• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಸಲೀಲೆಯಲ್ಲಿ ತಗಲಾಕ್ಕೊಂಡ ದೇಶದ ರಾಜಕಾರಣಿಗಳು

|

ರಾಜಕಾರಣಿಗಳಿಗೂ ಸೆಕ್ಸ್ ಹಗರಣಕ್ಕೂ ಅಭಿನಾವಭಾವ ನಂಟು, ಇವರನ್ನು ಬೆನ್ನತ್ತಿರುವ ಸೆಕ್ಸ್ ಹಗರಣಗಳು ಒಂದಾ, ಎರಡಾ.. ಬಹಳಷ್ಟು. ಇದಕ್ಕೆ ಯಾವ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷಗಳಾಗಲಿ ಹೊರತಾಗಿಲ್ಲ. ಈ ನಾಯಕರ ಲೈಂಗಿಕ ಹಗರಣಗಳು ಇವರನ್ನು ಹಣ್ಣುನೀರು ಮಾಡಿರುವ ಉದಾಹರಣೆಗಳಿವೆ.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಭೋಗದ ವಸ್ತುವಾಗಿದ್ದೇ ಹೆಚ್ಚು. ವಯಸ್ಸಿನ ಪರಿಮಿತಿಯಿಲ್ಲದೆ ಇವರ ಕಾಮದ ತೃಷೆಗೆ ಅದೆಷ್ಟು ಮಹಿಳೆಯರು ಬಲಿಯಾಗಿದ್ದಾರೋ? ಸಾರ್ವಜನಿಕ ಬದುಕಿನಲ್ಲಿರುವ ಇವರು ಇತರಿರೆಗೆ ಮಾದರಿಯಾಗುವ ಬದಲು ತಾವೇ ಅಪಹಾಸ್ಯಕ್ಕೆ ಈಡಾಗಿರುವ ಪ್ರಕರಣಗಳನ್ನು ಬಹಳಷ್ಟು ಕಂಡಿದ್ದೇವೆ.

ಉಪ್ಪು, ಹುಳಿ, ಖಾರ ತಿನ್ನುವ ಮೈ ತಪ್ಪು ಮಾಡದೇ ಇರುತ್ತದೆಯೇ, ಸರ್ವಸಂಗ ಪರಿತ್ಯಾಗಿಗಳಾದ ಕೆಲವು ಸ್ವಾಮೀಜೀಗಳೂ ಈ ಹಗರಣದಲ್ಲಿ ತಗಲಾಕಿಕೊಂಡಿಲ್ಲವೇ ಇನ್ನು ನಾವು ಯಾವ ಲೆಕ್ಕ ಸ್ವಾಮಿಯೆಂದು ಇಂತಹ ರಾಜಕಾರಿಣಿಗಳು ತಮ್ಮನ್ನು ತಾನು ಸಮರ್ಥಿಸಿ ಕೊಳ್ಳಲೂ ಬಹುದು.

ರಾಜ್ಯದ ಮತ್ತು ದೇಶದ ರಾಜಕಾರಣಿಗಳು ಭಾಗಿಯಾಗಿರುವ ಇಂತಹ ಕೆಲವು ಪ್ರಕರಣಗಳ ಬಗ್ಗೆ ತಿಳಿದುಕೊಳ್ಳೋಣ.

