ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಪಿಎಸ್ : ಅಮೆರಿಕ ಸಮಕ್ಕೆ ನಿಂತ ಭಾರತ

By Mahesh
|
Google Oneindia Kannada News

ಬೆಂಗಳೂರು, ಜು.2: ಪಿಎಸ್ ಎಲ್ ವಿ-ಸಿ20 ಸೋಮವಾರ ರಾತ್ರಿ ಐಆರ್ ಎನ್ ಎಸ್ ಸ್-1ಎ ಯೊಂದಿಗೆ ಶ್ರೀಹರಿಕೋಟಾದಿಂದ ಅಂತರಿಕ್ಷ ಸೇರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸ್ವಂತ ಉಪಗ್ರಹ ನಾವಿಕ ವ್ಯವಸ್ಥೆ ನಿರ್ಮಾಣದತ್ತ ಭಾರತ ಮೊದಲ ಹೆಜ್ಜೆ ಇಟ್ಟಿದೆ. ಅಮೆರಿಕ ಸೇರಿದಂತೆ ಪ್ರಮುಖ ದೇಶಗಳು ಹೊಂದಿರುವ ಜಿಪಿಎಸ್ ತಂತ್ರಜ್ಞಾನಕ್ಕೆ ಸಮಾನಾಂತರ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ.

ಭಾರತೀಯ ಪ್ರಾದೇಶಿಕ ನಾವಿಕ ಉಪಗ್ರಹ ವ್ಯವಸ್ಥೆ (ಐಆರ್ ಎನ್ ಎಸ್ ಎಸ್) ಎಂದು ಹೆಸರಿಸಲಾಗಿರುವ ಈ ಉಪಗ್ರಹ ವಿಶ್ವದ ಕೆಲವೇ ಕೆಲವು ನಾವಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತದೊಳಗೆ ಹಾಗೂ ಸುತ್ತಲೂ ನಾವಿಕ ವ್ಯವಸ್ಥೆ ಮಾಡಲು ಅಮೆರಿಕ ಮಾಲಕತ್ವದ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಗೆ ಇದು ಪರ್ಯಾಯವಾಗಲಿದೆ.

India launches navigation satellite

ಯುದ್ಧ ಹಾಗೂ ಸಂಘರ್ಷಗಳ ಸಮಯದಲ್ಲಿ ಏಕ ಮಾಲೀಕತ್ವ (ಒಂದೇ ದೇಶದ ಹಿಡಿತದಲ್ಲಿ) ವಿರುವ ಜಿಪಿಎಸ್ ನಂಥ ಜಾಗತಿಕ ವ್ಯವಸ್ಥೆಯನ್ನು ನಂಬಿಕೊಂಡಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ದೇಶಗಳು ತಮ್ಮದೇ ನಾವಿಕ ವ್ಯವಸ್ಥೆಯನ್ನು ರೂಪಿಸಿವೆ. ಇದು ಭಾರತಕ್ಕೆ ಪ್ರತಿಕೂಲ ಪರಿಸ್ಥಿತಿಯಲ್ಲೂ ನಾವಿಕ ವ್ಯವಸ್ಥೆಯ ಲಭ್ಯತೆಯನ್ನು ಒದಗಿಸಲಿದೆ.

ಅಮೆರಿಕ ಜಿಪಿಎಸ್ ವ್ಯವಸ್ಥೆ ಹೊಂದಿದ್ದರೆ, ರಷ್ಯಾ GLONASS (ಗ್ಲೋಬಲ್ ನಾವಿಗೇಶನ್ ಸ್ಯಾಟ ಲೈಟ್ ಸಿಸ್ಟಂ) ಎಂಬ ವ್ಯವಸ್ಥೆಯನ್ನು ಸ್ವಂತವಾಗಿ ಹೊಂದಿದೆ. ಚೀನ 'ಬೀಡೌ' (ಕಂಪಾಸ್ ಎಂಬ ಹೆಸರೂ ಇದೆ) ನಾವಿಕ ಉಪಗ್ರಹ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಹಾಗೂ ಐರೋಪ್ಯ ಒಕ್ಕೂಟ ತನ್ನ ಸ್ವಂತ ಉಪಯೋಗಕ್ಕಾಗಿ ಗೆಲಿಲಿಯೊ ಹೆಸರಿನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ. [ಇದನ್ನೂ ಓದಿ: ಜಿಪಿಎಸ್ ಎನ್ನುವ ರಸ್ತೆಮಾತುಗಾರ]

ಭಾರತದ ಈ ನಾವಿಕ ಉಪಗ್ರಹ ವ್ಯವಸ್ಥೆ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ, ತಾಂತ್ರಿಕ ಸಾಮರ್ಥ್ಯ ವೃದ್ಧಿಗೂ ನೆರವಾಗಲಿದೆ. ನಮ್ಮಲ್ಲಿ ಈಗಾಗಲೇ ಸಂಪರ್ಕ ಉಪಗ್ರಹಗಳಿವೆ. ನಾವಿಕ ಉಪಗ್ರಗಳು ಎರಡನೆಯ ಹೆಜ್ಜೆಯಾಗಿದೆ ಎಂದು ಇಸ್ರೋ ಪ್ರಧಾನ ವಕ್ತಾರ ದೇವಿಪ್ರಸಾದ್ ಕಾರ್ಣಿಕ್ ಹೇಳಿದ್ದಾರೆ.

IRNSS: ಐಆರ್ ಎನ್ ಎಸ್ ಎಸ್ 7 ಉಪಗ್ರಹಗಳನ್ನು ಒಳಗೊಂಡಿದೆ. ಸುಮಾರು 1,425 ಕೆಜಿ ತೂಗುವ ಉಪಗ್ರಹ ಭೂ ಸಮಾಂತರ ಕಕ್ಷೆಯಿಂದ ಸುಮಾರು 36,000 ಕಿ.ಮೀ ಎತ್ತರದಲ್ಲಿ ಕಾರ್ಯ ನಿರ್ವಹಿಸಲಿದೆ. ಭಾರತದ ಭೂ ಪ್ರದೇಶದ ಮೇಲೆ 20 ಮೀಗೂ ಹೆಚ್ಚು ದೂರದಿಂದ ನಿಖರ ಚಿತ್ರ ತೆಗೆಯುವ ಗುರಿ ಹೊಂದಿದೆ. ಭಾರತದ ಸುತ್ತಮುತ್ತ 1,500 ಕಿ.ಮೀ ವ್ಯಾಪ್ತಿಗೂ ಹರಡಲಿದೆ. IRNSS ಸುಮಾರು 1,420 ಕೋಟಿ ರು ವೆಚ್ಚದ ಯೋಜನೆಯಾಗಿದೆ. ದಿಕ್ಸೂಚಿ ಉಪಗ್ರಹ ಇನ್ನಷ್ಟು ಮಾಹಿತಿಗೆ ಕ್ಲಿಕ್ಕಿಸಿ

English summary
India on Monday night successfully launched the first of the seven satellites aimed at setting up an indigenous navigation system to provide accurate information about position to aircraft, ships and land vehicles. Even hikers will be benefitted by these satellites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X