಾರಬೇಕಿದೆ.

ಫೆಮೆನ್ ಇತಿಹಾಸ

ಫೆಮೆನ್ ಇತಿಹಾಸ

2008ರಲ್ಲಿ ಆರಂಭವಾದ ಫೆಮೆನ್ ಸಮೂಹ, ಯುರೋಪ್ ದೇಶಗಳಲ್ಲಿ ಮಹಿಳಾ ಪರ ಹೋರಾಟಕ್ಕೆ ದೊಡ್ಡ ಹೆಸರು ಮಾಡಿದೆ. ಕಳೆದ ಮಾರ್ಚ್ ನಲ್ಲಿ ಟ್ಯುನಿಷಿಯಾದ ವಿದ್ಯಾರ್ಥಿನಿ ಅಮಿನಾ ಟೈಲರ್ ಫೇಸ್ ಬುಕ್ ನಲ್ಲಿ ತನ್ನ ಟಾಪ್ ಲೆಸ್ ಫೋಟೋ ಹಾಕಿದ್ದಳು.

ಇದರಿಂದ ಉಂಟಾದ ಗಲಾಟೆಯಲ್ಲಿ ಫೆಮೆನ್ ಅಮಿನಾ ಪರ ವಕಾಲತ್ತು ವಹಿಸಿ ಮಸೀದಿ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಒಲಿಂಪಿಕ್ಸ್, ಫುಟ್ಬಾಲ್ ವಿಶ್ವಕಪ್ ಸಂದರ್ಭಗಳಲ್ಲೂ ಫೆಮೆನ್ ಪ್ರತಿಭಟನೆ ನಡೆಸಿತ್ತು.

ಫೆಮೆನ್ ಪರ ಟ್ವೀಟ್

ಬೆಲ್ಜಿಯಂಗೂ ಹಬ್ಬಿದ್ದ ಫೆಮೆನ್ ಸಮೂಹ, ಚರ್ಚ್ ಮೇಲೆ ದಾಳಿ

ಹೋರಾಟಕ್ಕೆ ಜಯವಾಗಲಿ

ಭಾರತದಿಂದಲೂ ಫೆಮೆನ್ ಪರ ಅನೇಕ ಟ್ವೀಟ್ ಗಳು ಬಂದಿವೆ. ಫೆಮೆನ್ ಹೋರಾಟಕ್ಕೆ ಜಯವಾಗಲಿ ಎಂದಿದ್ದಾರೆ. ಅದರೆ, ಬೆತ್ತಲೆ, ತೆರೆದೆದೆ ಪ್ರತಿಭಟನೆ ಎಲ್ಲಾ ಕಡೆ ಸಾಧ್ಯವಿಲ್ಲ ಹಾಗೂ ಸಾಧುವಲ್ಲ ಈ ಬಗ್ಗೆ ಚರ್ಚೆ ಮಾಡುವುದು ಒಳ್ಳೆಯದು ಎಂದಿದ್ದಾರೆ.

ಮಹಿಳೆಯರ ಶೋಷಣೆ

ಟ್ಯುನಿಷಿಯಾದಲ್ಲಿ ಮಹಿಳಾ ಖೈದಿಗಳಿಗೆ ಉಂಟಾಗಿರುವ ದುರಾವಸ್ಥೆ, ಶೋಷಣೆ ವಿರುದ್ದ ಫೆಮೆನ್ ಸಿಡಿದೆದ್ದಿದೆ.

English summary
Radical, feminist activists in Stockholm, Sweden staged a topless protest inside a mosque on Saturday, AFP reported. Femen burst into the largely empty mosque and removed their clothes to reveal their bare chests emblazoned with phrases including "No sharia in Egypt and the world" and "My body is mine, not somebody's honor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X