ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿಗೆ ನೀಲಿಚಿತ್ರ ನೋಡುವ ಚಟವಂತೆ!

By Mahesh
|
Google Oneindia Kannada News

ಆದಿಲಾಬಾದ್, ಜು.2: ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ನೀಲಿಚಿತ್ರ ನೋಡುವ ಚಟವಿದೆಯಂತೆ. ಚಂಚಲಗುಡ ಜೈಲಿನಲ್ಲಿ ನಿರಂತರವಾಗಿ ಅವರಿಗೆ ಸಿಡಿ ಸರಬರಾಜು ಮಾಡಲಾಗುತ್ತಿದೆಯಂತೆ ಎಂಬ ಗಾಳಿ ಸುದ್ದಿ ಆಂಧ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಆದರೆ, ಇದು ನನ್ನ ಮಗನ ಮಾನ ಕಳೆಯಲು ಪ್ರತಿಪಕ್ಷಗಳು ಮಾಡಿರುವ ಹುನ್ನಾರ, ಇದರಲ್ಲಿ ಒಂದು ವರ್ಗದ ಮಾಧ್ಯಮ ಸಂಸ್ಥೆಗಳು ಕೂಡಾ ಕೈಜೋಡಿಸಿವೆ. ನಿರಂತರವಾಗಿ ಜಗನ್ ರೆಡ್ಡಿ ಚಾರಿತ್ರ್ಯ ವಧೆ ಮಾಡುತ್ತಲೇ ಬಂದಿವೆ. ಜಗನ್ ಯಾರು ಏನು ಎಂಬುದು ಅವರ ಅಭಿಮಾನಿಗಳಿಗೆ ಗೊತ್ತಿದೆ ಎಂದು ವೈಎಸ್ ವಿಜಯಮ್ಮ ಸ್ಪಷ್ಟನೆ ನೀಡಿದ್ದಾರೆ.

"ನನ್ನ ಮಗ ಚಂಚಲಗುಡ ಜೈಲಿನಲ್ಲಿ ನೀಲಿ ಚಿತ್ರಗಳನ್ನು ನೋಡುತ್ತಿದ್ದಾನೆ. ಮಾದಕ ದ್ರವ್ಯ ಸೇವಿಸುತ್ತಿದ್ದಾನೆ. ಐಷಾರಾಮಿ ಬದುಕು ಸಾಗಿಸುತ್ತಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಎಲ್ಲವನ್ನು ನಿಯಂತ್ರಿಸುತ್ತಿದ್ದಾನೆ ಎಂದು ರಾಜಕೀಯ ಪಕ್ಷಗಳು ಸುದ್ದಿ ಹಬ್ಬಿಸುತ್ತಿರುವುದು ವಿಷಾದಕರ" ಎಂದಿದ್ದಾರೆ.

ಇದೇ ವರ್ಗದ ಕುಹಕಿಗಳು ಈ ಹಿಂದೆ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ, ಪುತ್ರಿ ಶರ್ಮಿಳಾ ಹಾಗೂ ಜಗನ್ ಪತ್ನಿ ಭಾರತಿ ವಿರುದ್ಧ ಕೂಡಾ ಗಾಳಿಸುದ್ದಿಗಳನ್ನು ಹಬ್ಬಿಸಿದ್ದರು. ಇದರಿಂದ ಯಾವುದೇ ಪರಿಣಾಮವಾಗಲಿಲ್ಲ. ಜನರಿಗೆ ಸತ್ಯ ಗೊತ್ತಿದೆ ಎಂದು ವೈಎಸ್ ವಿಜಯಮ್ಮ ಹೇಳಿದ್ದಾರೆ. ಜಗನ್ ಪರಿಸ್ಥಿತಿ ಬಗ್ಗೆ ಕಂಬನಿ ಮಿಡಿದಿರುವ ವಿಜಯಮ್ಮ ಮಾತುಗಳು ಇನ್ನಷ್ಟು ಚಿತ್ರಸರಣಿಯಲ್ಲಿ...

ಕುಹಕಿಗಳು ಯಾರನ್ನು ಬಿಟ್ಟಿಲ್ಲ

ಕುಹಕಿಗಳು ಯಾರನ್ನು ಬಿಟ್ಟಿಲ್ಲ

ಮೊದಲು ಜನಸೇವೆ ಬಗ್ಗೆ ಕೆಟ್ಟ ಮಾತು ಆಡಿದರು. ನಂತರ ವೈಯಕ್ತಿಕ ಬದುಕಿನ ಬಗ್ಗೆ ದಾಳಿ ನಡೆಸಿದರು. ಜಗನ್ ಇಂದು ಜೈಲು ಸೇರಿರುವುದು ರಾಜಕೀಯ ದ್ವೇಷದಿಂದ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ.

ನಾನು ನನ್ನ ಮಕ್ಕಳನ್ನು ಒಳ್ಳೆ ಸಂಸ್ಕಾರವಂತರನ್ನಾಗಿ ಮಾಡಿದ್ದೇನೆ. ಜನ ಸೇವೆಗೆ ಜೀವನ ಮುಡಿಪಾಗಿಟ್ಟಿರುವ ವ್ಯಕ್ತಿ, ವೈಯಕ್ತಿಕ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗುವುದಿಲ್ಲ. ಅದರಲ್ಲೂ ಜಗನ್ ಎಂದಿಗೂ ನೀಲಿಚಿತ್ರ, ಡ್ರಗ್ಸ್ ಚಟ ಅಂಟಿಸಿಕೊಂಡಿರಲಿಲ್ಲ

