ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆ ಬಾಲಕ್ಕೆ ಕೋಟ್ಯಂತರ: BTC ಭಂಡತನ

By Srinath
|
Google Oneindia Kannada News

bangalore-turf-club-lease-issue
ಬೆಂಗಳೂರು, ಜು. 2: ಅತ್ತ ಹಾಲಿ ಸರಕಾರ ಜನಸಾಮಾನ್ಯರ ಕೈಗೆಟುಕದಂತೆ ಮುದ್ರಾಂಕ ಶುಲ್ಕ ಹೆಚ್ಚಿಸಿ ಭೂ ಖರೀದಿಯನ್ನು ದುರ್ಲಭಗೊಳಿಸಿರುವಾಗ 1923ರಲ್ಲಿದ್ದ ಬೇಜವಾಬ್ದಾರಿ ಸರಕಾರವು ರಾಜಧಾನಿಯ ಆಯಕಟ್ಟಿನ ಸ್ಥಳದಲ್ಲಿ ಕುದುರೆ ಕಟ್ಟುವುದಕ್ಕಾಗಿ/ ರೇಸ್‌ ಗಾಗಿ 74 ಎಕರೆ ಸುವಿಶಾಲ ಜಮೀನನ್ನು ಬಹುತೇಕ ಉಚಿತವಾಗಿ ಭೋಗ್ಯಕ್ಕೆ ನೀಡಿತ್ತು.

ಸರಿ ಅದಕ್ಕೇನು ಈಗ ವರಾತ ಎಂದು ಕೇಳಬೇಡಿ. ಏಕೆಂದರೆ ಆಗ ಒಂದು ಚದರ ಅಡಿಗೆ 0.92 ಪೈಸೆಯಂತೆ ಲೋಕೋಪಯೋಗಿ ಇಲಾಖೆ ಲೀಸ್ ಗೆ ನೀಡಿತ್ತು. ಆದರೆ ಹೀಗೆ ಅತ್ಯಲ್ಪ ಬೆಲೆಗೆ ಲೀಸ್ ಪಡೆದ ಟರ್ಫ್ ಕ್ಲಬ್ ಸರಕಾರಕ್ಕೆ 1968ರ ನವೆಂಬರ್ 3 ವರೆಗೂ ಸುಮಾರು 45 ವರ್ಷ ಕಾಲ ಒಂದು ನಯಾಪೈಸೆಯನ್ನು ಕಟ್ಟದೆ ಶೋ ತೋರಿಸಿದೆ ಕಣ್ರೀ.

ಅಯ್ಯೋ ಇನ್ನೂ ಇದೆ ಕೇಳೀಪ್ಪಾ... 1989 ರಿಂದ 2009ರವರೆಗೂ 21 ವರ್ಷಗಳ ಅವಧಿಯಲ್ಲಿ 74 ಎಕರೆ ಭೂಮಿಗೆ ವಾರ್ಷಿಕ 50,000 ರೂ ದರದಲ್ಲಿ ಲೀಸ್ ಕಟ್ಟಿರುವುದರಿಂದ ಸರ್ಕಾರಕ್ಕೆ 524 ಕೋಟಿ ರೂ ನಷ್ಟವಾಗಿದೆ ಎಂದು ಖುದ್ದು CAGಯೇ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದೆ.

ಆದರೆ ಎಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂಗೆ ಬೆಂಗಳೂರು ಟರ್ಫ್ ಕ್ಲಬ್ ಸಾರ್ವಜನಿಕ ಆಸ್ತಿ ಎಂದು ಕರ್ನಾಟಕ ಮಾಹಿತಿ ಆಯೋಗ ಇದೀಗ ಮಹತ್ವದ ಆದೇಶ ನೀಡಿದೆ. ಇಂತಿಪ್ಪ BTFC ಮೇಲೆ ರಾಜ್ಯ ಸರ್ಕಾರ, ಸರ್ಕಾರದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಯಂತ್ರಣ ಹಾಗೂ ಉಸ್ತುವಾರಿ ಹೊಂದಿದೆ.

ಇನ್ನೂ ಇದೆ ಕೇಳಿಪ್ಪಾ...
ಎಸ್. ಉಮಾಪತಿ ಎಂಬುವವರ 2012ರ ಫೆ. 14ರಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಆನ್‌ಲೈನ್ ಮೂಲಕ ಕೆಲವು ಮಾಹಿತಿ ಕೋರಿ ಬೆಂಗಳೂರು ಟರ್ಫ್ ಕ್ಲಬ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಉತ್ತರಿಸಿದ ಟರ್ಫ್ ಕ್ಲಬ್ ಕಾರ್ಯದರ್ಶಿ, ಟರ್ಫ್ ಕ್ಲಬ್ ಖಾಸಗಿ ಸ್ವತ್ತು ಸ್ವಾಮಿ, ಅದು ಸರಕಾರದ್ದಲ್ಲ. ಹಾಗಾಗಿ ಮಾಹಿತಿ ಹಕ್ಕು ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದರು! ಇವರ ಭಂಡತನಕ್ಕೆ ಇಷ್ಟು ... !

English summary
3 news items on land acquisition- stamp fee- bangalore turf club lease issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X