ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಮಾಲೀಕತ್ವ ಸಂಬಂಧ 3 ಸುದ್ದಿಯಿದೆ, ತಪ್ಪದೆ ಓದಿ

By Srinath
|
Google Oneindia Kannada News

3-news-land-acquisition-stamp-fee-bangalore-turf-club
ಬೆಂಗಳೂರು, ಜುಲೈ 2: ಭೂ ಮೌಲ್ಯ ಚಿನ್ನದ ಬೆಲೆ ದಾಟಿ ಯಾವುದೋ ಕಾಲವಾಯ್ತು. ಈಗ ಅದರ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಜನಸಾಮಾನ್ಯರ ಕೈಗೆ ಎಟುಕದಂತೆ ಮಾಡುವ ರೀತಿಯಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಜುಲೈನಿಂದಲೇ ಭರ್ಜರಿ ಏರಿಕೆಯಾಗಲಿದೆ.

ಇದರಿಂದ ಭೂಮಿ ಬೆಲೆ ದುಬಾರಿಯಾಗುವುದು ನಿಶ್ಚಿತ. ಅಂದಹಾಗೆ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಹಾಲಿ ಸರಕಾರದ ಹೊಸ ಕಸರತ್ತು ಇದಾಗಿದೆ. 2013-14ರಲ್ಲಿ ಭೂ ಮುದ್ರಾಂಕ ಶುಲ್ಕದಿಂದಲೇ 10 ಸಾವಿರ ಕೋಟಿ ರೂ ಸಂಗ್ರಹಣೆ ಗುರಿಯಿದೆ ಸಿಎಂ ಸಿದ್ದರಾಮಯ್ಯನವರಿಗೆ.

ಜನಸಾಮಾನ್ಯರ ಮೇಲೆ ಹೀಗೆ ಕಣ್ಣುಹಾಕುವ ಸರಕಾರ, ಕುದುರೆ ಬಾಲಕ್ಕೆ ನೂರಾರು ಕೋಟಿ ರೂ ಕಟ್ಟಿ ಬೇಜವಾಬ್ದಾರಿತನ ಮೆರೆಯುತ್ತದೆ. ಹೇಳಿ ಸ್ವಾಮಿ ಜೂಜಿಗೆ ಪ್ರೋತ್ಸಾಹಿಸಲು ಕೋಟ್ಯಂತರ ರೂ ನಷ್ಟ ಮಾಡಿಕೊಳ್ಳುವ ಸರಕಾರ, ಜನಸಾಮಾನ್ಯ ತನ್ನ ಜೀವಿತಾವಧಿ ಕಾಲದ ಸಾಧನೆಯೆಂಬಂತೆ ಒಂದು ಪುಟ್ಟ ನಿವೇಶನ ತೆಗೆದುಕೊಂಡರೆ ಅದಕ್ಕೆ ಲಕ್ಷಾಂತರ ರೂ ಶುಲ್ಕ ಭರಿಸಲೇಬೇಕು ಎಂದು ಕಟ್ಟಾಜ್ಞೆ ಹೊರಡಿಸುತ್ತದೆ.

ಇನ್ನು, ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಬೇಕಾದ ರಾಜ್ಯಪಾಲರೇ (ಹಂಸರಾಜ್ ಭಾರದ್ವಾಜ್) 'ಕೆರೆಗಳೆಲ್ಲ ಒತ್ತುವರಿಯಾಗುತ್ತಿವೆ. ವಸತಿ ಯೋಗ್ಯ ಭೂಮಿಗಳಲ್ಲಿ ವಾಣಿಜ್ಯ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಭೂಕಬಳಿಕೆ ನಿರಾತಂಕವಾಗಿ ನಡೆಯುತ್ತಿದೆ' ಎಂದು ಅಸಮಾಧಾನ/ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮೂ...

English summary
3 news items on land acquisition- stamp fee- Bangalore Turf Club lease issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X