ಐಷಾರಾಮಿ ಸವಲತ್ತು ನೀಡಲಾಗಿಲ್ಲ

ಐಷಾರಾಮಿ ಸವಲತ್ತು ನೀಡಲಾಗಿಲ್ಲ

ಬೇರೆ ಎಲ್ಲಾ ಸೆರೆಮನೆವಾಸಿಗಳಂತೆ ಜಗನ್ ಕೂಡಾ ಜೈಲಿನಲ್ಲಿದ್ದಾನೆ. ಸಾಮೂಹಿಕ ಸ್ನಾನ, ಶೌಚಾಲಯ ಬಳಸುತ್ತಿದ್ದಾನೆ. ಇಬ್ಬರು ಖೈದಿಗಳ ಜೊತೆ ಪ್ರತ್ಯೇಕ ಸೆಲ್ ನಲ್ಲಿದ್ದಾನೆ.

ಮಲಗಲು ಮಂಚ, ಟೇಬಲ್ ಹಾಗೂ ಫ್ಯಾನ್ ಬಿಟ್ಟರೆ ಬೇರೆ ಐಷಾರಾಮಿ ಸವಲತ್ತು ನೀಡಲಾಗಿಲ್ಲ.

ಮನೆಯೂಟ ತಿನ್ನುವ ಭಾಗ್ಯವಿಲ್ಲ

ಮನೆಯೂಟ ತಿನ್ನುವ ಭಾಗ್ಯವಿಲ್ಲ

ವಾರಕ್ಕೆ ಒಮ್ಮೆ ಟಿವಿ ನೋಡುವುದನ್ನು ಬಿಟ್ಟರೆ, ಮೊಬೈಲ್ ಬಳಕೆ ನಿಷೇಧವಿದೆ. ಇನ್ನು ನೀಲಿ ಚಿತ್ರ ಎಲ್ಲಿಂದ ಬರಬೇಕು. ನನ್ನ ಮಗನಿಗೆ ಮನೆಯೂಟ ತಿನ್ನುವ ಭಾಗ್ಯವೂ ಇಲ್ಲ. ಜಗನ್ ಭೇಟಿ ಮಾಡುವುದೇ ಅಪರೂಪವಾಗಿದೆ. ಪರಿಸ್ಥಿತಿ ಈ ರೀತಿ ಇದ್ದರೂ ಜಗನ್ ಜೊತೆ ಭೇಟಿಗೆ ವಿಶೇಷ ಅರ್ಥ ಕಲ್ಪಿಸಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.

ಜೈಲಿನಲ್ಲಿ ಖೈದಿಗಳ ಪ್ರತಿ ನಡೆಯನ್ನು ಸಿಸಿಟಿವಿ ಕೆಮೆರಾಗಳಲ್ಲಿ ಸೆರೆ ಹಿಡಿಯಲಾಗುತ್ತದೆ. ನಾವು ನಡೆಸುವ ಸಂಭಾಷಣೆ ಅವಧಿ ಕೂಡಾ ಹೆಚ್ಚಾಗಿರುವುದಿಲ್ಲ. ಮಗನ ಜೊತೆ ರಾಜಕೀಯ ಚರ್ಚೆ ಮಾಡುವುದಕ್ಕಿಂತ ಅವನ ಬಿಡುಗಡೆಗೆ ಪ್ರಾರ್ಥಿಸುವುದೆ ನನಗೆ ದೊಡ್ಡ ವಿಷಯವಾಗಿದೆ ಎಂದು ವಿಜಯಮ್ಮ ಹೇಳಿಕೊಂಡಿದ್ದಾರೆ.

ನ್ಯಾಯಾಂಗ ಬಂಧನ ವಿಸ್ತರಣೆ

ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮ ಆಸ್ತಿ ಹೊಂದಿರುವ ಆರೋಪ ಹೊತ್ತಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ನ್ಯಾಯಾಂಗ ಬಂಧನವನ್ನು ಜು.15ರ ತನಕ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ(ಜು.1) ವಿಸ್ತರಿಸಿದೆ.

ಜೈಲಿನಲ್ಲಿ ಜಗನ್ ರೆಡ್ಡಿ

ಜೈಲಿನಲ್ಲಿ ಜಗನ್ ರೆಡ್ಡಿ

ಕಳೆದ ವರ್ಷ ಮೇ 27ರಂದು ಸಿಬಿಐ ತಂಡದಿಂದ ಭ್ರಷ್ಟಾಚಾರದ ಆರೋಪದ ಮೇಲೆ ಜಗನ್ ಬಂಧನವಾದ ಮೇಲೆ ಹಲವು ಬಾರಿ ಜಾಮೀನಿಗೆ ಯತ್ನಿಸಿ ಸೋತಿದ್ದಾರೆ.

ಹಿರಿಯ ವಕೀಲ ರಾಮ್ ಜೇಠ್ಮಾಲಾನಿ ಕೂಡಾ ಜಾಮೀನು ಕೊಡಿಸುವಲ್ಲಿ ವಿಫಲರಾಗಿದ್ದು, ಜಗನ್ ಜೊತೆಗೆ ವಿಜಯ್ ಸಾಯಿ ರೆಡ್ಡಿ, ಮಾಜಿ ಸಚಿವ ಮೊಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಅವರು ಕೂಡಾ ಜೈಲುವಾಸಿಗಳಾಗಿದ್ದಾರೆ.

English summary
YSR Congress honorary president Y.S. Vijayalakshmi on Monday criticised political rivals and a section of the media for indulging in character assassination of her son Y.S. Jagan Mohan Reddy and denies Jagan watching blue films in Chanchalguda jail
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X