ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮ್ ಕಾರ್ಡ್ ಬೇಕಾದ್ರೆ ಬೆರಳಚ್ಚು ಕೊಡ್ಬೇಕಾ?

By Mahesh
|
Google Oneindia Kannada News

ನವದೆಹಲಿ, ಜು.3: ಕಾಲೇಜು ಐಡಿ ಕಾರ್ಡ್, ಅಡ್ರೆಸ್ ಫ್ರೂಫ್ ಕೊಟ್ಟು ಮೊಬೈಲ್ ಸಿಮ್ ಕಾರ್ಡ್ ಕೊಳ್ಳುತ್ತಿದ್ದ ಕಾಲ ಈಗಿಲ್ಲ. ಮೊಬೈಲ್ ಸಿಮ್ ಕಾರ್ಡ್ ಕೊಳ್ಳಬೇಕಾದರೆ ಸಾಕಷ್ಟು ಸಾಹಸ ಪಡಬೇಕಾಗುತ್ತದೆ.

ಇನ್ಮುಂದೆ, ಮೊಬೈಲ್ ಗೆ ಸಿಮ್ ಕಾರ್ಡ್ ಕೊಳ್ಳಬೇಕಾದರೆ ಬೆರಳಚ್ಚು (ಫಿಂಗರ್ ಪ್ರಿಂಟ್ಸ್) ನೀಡಬೇಕಾಗಬಹುದು. ಕೇಂದ್ರ ಗೃಹ ಇಲಾಖೆ ಈ ಸಂಬಂಧ ದೂರ ಸಂಪರ್ಕ ಇಲಾಖೆಗೆ ಪತ್ರ ಬರೆದಿದ್ದು, ಸಿಮ್ ಕಾರ್ಡ್ ಕೊಳ್ಳುವವರಿಗೆ ಕಡ್ಡಾಯವಾಗಿ ಬೆರಳಚ್ಚು ಪಡೆಯಲು ನಿಯಮ ರೂಪಿಸುವಂತೆ ಸೂಚನೆ ನೀಡಿದೆ.

ಆಧಾರ್ ಕಾರ್ಡ್ ಸೇರಿದಂತೆ ಯಾವುದಾದರೊಂದು ಗುರುತಿನ ಚೀಟಿ ನೀಡಿ ಸಿಮ್ ಕಾರ್ಡ್ ಕೊಳ್ಳುವ ನಿಯಮ ರೂಪಿಸಿದ ನಂತರ ಫಿಂಗರ್ ಪ್ರಿಂಟ್ಸ್ ನಿಯಮಕ್ಕೆ ಗೃಹ ಸಚಿವಾಲಯ ಮುಂದಾಗಿದೆ. ಆಧಾರ್ ಕಾರ್ಡ್ ಚೀಟಿ ಉಪಯೋಗಕ್ಕಿಂತ ಹೆಚ್ಚಾಗಿ ದುರುಪಯೋಗವಾಗುತ್ತಿದ್ದೇ ಹೆಚ್ಚು ಎಂಬುದು ಸೇವಾದಾರ ಸಂಸ್ಥೆಗಳ ದೂರು.

Fingerprints may soon be needed to get SIM cards

ನಕಲಿ ಗುರುತಿನ ಚೀಟಿ ನೀಡಿ ಸಿಮ್ ಕಾರ್ಡ್ ಕೊಳ್ಳುತ್ತಿದ್ದವರ ಸಂಖ್ಯೆಯೇ ಹೆಚ್ಚಾಗುತ್ತಿತ್ತು. ಹೀಗಾಗಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಗೃಹ ಇಲಾಖೆ ಸಿಮ್ ಕಾರ್ಡ್ ಕೊಳ್ಳುವ ಗ್ರಾಹಕರು ಕಡ್ಡಾಯವಾಗಿ ಬೆರಳಚ್ಚು ನೀಡಲು ನಿಯಮವನ್ನು ರೂಪಿಸಿದೆ.

ಉಗ್ರರ ಭೀತಿ: ಗೃಹ ಇಲಾಖೆಯು ಈಗಾಗಲೇ ದೂರ ಸಂಪರ್ಕ ಮತ್ತು ಖಾಸಗಿ ಷೇರುದಾರರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಇದು ಕಾನೂನು ರೂಪದಲ್ಲಿ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ಘಟನೆಗಳಲ್ಲಿ ಅನೇಕ ಉಗ್ರರು ಬೇರೊಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್ ಕಳುಹಿಸಿ ದೇಶ-ವಿದೇಶಗಳಿಗೆ ಕರೆ ಮಾಡಿದ್ದಾರೆ.

ಮುಂಬೈ ಮೇಲೆ ನಡೆದ ದಾಳಿ, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ ಉಗ್ರರು ಬೇರೆ ಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿಸಿ ಬಳಸಿಕೊಂಡಿದ್ದರು.

ಇದು ತನಿಖಾಧಿಕಾರಿಗಳಿಗೆ ನಿಜವಾದ ಅಪರಾಧಿಗಳನ್ನು ಹಿಡಿಯಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇನ್ನು ಮುಂದೆ ಸಿಮ್ ಕಾರ್ಡ್ ಕೊಳ್ಳುವವರು ಕಡ್ಡಾಯವಾಗಿ ಬೆರಳಚ್ಚು ನೀಡಬೇಕಾಗುತ್ತದೆ.

ಪದೇ ಪದೇ ಸಿಮ್ ಬದಲಾಯಿಸುವುದು, ಅನಗತ್ಯ ಸಿಮ್ ಖರೀದಿ, ನಕಲಿ ದಾಖಲೆ ಒದಗಿಸಿದ ಗ್ರಾಹಕರ ಪಟ್ಟಿಯನ್ನು ಸಂಗಹಿಸಿ ನ್ಯಾಷನಲ್ ಇಂಟಲೆಜನ್ಸ್ ಗ್ರಿಡ್(NATGRID) ಗೆ ಸೇರಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಬಯೋಮೆಟ್ರಿಕ್ ದಾಖಲೆಗಳನ್ನು ಸೇರಿಸಲು ಗೃಹ ಇಲಾಖೆ ಯೋಜಿಸಿದೆ.

English summary
The home ministry has asked the department of telecommunication (DoT) to explore an option of making it compulsory for cellphone service providers to take fingerprints or any other biometric feature of the subscriber, akin to Aadhaar, before activating the mobile numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X