ಎಂ ಪಿ ರೇಣುಕಾಚಾರ್ಯ

ಎಂ ಪಿ ರೇಣುಕಾಚಾರ್ಯ

ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಮತ್ತು ನರ್ಸ್ ಜಯಲಕ್ಷ್ಮಿ ನಡುವಣ ಸಂಬಂಧ ಭಾರೀ ಸುದ್ದಿ ಮಾಡಿತ್ತು. ರೇಣುಕಾಚಾರ್ಯ ಅವರ ಕಿರುಕುಳ ಸಹಿಸದೆ ನರ್ಸ್ ಹಾಗೂ ಶಿಕ್ಷಣ ಸಂಸ್ಥೆಯ ನಿರ್ದೇಶಕಿಯಾಗಿದ್ದ ಜಯಲಕ್ಷ್ಮಿ ಅವರು ಆತ್ಮಹತ್ಯೆಗೆ ಪ್ರಯತ್ನಕ್ಕೆ ಯತ್ನಿಸಿದ ಘಟನೆ ಕೂಡಾ ನಡೆದಿತ್ತು. ತಮ್ಮ ಜೊತೆ ಶಾಸಕ ರೇಣುಕಾಚಾರ್ಯ ಅನೈತಿಕ ಸಂಬಂಧ ಹೊಂದಿದ್ದರು ಎಂದು ಮಾಧ್ಯಮಗಳಿಗೆ ಫೋಟೊ ಸಹಿತ ಜಯಲಕ್ಷ್ಮಿ ದುಃಖ ತೋಡಿಕೊಂಡಿದ್ದರು. ಅದಾದ ನಂತರ ರೇಣುಕಾಚಾರ್ಯ ಹಾಗೂ ಜಯಲಕ್ಷ್ಮಿ ನಡುವೆ ಸ್ವಾಮೀಜಿಯೊಬ್ಬರ ಮಧ್ಯೆಸ್ಥಿಕೆಯಿಂದಾಗಿ ರಾಜಿ ಸಂಧಾನ ಏರ್ಪಟ್ಟಿತ್ತು.

ಹರತಾಳು ಹಾಲಪ್ಪ

ಹರತಾಳು ಹಾಲಪ್ಪ

ಸೊರಬ ತಾಲೂಕಿನಿಂದ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಈಡಿಗ ಜನಾಂಗದ ಹರತಾಳು ಹಾಲಪ್ಪ ಅವರ ಮೇಲೆ ಅತ್ಯಾಚಾರದ ಕೇಸು ದಾಖಲಾಗಿತ್ತು. ಸ್ನೇಹಿತನ ಮಡದಿ ಚಂದ್ರಾವತಿಯನ್ನು ಮಾನಭಂಗ ಮಾಡಲು ಯತ್ನಿಸಿದ್ದರು ಎನ್ನುವುದು ಆರೋಪವಾಗಿತ್ತು. ಪ್ರಕರಣ ದಾಖಲಾದ ಮೇಲೆ ತಲೆಮೆರೆಸಿಕೊಂಡಿದ್ದ ಹಾಲಪ್ಪ ಒಂದು ವಾರದ ನಂತರ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದರು.

ಎನ್ ಡಿ ತಿವಾರಿ

ಎನ್ ಡಿ ತಿವಾರಿ

ಮೂವರು ಹದಿಹರೆಯದ ಯುವತಿಯರ ಜೊತೆ ರಾಜಭವನದಲ್ಲೇ ಕಾಮಕೇಳಿಯಲ್ಲಿ ತೊಡಗಿದ್ದರೆಂಬ ಆರೋಪ 86 ವರ್ಷ ವಯಸ್ಸಿನ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ನಾರಾಯಣ ದತ್ ತಿವಾರಿ ಮೇಲಿತ್ತು. ಗಣಿ ಲೈಸೆನ್ಸ್ ಮತ್ತು ಮತ್ತಿತರರಿಗೆ ಉದ್ಯೋಗ ಕೊಡಿಸುವ ಆಮಿಷ ವೊಡ್ಡಿ ರಾಸಲೀಲೆಯಲ್ಲಿ ತೊಡಗಿ ನಂತರ ತಿವಾರಿ ಮೋಸ ಮಾಡಿದ್ದರಿಂದ ಸೆಕ್ಸ್ ಟೇಪನ್ನು ಮಾಧ್ಯಮಕ್ಕೆ ರಾಧಿಕಾ ಎನ್ನುವ ಯುವತಿ ಹೇಳಿದ್ದಳು.

