ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳ ಮೇಲೆ ಮಮತೆಯ ಕರೆಯೋಲೆ!

|
Google Oneindia Kannada News

ಮೇಘಸ್ಫೋಟದಿಂದ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಉತ್ತರಾಖಂಡ್ ರಾಜ್ಯದ ಜನರಿಗೆ ಎಷ್ಟು ನೆರವು ನೀಡಿದರೂ ಸಾಕಾಗುವುದಿಲ್ಲ. ಒಡಿಶಾ ರಾಜ್ಯದ ಪುರಿ ಸಮುದ್ರ ಕಿನಾರೆಯಲ್ಲಿ ಕಲಾವಿದನೊಬ್ಬ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಮರಳಿನ ಮೇಲೆ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದ.

ರಾಜಸ್ಥಾನದ ಜೋಧ್ ಪುರದಲ್ಲಿ ರಾಜಸ್ವ ಪರೀಕ್ಷೆ ಬರೆಯಲೆಂದು ಅಭ್ಯರ್ಥಿಗಳು ರೈಲಿನ ಮೇಲೆ ಕುಳಿತು ಸವಾರಿ ಹೊರಟಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಹೋಗುವುದು ಖಂಡಿತ.

ಜಾರ್ಖಂಡ್ ರಾಜ್ಯದಲ್ಲಿ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚಿಕ್ಕ ಪುಟ್ಟ ಗ್ರಾಮದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ. ಕುಮ್ಮಂಡಿ ಗ್ರಾಮದಲ್ಲಿ ಭದ್ರತಾ ಪಡೆಯವರು ಕಾರ್ಯವೈಖರಿ ಹೀಗಿತ್ತು.

ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ಕಶ್ಯಪ್, ಪಿ.ವಿ.ಸಿಂಧು ಮತ್ತು ಪಿ.ಗೋಪಿಚಂದ್ ಹೈದರಾಬಾದ್ ನಲ್ಲಿ ಕ್ಯಾಮಾರಾ ಕಣ್ಣಿಗೆ ಸೆರೆ ಸಿಕ್ಕರು. ಮುಂತಾದ ಚಿತ್ರಗಳು ಇಂದಿನ ಚಿತ್ರಸುದ್ದಿಗಳಲ್ಲಿ.

ಸಹಾಯ ಮಾಡಿ ಪ್ಲೀಸ್

ಸಹಾಯ ಮಾಡಿ ಪ್ಲೀಸ್

ಉತ್ತರಾಖಂಡ್ ಪ್ರವಾಹಕ್ಕೆ ಸಿಲುಕಿದ ಜನರಿಗೆ ನೆರವು ನೀಡಿ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಒಡಿಶಾ ರಾಜ್ಯದ ಪುರಿ ಬೀಚ್ ನಲ್ಲಿ Help flood victims ಎಂದು ಕಲಾವಿದನೊಬ್ಬಮರಳಿನ ಮೇಲೆ ಚಿತ್ರ ಬಿಡಿಸಿರುವುದು ಹೀಗೆ.

ಜೀವದ ಪರೀಕ್ಷೆ

ಜೀವದ ಪರೀಕ್ಷೆ

ರಾಜಸ್ಥಾನದ ಜೋಧ್ ಪುರದಲ್ಲಿ ರಾಜಸ್ವ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ರೈಲಿನ ಮೇಲೆ ಸಾಹಸ ಮಾಡಡಿಕೊಂಡು ಹೊರಟಿದ್ದು ಹೀಗೆ. ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಹೋಗುವುದು ಖಂಡಿತ. ಪರೀಕ್ಷೆ ಬರೆಯಲು ಜೀವದ ಪರೀಕ್ಷೆಯನ್ನು ಪಣಕ್ಕಿಟ್ಟಿದ್ದಾರೆ ವಿದ್ಯಾರ್ಥಿಗಳು.

