ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಲ್ ಶುಲ್ಕ ಹೆಚ್ಚಿಸಿದ ನೈಸ್ ಸಂಸ್ಥೆ!

|
Google Oneindia Kannada News

Ashok Kheny
ಬೆಂಗಳೂರು, ಜು.1 : ನೈಸ್ ರಸ್ತೆಯ ಟೋಲ್ ಶುಲ್ಕ ದುಬಾರಿ ಎನ್ನುವ ವಾಹನ ಸವಾರರಿಗೆ ಕಹಿ ಸುದ್ದಿಯೊಂದು ಕಾದಿದೆ. ನೈಸ್ ಸಂಸ್ಥೆ ಜುಲೈ 1ರ ಸೋಮವಾರದಿಂದಲೇ ಜಾರಿಯಾಗುವಂತೆ ಟೋಲ್ ದರಗಳನ್ನು ಶೇ 10ರಷ್ಟು ಏರಿಕೆ ಮಾಡಿದೆ.

ಡೀಸೆಲ್ ಮತ್ತು ಇಂಧನದ ಬೆಲೆಗಳು ಹೆಚ್ಚಾಗಿರುವುದರಿಂದ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿರುವುದು ತುಂಬಾ ಕಡಿಮೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಷ್ಟು ಹೆಚ್ಚು : ಈಗಿರುವ ಟೋಲ್ ಶುಲ್ಕವೇ ದುಬಾರಿ ಎನ್ನುವವರಿಗೆ ಪರಿಷ್ಕೃತ ಶೇ 10ರಷ್ಟು ದರ ಏರಿಕೆಯಿಂದ ಅಸಮಾಧಾನ ಉಂಟಾಗಲಿದೆ. ಹೊಸೂರು ರಸ್ತೆ ಮತ್ತು ಬನ್ನೇರುಘಟ್ಟ ರಸ್ತೆ ಸಂಪರ್ಕಿಸುವ ರಸ್ತೆಗಳಲ್ಲಿ ಕಾರ್ ಗಳಿಗೆ 30 ರೂ. ಇದ್ದ ಶುಲ್ಕವನ್ನು 33ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಬನ್ನೇರುಘಟ್ಟ - ಕನಕಪುರ ರಸ್ತೆಯ 6.7 ಕಿ.ಮೀ.ಗೆ ಇದ್ದ 23 ರೂ. ಶುಲ್ಕವನ್ನು 26 ರೂ.ಗಳಿಗೆ ಏರಿಸಲಾಗಿದೆ. ಕನಕಪುರ - ಮೈಸೂರು ರಸ್ತೆಯ 9.5 ಕಿ.ಮೀ.ದೂರಕ್ಕೆ ಇದ್ದ 28 ರೂ.ಶುಲ್ಕವನ್ನು 32 ರೂ.ಗಳಿಗೆ ಏರಿಸಲಾಗಿದೆ.

ಮೈಸೂರು ಮತ್ತು ಮಾಗಡಿ ರಸ್ತೆಗೆ 33 ರೂ.ವಿದ್ದ ಶುಲ್ಕ ಪರಿಷ್ಕರಣೆ ನಂತರ, 36 ರೂಗಳಿಗೆ ಏರಿಕೆ ಯಾಗಿದೆ. ಮಾಗಡಿ - ತುಮಕೂರು 7.4 ಕಿ.ಮೀ ರಸ್ತೆಗೆ 25 ರೂ ಇದ್ದ ಶುಲ್ಕ 28 ರೂ ಆಗಿದೆ. ಕ್ಲೋವರ್ ಜಂಕ್ಷನ್ ಮತ್ತು ಪಿಇಎಸ್ ಕಾಲೇಜು ನಡುವಿನ 8.1 ಕಿ.ಮೀ ರಸ್ತೆಗೆ 28 ರಿಂದ 38 ರೂ. ಏರಿಕೆ ಮಾಡಲಾಗಿದೆ.

ನೂತನ ಶುಲ್ಕಗಳು ಇಂದಿನಿಂದಲೇ (ಜುಲೈ 1, ಸೋಮವಾರ) ಜಾರಿಗೆ ಬರಲಿದ್ದು, ನೈಸ್ ರಸ್ತೆಗೆ ಇಳಿಯುವ ಮುನ್ನ ಜೇಬನ್ನು ಒಮ್ಮೆ ಮುಟ್ಟಿ ನೋಡಿಕೊಳ್ಳಿ. ವಾಹನಗಳಿಗೆ ಅನುಗುಣವಾಗಿ ನೂತನ ದರಪಟ್ಟಿ ಕೆಳಗಿನಂತಿದೆ.

ಪರಿಷ್ಕೃತ ದರ ಪಟ್ಟಿ
ವಾಹನಗಳು ಕಾರು
ಬಸ್ಸು ಲಾರಿ ಲಘು ವಾಹನಗಳು
ದ್ವಿಚಕ್ರ ವಾಹನಗಳು
ಹೊಸೂರು ರಸ್ತೆ - ಬನ್ನೇರುಘಟ್ಟ 33 ರೂ
90 ರೂ
58 ರೂ
35 ರೂ
13 ರೂ
ಬನ್ನೇರುಘಟ್ಟ ರಸ್ತೆ - ಕನಕಪುರ ರಸ್ತೆ 26
70
45 27
10
ಕನಕಪುರ - ಮೈಸೂರು 32 85 55 32 13
ಮೈಸೂರು - ಮಾಗಡಿ 36 98 63 38 14
ಮಾಗಡಿ - ತಮಕೂರು 28 77 50 30 11
ಲಿಂಕ್ ರಸ್ತೆ - ಕ್ಲೋವರ್ ಜಂಕ್ಷನ್ 38 95 63 38 16
English summary
Nandi Infrastructure Corridor Enterprise (NICE) Ltd hike the road toll 10 per cent. it has effected from July 1, Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X