ರಘುಪತಿ ಭಟ್

ರಘುಪತಿ ಭಟ್

ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಯುವತಿಯೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಜಿಲ್ಲೆಯಾದ್ಯಂತ 15 ದಿನಗಳಿಂದ ಹರಿದಾಡಿ,

ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದರು. ಇದರಿಂದ ಅವಮಾನಿತರಾದ ರಘುಪತಿ ಭಟ್ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದರು. ಶಾಸಕರಾಗಿ ಆಯ್ಕೆಯಾದ ಹೊಸದರಲ್ಲೇ ಪತ್ನಿ ಪದ್ಮಪ್ರಿಯಾ ಕೊಲೆ ಕೇಸ್ ಹಗರಣ ಕೂಡಾ ಸುತ್ತಿಕೊಂಡಿತ್ತು.

ಗೋಪಾಲ ಖಾಂಡಾ

ಗೋಪಾಲ ಖಾಂಡಾ

ಹರ್ಯಾಣದ ಮಾಜಿ ಸಚಿವ ಗೋಪಾಲ ಖಾಂಡಾ ಮತ್ತು ಮಾಜಿ ಗನನಸಖಿ ಯಾಗಿದ್ದ ಗೀತಿಕಾ ಶರ್ಮಾ ನಡುವಣ ಸರಸ ಸಲ್ಲಾಪ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಗೀತಿಕಾ ಶರ್ಮಾ ತದನಂತರ ಆತ್ಮಹತ್ಯೆಗೆ ಶರಣಾಗಿದ್ದರು. ನನ್ನ ಸಾವಿಗೆ ಖಾಂಡಾ ಕಾರಣ ಎಂದು ದೆಟ್ ನೋಟ್ ಬರೆದಿಟ್ಟು ಈಕೆ ಸಾವಿಗೆ ಶರಣಾಗಿದ್ದರು.

ಅಭಿಶೇಕ್ ಮನು ಸಾಂಘ್ವಿ

ಅಭಿಶೇಕ್ ಮನು ಸಾಂಘ್ವಿ

ಕಾಂಗ್ರೆಸ್ ನಾಯಕ ಮತ್ತು ಪಕ್ಷದ ವಕ್ತಾರ ಅಭಿಶೇಕ್ ಮನು ಸಾಂಘ್ವಿ ವಕೀಲೆಯೊಬ್ಬಳ ಜೊತೆ ಸುಪ್ರೀಂಕೋರ್ಟ್ ಚೇಂಬರಿನಲ್ಲಿ ನಡೆಸಿದೆ ಎನ್ನಲಾದ ಸೆಕ್ಸ್ ಟೇಪ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಸಾಂಘ್ವಿಗೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು.

ಸಂಜಯ್ ಜೋಷಿ

ಸಂಜಯ್ ಜೋಷಿ

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಷಿ ಮಹಿಳೆಯೊಬ್ಬಳ ಜೊತೆ ನಡೆಸುತ್ತಿದ್ದ ಚಕ್ಕಂದದ ವಿಡಿಯೋ ಟೇಪ್ ದೊಡ್ಡ ಸುದ್ದಿಯಾಗಿತ್ತು. ತದನಂತರ ಜೋಷಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಮೋದ್ ಮಹಾಜನ್

ಪ್ರಮೋದ್ ಮಹಾಜನ್

ತನ್ನ ಸಹೋದರನಿಂದಲೇ ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಗುಂಡೇಟಿಗೆ ಬಲಿಯಾಗಿದ್ದರು. ಪ್ರಮೋದ್ ಸಾವಿನ ನಂತರ ತನ್ನ ಹೆಂಡತಿಯ ಜೊತೆ ಪ್ರಮೋದ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಅದಕ್ಕಾಗಿ ಅವನನ್ನು ಸಾಯಿಸಿದೆ ಎಂದು ಸಹೋದರ ಆರೋಪಿಸಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Politics and sex always become an explosive cocktail, and there have been umpteen number of cases of politicians being involved in sex scandals across the country. Here is some the politicians involved in the sex scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more