ಭಾರತದ ಭರವಸೆಗಳು

ಭಾರತದ ಭರವಸೆಗಳು

ಭಾರತದ ಬ್ಯಾಡ್ಮಿಂಟ್ ನ್ ತಾರೆಗಳಾದ ಸೈನಾ ನೆಹ್ವಾಲ್, ಪಿ.ಕಶ್ಯಪ್, ಪಿ.ವಿ.ಸಿಂಧು ಮತ್ತು ಪಿ.ಗೋಪಿಚಂದ್ ಹೈದರಾಬಾದ್ ನಲ್ಲಿ ಆಲ್ ಇಂಡಿಯಾ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ಯಾಮರಾಗೆ ಒಟ್ಟಾಗಿ ಫೋನ್ ನೀಡಿದರು.

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಮಾಂಕಟೋ ನಗರದ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಕಟ್ಟಲು ಆದೆಷ್ಟು ದಿನಗಳನ್ನು ತೆಗೆದುಕೊಂಡಿದ್ದರೋ? ಆದರೆ, ಅದನ್ನು ಕೆಲವೇ ನಿಮಿಷದಲ್ಲಿ ಧ್ವಂಸಗೊಳಿಸಲಾಗಿದೆ. ಪಾರ್ಕಿಂಗ್ ಪ್ರದೇಶಕ್ಕೆ ಜಾಗ ಕಲ್ಪಿಸಲು ಕಟ್ಟಡವನ್ನು ಸ್ಪೋಟಕ ಬಳಿಸಿ ಕೆಡವಿದ್ದು ಹೀಗೆ.

ಯವರಾಜನ ಸಾಂತ್ವನ

ಯವರಾಜನ ಸಾಂತ್ವನ

ಉತ್ತರಾಖಂಡದ ಪ್ರವಾಹ ಸಂತ್ರಸ್ತರನ್ನು ರಕ್ಷಿಸಲು ತೆರಳಿದ್ದ ಹೆಲಿಕಾಪ್ಟರ್ ಪತನಕ್ಕೀಡಾಗಿ ಮೃತಪಟ್ಟ ಅಮೇಥಿ ಜಿಲ್ಲೆಯ ಯೋಧ ಅಖೀಲೇಶ್ ಮನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ, ಸಾಂತ್ವನ ಹೇಳಿದರು.

ಗುಂಡಿಗೆ ಎದೆಯೊಡ್ಡಿ

ಗುಂಡಿಗೆ ಎದೆಯೊಡ್ಡಿ

ಜಾರ್ಖಂಡ್ ರಾಜ್ಯದ ಲೇಥಾರ್ ಜಿಲ್ಲೆಯಲ್ಲಿ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿ ನಂತರ ಪ್ರತಿ ಗ್ರಾಮದಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕುಮಾಂಡಿ ಗ್ರಾಮದಲ್ಲಿ ಭದ್ರತಾ ಪಡೆಯವರು ಮಾವೋವಾದಿಗಳಿಗಾಗಿ ಕಾಯುತ್ತಿದ್ದಾಗ ಕಂಡಿದ್ದು ಹೀಗೆ.

ಇವತ್ತು ಕೋಪ ಬೇಡಪ್ಪ

ಇವತ್ತು ಕೋಪ ಬೇಡಪ್ಪ

ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿ ಕ್ರಿಕೆಟ್ ಪಂದ್ಯದ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಭಾನುವಾರ ರಾತ್ರಿ ನಡೆಯಲಿದೆ. ಎಲ್ಲರ ಕಣ್ಣು ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಲ್ ಮೇಲೆ ಬಿದ್ದಿದೆ. ಇಂದು ಮಾತ್ರ ಕೋಪ ಮಾಡಿಕೊಂಡು, ಭಾರತೀಯ ಬೌಲರ್ ಗಳನ್ನು ದಂಡಿಸಬೇಡ ಎಂದು ಭಾರತೀಯರು ಆಶಿಸುತ್ತಿದ್ದಾರೆ.

English summary
Todays News stories in Pics : A sand artist message Help flood victims, Security men, Aspirants risk and Many More interesting pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X